ಭಟ್ಕಳ : ದಿ.3. ಯುರೋಪಿನ ಹಂಗೇರಿಯಲ್ಲಿ 7 ರಿಂದ 9 ವರ್ಷದ ವಯೋಮಿತಿಯ 18 ಕೆಜಿ ಒಳಗಿನ ವಿಭಾಗಕ್ಕೆ ನಡೆದ
ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ -2024 ಹಂಗೇರಿಯ ಬುಡಾಪೆಸ್ಟ್ ನಲ್ಲಿ ಅಗಸ್ಟ್ 23 ರಿಂದ ಸಪ್ಟೆಂಬರ್ 1 ರ ತನಕ ನಡೆದಿತ್ತು.
“ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್”
ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಟ್ಕಳ ತಾಲೂಕಿನ ಮುಂಡಳ್ಳಿಯ ಧನ್ವಿತಾ ವಾಸು ಮೊಗೇರ. ಮತ್ತು ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದ ಕಾರವಾರದ ಅವನಿ ಸೂರಜ್ ರಾವ್ ಇಂದು ಮದ್ಯಾಹ್ನ ತವರಿಗೆ ಮರಳಿದ್ದು. ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಚಿನ್ನ ಮತ್ತು ಬೆಳ್ಳಿ ವಿಜೇತ ಪುಟಾಣಿ ಗಳಿಗೆ ಹಾಗೂ ತರಬೇತಿ ನೀಡಿದ ನಾಗಶ್ರೀ ನಾಯ್ಕ್ ರವರಿಗೆ ಅದ್ಧೂರಿ ಸ್ವಾಗತ ದೊರೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ನೌಕರ ಸಂಘದ ಅಧ್ಯಕ್ಷ ಮೊಹನ ನಾಯ್ಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳು ಮಾಡಿದ ಸಾಧನೆ ಭಟ್ಕಳ ತಾಲೂಕಿನಲ್ಲೇ ಇತಿಹಾಸ ನಿರ್ಮಿಸಿದಂತಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಸಾಧಕರಿಗೆ ತರಬೇತಿ ನೀಡಿದ ಕೋಚ್ ನಾಗಶ್ರೀ ನಾಯ್ಕ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ಸಣ್ಣ ವಿಚಾರವಲ್ಲ. ಇಂದು ಇಬ್ಬರು ಪುಟಾಣಿಗಳು ಈ ಸಾಧನೆ ಮಾಡುವ ಮೂಲಕ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಮುಂಬರುವ ದಿನಗಳಲ್ಲಿ ಈ ಮಕ್ಕಳು ಒಲಂಪಿಕ್ಸ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್ ನಾಯ್ಕ ಹೇಳಿದರು.
ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಪಕ್ಷದ ಮುಖಂಡರುಗಳು,ಪದಕ ವಿಜೇತ ಮಕ್ಕಳಿಗೆ ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು. ತಂಡದ ಕೋಚ್ ನಾಗಶ್ರೀ ಸೇರಿದಂತೆ ಧನ್ವಿತಾ ಮೊಗೇರ, ಅವನಿ ಸೂರಜ್ ರಾವ್ ರನ್ನು ರೈಲ್ವೆ ನಿಲ್ದಾಣದದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಭಟ್ಕಳ ಮುಖ್ಯ ವ್ರತ್ತ್ ಮತ್ತು ವಿದ್ಯಾಭ್ಯಾಸ ಮಾಡಿತ್ತಿ ರುವ ಆನಂದ್ ಆಶ್ರಮ ಕೊನ್ವೆಂಟ್ ಶಾಲೆಗೆ ತೆರಳಿ ಆಡಳಿತ ಮಂಡಳಿಯಿಂದ ಸನ್ಮಾನಿಸಲ್ಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಭಟ್ಕಳದ ತಾಲೂಕಾ ಮಂಡಳ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಈಶ್ವರ ನಾಯ್ಕ, ಅಶೋಕ ನಾಯ್ಕ, ವೆಂಕಟೇಶ ಮೊಗೇರ, ನಾಗಪ್ಪ ನಾಯ್ಕ, ಪ್ರಕಾಶ ಶಿರಾಲಿ, ಭಾಸ್ಕರ ಮೊಗೇರ ಮತ್ತಿತರರು ಇದ್ದರು.
ವರದಿ :ಲೋಕೇಶ್ ನಾಯ್ಕ. ಭಟ್ಕಳ.
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…