ಭಟ್ಕಳ ಸೆ,4 ಸಂಜೆ. ತಾಲೂಕಿನ ಲಲಿತ ಶಾನಭಾಗ ಕಲಾಮಂಟಪದಲ್ಲಿ ಬುಧವಾರ ಸಂಜೆ ಗಜಾನನ ಗಣಪತಿ ಕೊಲ್ಲೆ ರಾಯ್ಕರ್ ಪೌಂಡೆಷನ್ ವತಿಯಿಂದ ಜಿಲ್ಲಾ ದೈವಜ್ಞ ಬ್ರಾಹ್ಮಣ ಸಮಾಜದ 2021-22, 2022-23, 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರವೀಂದ್ರ ಜಿ ಕೊಲ್ಲೆ ” ನಮ್ಮಲ್ಲಿ ಕೆಲವರು ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡುತ್ತಾರೆ ಆದರೆ ಕನ್ನಡ ಮಾಧ್ಯಮದಲ್ಲಿ ಓದಿ ಜೀವನದಲ್ಲಿ ಉತ್ತಮ ಸಾಧನೆ ಮಾಡಿದ ವಿಧ್ಯಾರ್ಥಿಗಳು ವಿಶೇಷವಾಗಿ ಕಾಣಿಸುತ್ತಾರೆ. ಅಂತಹ ವಿದ್ಯಾರ್ಥಿಗಳು ನಿಜಕ್ಕೂ ಅಭಿನಂದನಾರ್ಹರು.
ವಿದ್ಯೆಯನ್ನು ಅಪಹರಿಸಲು ಯಾರಿಂದಲೂ ಸಾಧ್ಯವಾಗದು. ಹಾಲಿ ಸರ್ಕಾರ ನೀಡುವ ಉಚಿತ ಕೊಡಗೆಗಳನ್ನು ಕಟುವಾಗಿ ಟೀಕಿಸಿ ಮಾತನಾಡಿದ ಅವರು ಇನ್ನೂ ಏಷ್ಟು ವರ್ಷಗಳ ಕಾಲ ನಾವು ಸರ್ಕಾರದ ಉಚಿತ ಸೌಲಭ್ಯಮನ್ನು ಪಡೆದು ಬದುಕು ನಡೆಸಬೇಕು. ನಮ್ಮ ಸಮಾಜದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಜನರು ಹಣಕಾಸಿನಲ್ಲಿ ಸ್ಥಿತಿವಂತರಾಗಿದ್ದು ಉಳ್ಳವರು ಉಚಿತ ಯೋಜನೆಗಳನ್ನು ತಿರಸ್ಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಸುರೇಶ ನಾಯಕ, ರಮೇಶ ಖಾರ್ವಿ, ರಾಜೇಶ ನಾಯಕ, ರಾಹುಲ್ ಕೊಲ್ಲೆ
ರೂಪ ಖಾರ್ವಿ ಇನ್ನಿತರರು ಇದ್ದರು.
ಲೋಕೇಶ್ ನಾಯ್ಕ್ ನಾಯ್ಕ, ಭಟ್ಕಳ