ವರದಿ: ಆರತಿ ಗಿಳಿಯಾರು
ನೌಕರರ ಬೇಡಿಕೆ ಈಡೇರಿಸದ ಸರಕಾರಕ್ಕೆ ಚೆಲ್ಲಾಟ ರಾಜ್ಯದ ನೌಕರರು ಹಾಗೂ ಜನತೆಗೆ ಪ್ರಾಣ ಸಂಕಟ…!
ಉಡುಪಿ : ಅ.8
ಜಿಲ್ಲೆಯಲ್ಲಿ ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಕ್ಟೋಬರ್ ಏಳರಿಂದ ಪ್ರಾರಂಭವಾದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಾರಂಭವಾಗಿರುವ ಅನಿರ್ದಿಷ್ಟ ಹೋರಾಟದಿಂದ ಇಲಾಖೆ ಅಧಿಕಾರಿಗಳ ಹಾಗೂ ರಾಜ್ಯ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಉಂಟಾಗಿದ್ದು ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ಪ್ರಾರಂಭವಾಗಿರುವ ಅನಿರ್ದಿಷ್ಟ ಹೋರಾಟದಿಂದ, ಇಲಾಖೆ ಅಧಿಕಾರಿಗಳು ಹಾಗೂ ಸರಕಾರದ ಮೇಲೆ ಸಾಕಷ್ಟು ಒತ್ತಡ ಉಂಟಾಗುತ್ತಿದ್ದು, ಬೇಡಿಕೆ ಈಡೇರಿಸುವವರಿಗೆ ಹೋರಾಟ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಈಗಾಗಲೇ ನೌಕರರು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು
ಹೋರಾಟವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸರ್ಕಾರ ಮತ್ತು ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ 2 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಸೇವೆಯನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದು ಈಗ ಅಕ್ಟೋಬರ್ 7ರಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಎದುರುಗಡೆ ಮುಷ್ಕರವನ್ನು ಕೈಗೊಂಡಿದ್ದರಿಂದ ಮುಷ್ಕರದ ತೀವ್ರತೆ ಹೆಚ್ಚಾಗಿದ್ದು ಇದರ ಬಿಸಿ ತಾಪ ಜಿಲ್ಲೆ ಜಿಲ್ಲೆಯ ಜನರ ಮೇಲೆ ತಟ್ಟಿರುವುದು ಸತ್ಯ.
ಹೋರಾಟದ ಬಿಸಿ ತಟ್ಟುತ್ತಿದ್ದಾಗೆ ಜನಪ್ರತಿನಿಧಿಗಳಾದ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನಪರಿಷತ್ ಸಂಸದರಾದ ಮಂಜುನಾಥ್ ಭಂಡಾರಿ, ಉಡುಪಿ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಕುಂದಾಪುರ ಕ್ಷೇತ್ರದ ಶಾಸಕರಾದ ಕಿರಣ್ ಕೊಡ್ಗಿ, ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಇವರುಗಳು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ನೌಕರರನ್ನು