ಮರಳು ಲಭ್ಯತೆಯ ಸಮಸ್ಯೆ ತೀವ್ರತೆಯನ್ನು ಪಡೆದಿದುಕೊಂಡಿದೆ  ಜಿಲ್ಲಾಡಳಿತ ಜನ ಪ್ರತಿನಿದಿಗಳು ಪರ್ಯಾಯ ವ್ಯೆವಸ್ಥೆ ಕಲ್ಪಿಸಿಕೊಡಿ

ವರದಿ :ಲೋಕೇಶ್ ನಾಯ್ಕ್.ಭಟ್ಕಳ.

ಅ.10 ಭಟ್ಕಳ.
ಮರಳು ಲಭ್ಯತೆಯ ಸಮಸ್ಯೆ ತೀವ್ರತೆಯನ್ನು ಪಡೆದಿದು ಕೊಂಡಿದೆ  ಜಿಲ್ಲಾಡಳಿತ ಜನ ಪ್ರತಿನಿದಿಗಳು ಪರ್ಯಾಯ ವ್ಯೆವಸ್ಥೆ ಕಲ್ಪಿಸಿಕೊಡಿ.ಇಲ್ಲವೆಂದಲ್ಲಿ ಎಂಜಿನಿಯರ, ಗುತ್ತಿಗೆಗಾರರು, ಕಟ್ಟಡ ಕಾರ್ಮಿಕರ  ಅಸೋಸಿಯೇಷನ್ ಜೊತೆಗೂಡಿ ಬ್ರಹತ್ ಮುಷ್ಕರ ಹಮ್ಮಿಕೊಳ್ಳಲಾಗುವುದು. ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ನಾಯ್ಕ್.

ಅ.10, ಭಟ್ಕಳ
ಗುರುವಾರದಂದು ಇಂಜಿನಿಯರ್ ಹಾಗೂ ಅರ್ಕಿಟೆಕ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗೇಂದ್ರ ನಾಯ್ಕ್ ಭಟ್ಕಳದ ಹೋಟೆಲ್ ಅಮೀನಾ ಪ್ಯಾಲೇಸ್ ಸಭಾ ಗ್ರಹ ದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಭಟ್ಕಳ ತಾಲ್ಲೂಕಿನಲ್ಲಿ ಈ ಹಿಂದೆಯೂ ಕೂಡ ಮರಳಿನ ಸಮಸ್ಯೆ ಇತ್ತು ಪರ ಜಿಲ್ಲೆಯಿಂದ ಮರಳು ಭಟ್ಕಳಕ್ಕೆ ಬರುತ್ತಿತ್ತು. ಆದರೆ ಕಳೆದ 2-3 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ ಶರಾವತಿ ನದಿ ಆದರೆಯ ದಿಬ್ಬ ಗಳಿಂದ ಮರಳು ಸರಬರಾಜಿಗೆ ಸರಕಾರದ ಪರವಾನಿಗೆ ಪಡೆದವರಿಂದ ಮರಳು ಪಡೆಯುತ್ತಿದ್ದೆವು, ಈಗ ಮರಳಿನ ಲಭ್ಯತೆಯ ಸಮಸ್ಯೆ ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.ಭಟ್ಕಳ ನಗರ ಭಾಗಗಳಲ್ಲಿ, ಗ್ರಾಮಾಂತರ ಭಾಗಗಳಲ್ಲಿ,ಚರಂಡಿ ಕಟ್ಟಡ, ಕಾಂಕ್ರೀಟ್ ರಸ್ತೆ, ದುರಸ್ಥಿ ಕಾಮಗಾರಿಗಳು ನಡೆಯದೆ, ಸ್ತಬ್ದ ವಾಗಿದೆ.

ಕಟ್ಟಡ, ರಸ್ತೆ ಚರಂಡಿಗಳ  ಕಾಮಗಾರಿಗಳು ಸಂಪೂರ್ಣ ಸ್ಥಗಿತ ಗೊಂಡಿದ್ದಲ್ಲದೆ  ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬ ದಿನಗುಲಿ ಕೆಲಸಗಾರರು, ಕಟ್ಟಡ ಕಾರ್ಮಿಕರು,ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಬಡವರ ಮನೆಗಳು ದೇವಾಲಯಗಳ  ನಿರ್ಮಾಣದ ಹಂತ ಅರ್ಧದಲ್ಲೇ ನಿಂತಿದ್ದು ಕಾಮಗಾರಿ ಪಡೆದ ಎಂಜಿನಿಯರ್, ಗುತ್ತಿಗೆದಾರರು ಆರ್ಕಿಟೆಕ್ ರವರಿಗೆ ಆರ್ಥಿಕ ಅಸ್ತಿರತೆ ಉಂಟಾಗಿದೆ.ಈ ಎಲ್ಲ ಅಂಶ ಗಳನ್ನು ಮನಗೊಂಡು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ ಬಾಗದಿಂದ ಮರಳು ಮಾತ್ತ್ರ ಅಲ್ಲದೆ ಪಕ್ಕದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕುಂದಾಪುರ  ಭಾಗದಿಂದಲೂ ಮರಳನ್ನು ಭಟ್ಕಳ ತಾಲೂಕಿಗೆ ಸರಬರಾಜು ಮಾಡುವ ವ್ಯೆವಸ್ಥೆ ಕಲ್ಪಿಸುವಂತೆ, ಮತ್ತು ಈ ವಿಚಾರವಾಗಿ ಕ್ಷೇತ್ರದ  ಶಾಸಕರು, ಸಚಿವರು  ಜಿಲ್ಲಾಡಳಿತ  ಜನಪ್ರತಿನಿಧಿಗಳು  ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು. ವಿಳಂಬದ ಹಂತ ಕೇರಿದರೆ ತಾಲ್ಲೂಕಿನ ಎಂಜಿನಿಯರ್ ಅಸೋಸಿಯೇಷನ್, ಆರ್ಕೆಟೆಕ್ ಗುತ್ತಿಗೆದಾರರ ಸಂಘಟನೆ, ಕಾರ್ಮಿಕರ ಸಂಘಟನೆ, ಆರ್ಕಿಟೆಕ್ ತ ಕಾರ್ಮಿಕ ಸಂಘಟನೆ ಗಳಿಂದ ಬ್ರಹತ್ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿರಾಜುದ್ದಿನ್ ಮವ್ವನ್ ರಶೀದ್, ಕಾರ್ಯದರ್ಶಿ ಸುರೇಶ ಪೂಜಾರಿ,ಐಮಾನ್ ದಾತಾ,ಉಮರ್ ಮಿಸ್ಬಾ, ಮೊಹಮ್ಮದ್ ಸುರೇಮ್ ಮತ್ತಿತರರು ಉಪಸ್ಥಿತರಿದ್ದರು.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್‌ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ವರದಿ: ಲೋಕೇಶ್ ನಾಯ್ಕ.ಭಟ್ಕಳ. ನಟ ಡಾಲಿ ಧನಂಜಯ  ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್. ಭಟ್ಕಳ: ನ.23ಮುರುಡೇಶ್ವರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ(ಮತ್ರ್ಯಮೇಳ) ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ ಡಾಲಿ ಧನ ಧನಂಜಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬ್ ಡೈವಿಂಗ್ ಮಾಡುವ…

    You Missed

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