ವರದಿ : ರಾಜು ಮಹೇಂದ್ರ ಕರ ಸವದತ್ತಿ
ಮುನವಳ್ಳಿ ಪಟ್ಟಣದ ಕೊನೆಯ ದಿನದ ದುರ್ಗಾ ಮಾತಾ ದೌಡ ನಲ್ಲಿ ವೀರಯೋಧ ಬಾಗಿ
ಬೆಳಗಾವಿ ಅ. 11
ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ಪಟ್ಟಣದಲ್ಲಿ ನವರಾತ್ರಿ ನಿಮಿತ್ಯ ದುರ್ಗಾ ಮಾತಾ ದೌಡ್ ಶ್ರದ್ಧೆ ಭಕ್ತಿಯಿಂದ 9 ದಿನಗಳ ಅತಿ ವಿಜೃಂಭಣೆಯಿಂದ ಜರಗಿತು.
9ನೇ ದಿನದಂದು ವಿಶೇಷವಾಗಿ ನಮ್ಮ ಭಾರತಾಂಬೆಯ ಹೆಮ್ಮೆಯ ಮಡಿಲಲ್ಲಿ ಜನಿಸಿ ಇಂದು ಗಡಿನಾಡಿನಲ್ಲಿ ತಮ್ಮ ಸೇವೆಯನ್ನು ಮಾಡುತ್ತಾ ಜೀವನವನ್ನು ಪಣಕ್ಕಿಟ್ಟು ದೇಶದ ಜನರ ರಕ್ಷಣೆಗಾಗಿ ಮತ್ತು ನಮ್ಮ ಭಾರತ ದೇಶದ ದೇಶ ರಕ್ಷಣೆಗಾಗಿ ಒಂದು ಗುರಿಯನ್ನು ಇಟ್ಟುಕೊಂಡು ಸೈನಿಕರು ಹೋರಾಡುತ್ತಾರೆ ಅದರಲ್ಲಿ ಇಲ್ವೊಬ್ಬರು ತಾವು ಜನಿಸಿದ ಊರಿನಲ್ಲಿ ಮುನವಳ್ಳಿ ಹೆಮ್ಮೆಯ ಸೈನಿಕ ದುರ್ಗಾ ಮಾತಾ ದೌಡ ಕೊನೆ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶಕ್ಕೆ ಮಾದರಿಯಾಗಿದ್ದಾರೆ
ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಐತಿಹಾಸಿಕ ನಗರಿ ಮುನವಳ್ಳಿ ಪಟ್ಟಣದಲ್ಲಿ
ಮುನವಳ್ಳಿಯ ಪಟ್ಟಣದ ಯುವಕ ಯುವತಿಯರು ಹಾಗೂ ಚಿಕ್ಕ ಮಕ್ಕಳು ದುರ್ಗಾ ಮಾತಾ ದೌಡ್‌ನಲ್ಲಿ ಉತ್ಸಾಹದಿಂದ 9 ದಿನಗಳ ಕಾಲ ಪಾಲ್ಗೊಂಡಿದ್ದರು
ಯುವಕರು ಯುವತಿಯರು ಕೇಸರಿ ಧ್ವಜ ಹಿಡಿದು ಜಯಘೋಷ ಮೊಳಗಿಸುತ್ತ ಯುವಕರು ಮುಂದೆ ಸಾಗಿದರು.
ನೂರಾರು ಯುವಕರು ಹಾಗೂ ಚಿಕ್ಕ ಮಕ್ಕಳು ಮೊಳಗಿಸಿದ ಜೈ ಭವಾನಿ, ಜೈ ಶಿವಾಜಿ, ಜೈ ಶ್ರೀ ರಾಮ್ ಭಾರತ ಮಾತಾಕಿ ಜೈ ಎಂಬ ಜಯಘೋಷ ಸ್ಫೂರ್ತಿ ತುಂಬಿತು.
ಮುನವಳ್ಳಿಯ ಪಟ್ಟಣದ ನವರಾತ್ರಿ ನಿಮಿತ್ತ ಮೊದಲನೆಯ ದಿನದಿಂದ 9 ದಿನಗಳ ಕಾಲ ದುರ್ಗಾ ಮಾತ ದೌಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮುಖಾಂತರ ಶ್ರೀ ಅಂಬಾ ಭವಾನಿ ದೇವಸ್ಥಾನಕ್ಕೆ ಸಮಾರೋಪ ಮೆರವಣಿಗೆ ನಡೆಸಿದರು.