ಉದ್ದೇಶಿಸಿ ಮಾತನಾಡಿದ ಸಂಸದರು ಪಂಚಾಯತ್ ಚಟುವಟಿಕೆಗಳು ಸ್ತಬ್ಧವಾಗಿದ್ದು ನೀವು ಕೊಟ್ಟಿರುವ ಮನವಿಯಲ್ಲಿ ನಿಮ್ಮ ಬೇಡಿಕೆಯನ್ನು ಪರಿಶೀಲನೆ ಮಾಡಿದ್ದೇನೆ. ಮಂತ್ರಿಗಳಾದ ಪ್ರಿಯಾಂಕಾ ಖರ್ಗೆಯವರ ಜೊತೆ ಮಾತನಾಡುತ್ತೇನೆ ಹೋರಾಟವನ್ನು ಕೈ ಬಿಟ್ಟು ಸಕ್ರಿಯವಾಗಿ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನೌಕರರನ್ನು ಕೇಳಿಕೊಂಡಿರುತ್ತಾರೆ. ಇದರ ಜೊತೆಯಲ್ಲಿ ಪತ್ರಿಕ ಮಾಧ್ಯಮದವರು ಸಂಸದವರನ್ನು ಉದ್ದೇಶಿಸಿ ನೌಕರರ ಬೇಡಿಕೆ 30 ವರ್ಷಗಳದ್ದಾಗಿದ್ದು ಕಳೆದ ಬಾರಿ ನಿಮ್ಮ ಸರ್ಕಾರ ಇದ್ದಾಗ ಈ ಬೇಡಿಕೆಯನ್ನು ಈಡೇರಿಸಬಹುದಿತ್ತು ಈಡೇರಿಸದೆ ಇರುವ ಕಾರಣವೇನು? ಎಂದು ಕೇಳಿರುತ್ತಾರೆ ಆಗ ಸಂಸದರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ನುಣುಚಿ ಕೊಂಡು ಬುದ್ದಿವಂತಿಕೆ ಪ್ರದರ್ಶನ ಮಾಡಿ ನೌಕರರ ಎದುರುಗಡೆ ಬೇಡಿಕೆ ಈಡೇರಿಸುತ್ತೇವೆ ಎನ್ನುವ ಭರವಸೆಯನ್ನು ನೀಡಿರುತ್ತಾರೆ. 30 ವರ್ಷದಿಂದಲೂ ನೌಕರರ ಬೇಡಿಕೆ ಇದ್ದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮ ಬೇಡಿಕೆಯನ್ನು ಈಡೇರಿಸದೆ ಇರುವಾಗ ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಇಲ್ಲದಿರುವಾಗ ನಮ್ಮ ಬೇಡಿಕೆ ಹೇಗೆ ಈಡೇರುತ್ತದೆ ಎಂಬ ಗೊಂದಲಕ್ಕೆ ಒಳಗಾಗಿ ನೌಕರರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.
ನೌಕರರ ಬೇಡಿಕೆಯು ನ್ಯಾಯಯುತವಾಗಿದ್ದು ಅವರ ಹಾಗೂ ಅವರ ಕುಟುಂಬದ ಮತ್ತು ಜನ ಹಿತ ದೃಷ್ಟಿಯನ್ನು ಮನಗೊಂಡು ಕೂಡಲೇ ಗ್ರಾಮ ಪಂಚಾಯಿತಿ ಮಟ್ಟದ ನೌಕರರ ಬೇಡಿಕೆಯನ್ನು ಈಡೇರಿಸಿ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಇದು ಒಂದು ಯೋಜನೆಯಾಗಿ ರೂಪಿಸಿ ಕಾಂಗ್ರೆಸ್ ಸರ್ಕಾರ ಜನಪರ ಸರ್ಕಾರ ಎನ್ನುವುದನ್ನು ನಿರೂಪಿಸಿ ರಾಜ್ಯದ ಜನತೆಗೂ ಹಾಗೂ ನೌಕರರಿಗೂ ಸಹಕರಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಯಾವುದೇ ಸಭೆ ಸಮಾರಂಭ ಇನ್ನಿತರ, ತರಬೇತಿ, ಇಲಾಖೆಯ ಸಂಪರ್ಕ ಕಲ್ಪಿಸುವ ಯಾವೊಂದು ಕೆಲಸವನ್ನು ನಿರ್ವಹಿಸುದಿಲ್ಲ, ಅಲ್ಲದೆ
