ಭಟ್ಕಳ : ದಿ.31 ಶನಿವಾರ.
ರಾಜ್ಯ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಂಕಾಳ್ ವೈದ್ಯರವರು ತಾಲೂಕಾ ಪಂಚಾಯಿತ್ ಆವಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಸಮಿತಿಯ ತಾಲೂಕಾ ಕಛೇರಿ ಯನ್ನ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊoಡ ಸಚಿವರು
ಪ್ರತಿ ತಾಲ್ಲೂಕಿನ ಪಂಚ್ ಗ್ಯಾರಂಟಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ್ ಗೊಳಿಸಲು ಮೇಲ್ವಿಚಾರಣೆಗಾಗಿ ಈ ಕಚೇರಿ ಯನ್ನು ಉದ್ಘಾಟಿಲಾಗಿದೆ. ಪ್ರಯೋಜನಯನ್ನ ಪ್ರತಿಯೊಂದು ಮನೆಮನೆಗೆ ತಲುಪಿಸಿ ತಾಲೂಕಿನ ಕಟ್ಟ ಕಡೆಯ ವ್ಯೆಕ್ತಿಗೂ ಸರ್ಕಾರದ ಮಹಾತ್ಕಾಕಾಂಕ್ಷೆಯ ಪಂಚ್ ಗ್ಯಾರಂಟಿ ತಲುಪಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಪರಿಣಾಮಕಾರಿ ಅನುಷ್ಠಾನ ಮಾಡುವ ಸಲುವಾಗಿ ಕಛೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸಹಿತವಾಗಿ ಹದಿನೈದು ಜನರ ಸಮೀತಿ ಇರಲಿದ್ದು, ಸಾರ್ವಜನಿಕರಿಗೆ ಲಭ್ಯರಿರಲಿದ್ದಾರೆ.
ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಕೂಡಾ ಸುದೀರ್ಘವಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಈ ಸಮೀತಿಯ ಮೆಲುಸ್ತುವಾರಿಯನ್ನು ತಾಲೂಕಾ ಮಟ್ಟದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಹೊಂದಿರುತ್ತಾರೆ ಎಂದು ಹೇಳಿದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಬಡವರು, ನಿರ್ಗತಿಕರಿಗಾಗಿ ತಂದಿದ್ದು. ಉಳ್ಳವರು ಯೋಜನೆಯ ಅವಶ್ಯಕತೆ ಇಲ್ಲದವರು ಸ್ವತಃ ಮುಂದೆ ಬಂದು ಗ್ಯಾರಂಟಿ ಯೋಜನೆಯನ್ನು ತ್ಯಜಿಸುವುದರ ಜತೆಗೆ ಬಡವರಿಗೆ ಯೋಜನೆ ಪಡೆಯಲು ಸಹಕರಿಸಬೇಕು ಎಂದರು.
ಮುಲಬೂತ ಸೌಕರ್ಯ್ ದ ಸಾರ್ವಜನಿಕ ರಸ್ತೆ .ಸೇತುವೆ, ನಿರ್ಮಾಣ ಕಾಮಗಾರಿಗಳು ಈ ಯೋಜನೆಯಿಂದ ಕುಂಟಿತವಾಗಲಾರದು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಬಡವರು, ನಿರ್ಗತಿಕರಿಗಾಗಿ ನಮ್ಮ ಸರಕಾರ ಈ ಯೋಜನೆ ತಂದಿದ್ದು. ಉಳ್ಳವರು,ಯೋಜನೆಯ ಅವಶ್ಯಕತೆ ಇಲ್ಲದವರು, ಸ್ವತಃ ಮುಂದೆ ಬಂದು ಗ್ಯಾರಂಟಿ ಯೋಜನೆಯನ್ನು ತ್ಯಜಿಸುವುದರ ಜತೆಗೆ ಬಡವರಿಗೆ ಯೋಜನೆ ಪಡೆಯಲು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ್ ನಾಯ್ಕ್ ಡ್.ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿವೆಂಕಟೇಶ್ ನಾಯ್ಕ್,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಸತೀಶ ನಾಯ್ಕ,ಉಪಾಧ್ಯಕ್ಷರ ಜನಾರ್ಧನ ದೇವಾದಡಿಗಾ, ಭಟ್ಕಳ ಸಮಿತಿಯ ತಾಲೂಕಾ ಅಧ್ಯಕ್ಷ ರಾಜು ನಾಯ್ಕ್ ,ಕಾಂಗ್ರೇಸ್ ಪಕ್ಷದ ತಾಲೂಕಾ ಅಧ್ಯಕ್ಷರಾದ ವೆಂಕಟೇಶ ನಾಯ್ಕ, ತಾಲೂಕಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸುರೇಶ ನಾಯ್ಕ್ ಎಲ್ಲಾ ಪದಾಧಿಕಾರಿಗಳು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಲೋಕೇಶ್ ನಾಯ್ಕ್ ಭಟ್ಕಳ.