ಭಟ್ಕಳ : ದಿ.ಸೆ.2.ಕಳೆದ ಎರಡು ವರ್ಷಗಳಿಂದ ನಾಲ್ಕು ಬಾರಿ ಕ್ರಿಯಾ ಯೋಜನೆ ಮಾಡಲಾಗಿದ್ದು, ನಾಲ್ಕು ಕೋಟಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಆದರೆ ಬಿಜೆಪಿ ಸದಸ್ಯರಿರುವ ವಾರ್ಡ್ ಗಳಿಗೆ ಮಾತ್ರ ಬಿಡಿಗಾಸು ಅನುದಾನ ಒದಗಿಸದೆ ಅಧಿಕಾರಿಗಳು ತಾರತಮ್ಯದ ದೊರಣೆಯನ್ನು ತಾಳುತ್ತಿದ್ದಾರೆ ಎಂದು ಜಾಲಿ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ನಾಯ್ಕ ಆರೋಪಿಸಿದರು.
ಭಟ್ಕಳದ ಜಾಲಿ ಪಟ್ಟಣ ಪಂಚಾಯತ್ ಅನುದಾನ ಹಂಚಿಕೆಯಲ್ಲಾದ ತಾರತಮ್ಯ ನೀತಿಯನ್ನು ಖಂಡಿಸಿ ಪಟ್ಟಣ ಪಂಚಾಯತ್ ಕಛೇರಿಯಲ್ಲಿ ಅಹೋರಾತ್ರಿ ಧರಣಿ ಕೈಗೊಂಡು ಮಾತನಾಡಿದ ಅವರು ಬಿಡುಗಡೆಗೊಂಡಿರುವ ಸುಮಾರು ಎರಡು ಕೋಟಿ ರೂಪಾಯಿ ಅನುದಾನದಲ್ಲಿ ಕೆಲವು ವಾರ್ಡಗಳಿಗೆ ಮೂವತ್ತರಿಂದ ನಲವತ್ತು ಲಕ್ಷ ಅನುದಾನವನ್ನು ಒದಗಿಸಲಾಗಿದೆ, ಆದರೆ ಬಿಜೆಪಿ ಸದಸ್ಯರಿರುವ ದೇವಿನಗರ ವಾರ್ಡ ನಂ 9, ಕಾರ್ಗದ್ದೆ ವಾರ್ಡ ನಂ 2, ಜಾಲಿ ದೊಡ್ಡಮನೆ ವಾರ್ಡ ನಂ 8 ಕ್ಕೆ ಯಾವುದೇ ಅನುದಾನವನ್ನು ಒದಗಿಸಿಲ್ಲ.
ಈ ಕುರಿತಾಗಿ ತಹಶಿಲ್ದಾರರಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಬೆಳಿಗ್ಗೆ ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ತರ್ತು ಸಭೆಯನ್ನು ಕರೆಯಲಾಗಿತ್ತು ಆಗ ಈ ವಿಷಯದ ಕುರಿತು ಪ್ರಸ್ಥಾಪಿಸಿದಾಗ ತಜಿಂ ಬೆಂಬಲಿತ ಪಕ್ಷೇತರ ಸದಸ್ಯರು ಸೇರಿದಂತೆ ಕಾಂಗ್ರೇಸ್ ಪಕ್ಷದ ಸದಸ್ಯರು ಬಿಜೆಪಿ ಸದಸ್ಯರಿರುವ ವಾರ್ಡ್ ಗಳಿಗೆ ಅನುದಾನವನ್ನು ಒದಗಿಸಕೊಡಕೂಡದು ಎಂದು ಹೇಳುತ್ತಿದ್ದಾರೆ.
ಇದರಲ್ಲಿ ಯಾವ ಸಾಮಾಜಿಕ ನ್ಯಾಯವಿದೆ. ಅಧಿಕಾರಿಗಳು ಇದಕ್ಕೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಧರಣಿ ತಿವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರು.
ಪ್ರತಿಭಟನೆಯಲ್ಲಿ ದಯಾನಂದ ನಾಯ್ಕ, ವೆಂಕಟೇಶ ನಾಯ್ಕ, ಈಶ್ವರ ಹುರುಳಿಸಾಲ, ಬಾಬು ನಾಯ್ಕ ಮತ್ತಿತರರು ಇದ್ದರು.
ವರದಿ :ಲೋಕೇಶ್ ನಾಯ್ಕ್.ಭಟ್ಕಳ.