ಜಿಲ್ಲೆಯ ಎಲ್ಲಾ ನೌಕರರು ಸಿಬ್ಬಂದಿ ವರ್ಗ ಸದಸ್ಯರು, ಕಡ್ಡಾಯವಾಗಿ ಹೋರಾಟದಲ್ಲಿ ಭಾಗವಹಿಸಿ
ಹೋರಾಟದ ಕುರಿತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಹಕಾರ ಪಡೆಯುವ ನಿಟ್ಟಿನಲ್ಲಿ
ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಸಂಪರ್ಕದಲ್ಲಿದ್ದು ಪ್ರಚರಪಡಿಸುವುದರ ಜೊತೆಗೆ
ಬೇರೆ ಬೇರೆ ಸಂಘಟನೆಗಳ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ಬೆಂಬಲವನ್ನು ಪಡೆಯುವುದು ಗ್ರಾಮಗಳಲ್ಲಿ ಸೇವೆಗಳು ವ್ಯತಯವಾಗಿದ್ದು ಈ ಕುರಿತು ಸಾರ್ವಜನಿಕರಿಂದ ಸಹಕಾರ ಪಡೆದು ಸರ್ಕಾರ ಆರ್ ಡಿ ಪಿ ಆರ್ ಕುಟುಂಬದ ಬೇಡಿಕೆಗಳನ್ನು ಈಡೇರಿಸುವಂತೆ ಹೇಳಿಕೆಗಳನ್ನು ಕೊಡಿಸುವುದರ ಜೊತೆಗೆ ಸ್ಥಳೀಯ, ಸಚಿವರು, ಸಂಸದರು, ಶಾಸಕರು ವಿಧಾನ ಪರಿಷತ್ ಸದಸ್ಯರುಗಳು ಹೋರಾಟ ಸ್ಥಳಕ್ಕೆ ಬರುವಂತೆ ಎಲ್ಲಾ ರೀತಿಯಲ್ಲೂ ಹೋರಾಟದ ಕಿಚ್ಚನ್ನು ಹಕ್ಕಿಸುವುದರ ಮೂಲಕ ತಮ್ಮ ಅಕ್ರೋಶವನ್ನು ಹೊರಹಾಕಿದ್ದಾರೆ.
ಸಿಇಓ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಇಲಾಖೆಗೆ ಒತ್ತಡವಾಗಿದ್ದು ಹೋರಾಟವನ್ನು ಶಾಂತಿಯುತವಾಗಿ, ತಾಳ್ಮೆಯಿಂದ, ಅಹಿತಕರ ಘಟನೆ ನಡೆಯದಂತೆ ಶಿಸ್ತು ಪಾಲನೆ ಮಾಡುವುದರ ಜೊತೆಗೆ ಎಲ್ಲಾ ವೃಂದ ಸಂಘಗಳನ್ನು ಹಾಗೂ ಸದಸ್ಯರ ಒಕ್ಕೂಟವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಕ್ಕೆ ಹೇಳಿಕೆ ಕೊಡುವಾಗ ಸರ್ಕಾರಕ್ಕೆ ಮುಜುಗುರುವಾಗುವ ಹಾಗೂ ಯಾವುದೇ ವ್ಯಕ್ತಿಗೆ ಧಕ್ಕೆಯಾಗುವ ರೀತಿ ಹೇಳಿಕೆಗಳನ್ನು ನೀಡದೆ ನೌಕರರು ಕರ್ತವ್ಯ ಮೆರೆದಿದ್ದಾರೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರುಗಳ , ಪದಾಧಿಕಾರಿಗಳು ಬೆಂಬಲಿಸುವಂತೆ ನೋಡಿಕೊಳ್ಳುವುದರ ಜೊತೆಗೆ ಹೋರಾಟದ ಸ್ಥಳದಲ್ಲಿ ಕುಡಿಯುವ ನೀರು, ನೆರಳು ‘ಅಲ್ಫೋಪಹಾರ, ವ್ಯವಸ್ಥೆಯನ್ನು ಜಿಲ್ಲಾ ಸಮಿತಿಗಳು ಕೈಗೊಂಡಿತ್ತು.
ಬೆಳಗ್ಗೆ 11 ಗಂಟೆಗೆ ಹೋರಾಟ ನಾಡ ಗೀತೆಯೊಂದಿಗೆ ಪ್ರಾರಂಭಿಸಿ ಸಂಜೆ 5:00ಗೆ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಿದರು.