ವರದಿಗಾರರ : ಆರತಿ ಗಿಳಿಯಾರು
ಉಡುಪಿ : ಅ.8
ನಮ್ಮ ಉಡುಪಿ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ನೆನಪಾದಾಗಲೆಲ್ಲ ನಮ್ಮ ಹೆಮ್ಮೆಯ ಕವಿ ಶಿವರಾಮ ಕಾರಂತರ ಕೆಲವೊಂದು ವಿಡಿಯೋಗಳು ಅಪರೂಪಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನೋಡುವುದೇ ಒಂದು ಚಂದವಾಗಿದೆ
ಅದನ್ನು ನೋಡಿದಾಗ ಅವರ ಸವಿನೆನಪು ನಮ್ಮ ಉಡುಪಿ ಭಾಗದಲ್ಲಿ ಎಲ್ಲರಿಗೂ ಹಾಗೆ ಯಕ್ಷಗಾನ ಕಲೆ ಎಂದಾಗ ನೆನಪಾಗುವುದೇ ನಮ್ಮ ಶಿವರಾಮ ಕಾರಂತರು.
ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟಾದಲ್ಲಿ 1902 ರಲ್ಲಿ ಅಕ್ಟೋಬರ್ 10ರಂದು ಜನಿಸಿದರು. ಅವರ ತಂದೆ ಶೇಷ ಕಾರಂತ್ ಹಾಗೂ ತಾಯಿ ಲಕ್ಷ್ಮಮ್ಮ. ಶಿವರಾಂ ಕಾರಂತರು ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕರು, ವೈಜ್ಞಾನಿಕ ಬರಹಗಾರರಾಗಿದ್ದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ ಇವರು ಯಕ್ಷಗಾನ ಪ್ರಿಯರಾಗಿದ್ದು ಈ ಕಲೆಯನ್ನು ದೇಶ ವಿದೇಶಗಳಿಗೂ ಪರಿಚಯಿಸಿದ ಕೀರ್ತಿ ಇವರದ್ದಾಗಿದೆ.
1925ರಲ್ಲಿ ವಸಂತ ಪತ್ರಿಕೆ ಹಾಗೂ 1950ರಲ್ಲಿ ವಿಚಾರವಾದಿ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.
ಅಲ್ಲದೆ ಸ್ವದೇಶಭಿಮಾನಿ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು.
ಅವರ ಪ್ರಸಿದ್ಧ ಕೃತಿಗಳಲ್ಲಿ ಚೋಮನದುತಿ, ಮರಳಿ ಮಣ್ಣಿಗೆ,ಒಂಟಿ ಧ್ವನಿ, ಯಕ್ಷಗಾನ ಬಯಲಾಟ, ಇನ್ನೂ ಮುಂತಾದ ಕೃತಿಗಳಿದ್ದು ಅವರಿಗೆ ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪಂಪ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಅನೇಕ ಪ್ರಶಸ್ತಿಗಳು ಸಂದಿವೆ.
ಕಡಲ ತೀರ ಭಾರ್ಗವ ಜಂಗಮ ವಿಶ್ವಕೋಶ ನಡೆದಾಡುವ ವಿಶ್ವಕೋಶ ಎಂದೇ ಪ್ರಸಿದ್ಧರಾಗಿದ್ದರು.
ಕನ್ನಡಕ್ಕೆ ಮೂರನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಅವರು 9 ಡಿಸೆಂಬರ್ 1997ರಲ್ಲಿ ನಿಧನ ಹೊಂದಿದರು.