ಭಟ್ಕಳದ ತಾಲೂಕ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಗರ್ಭಕೋಶದಲ್ಲಿ ಆಸಮತೋಲಿತ ಮಲಮತ್ತು( placenta)ಗರ್ಭಕೋಶಕ್ಕೆ ಸುತ್ತಿಕೊಂಡ ಗರ್ಭಿಣಿ ಮಹಿಳೆಯೂರ್ವರಿಗೆ ತುರ್ತು ಶಸ್ತ್ರಚಿಕಿತ್ಸೆಯನ್ನು ಮಾಡಿದ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿಸಿದೆ.
ಮಹಿಳೆಯರಿಗೆ ಗರ್ಭಧಾರಣೆ ಸಂದರ್ಭದಲ್ಲಿ ಕಂಡುಬರುವ ಬಹಳವಿರಳ ಪ್ರಕರಣ ಇದಾಗಿದೆ. ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ತೀವ್ರ ರಕ್ತಸ್ರಾವವಾಗಿ ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಭಟ್ಕಳ ತಾಲೂಕ ಆಸ್ಪತ್ರೆಯಲ್ಲಿ 25 ವರ್ಷಗಳ ನಂತರ ಇಂತಹ ಬಹಳ ವಿರಳ ಪ್ರಕರಣವನ್ನು ನಮ್ಮ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಮಹಿಳೆಯ ಮತ್ತು ಮಗುವಿನ ಪ್ರಾಣವನ್ನು ಉಳಿಸಲಾಗಿದೆ. ಎಂದು ತಾಲೂಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ತಿಳಿಸಿದರು.
ಭಟ್ಕಳ ತಾಲೂಕಿನ ಶಿರಾಲಿ ಮೂಲದ 34 ವರ್ಷದ ಮಹಿಳೆ ಅಸಹಜ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಆಕೆಯನ್ನು ಪಕ್ಕದ ಜಿಲ್ಲೆಗೆ MRI ಪರೀಕ್ಷೆಗೆ ಒಳಪಡಿಸಿದ ನಂತರ ಆಸಮತೋಲಿತ ಮಲಮತ್ತು ಗರ್ಭಕೋಶದಿಂದ ಬಳಲುತ್ತಿದ್ದು ಖಾತ್ರಿಯಾಗಿದ್ದು, ಇದರಿಂದ ಮಹಿಳೆಯ ಜೀವಕ್ಕೆ, ಮೂತ್ರನಾಳುಕ್ಕೂ ತೊಂದರೆಯಾಗುವ ಸಾಧ್ಯತೆ ಕಂಡುಬಂದಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆ ನೀಡಲು 3-4 ನಾಲ್ಕು ತಜ್ಞ ವೈದ್ಯರ ಸಲಹೆಗಳನ್ನು ಪಡೆಯಲಾಗಿದ್ದು.
ಈ ತುರ್ತು ಶಸ್ತ್ರಚಿಕಿತ್ಸೆಯ ಗಂಭೀರತೆಯನ್ನು ಅರಿತ ಭಟ್ಕಳ ವೈದ್ಯರ ತಂಡ ಮಹಿಳೆ ಕುಟುಂಬದವರ ಒಪ್ಪಿಗೆಯನ್ನು ಪಡೆದು ಗರ್ಭಿಣಿಗೆ ಎಂಟು ತಿಂಗಳ ಒಳಗೇ ಭಟ್ಕಳದ ಖ್ಯಾತ ಪ್ರಸೂತಿ ತಜ್ಞೆ ಡಾ.ಸಂಶನೂರ್ ನೇತೃತ್ವದಲ್ಲಿ 1:00 ಗಂಟೆಯ ಒಳಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದು.ತಾಯಿ ಮತ್ತು ಮಗು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಮಹಿಳೆಗೆ ಹೆಣ್ಣು ಮಗು ಜನಿಸಿದ್ದು 1.4 ಕೆಜಿ ತೂಕ ಹೊಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ NICU ನಿಗಾಘಟಕದಲ್ಲಿ ಇರಿಸಲಾಗಿದೆ. ಎಂದು ಮಕ್ಕಳ ತಜ್ಞ ಡಾ. ಸುರಕ್ಷಿತ್ ಶೆಟ್ಟಿ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ. ಅರುಣ್ ನಾಯಕ್, ಡಾ. ಪವನ್. ಡಾ. ಮಹಾಂತೇಶ್.ಡಾ. ಸುರಕ್ಷಿತ್ ಶೆಟ್ಟಿ.
ಡಾ. ಶoಶನೂರ್ ಉಪಸ್ಥಿತರಿದ್ದರು.
ವರದಿ :ಲೋಕೇಶ್ ನಾಯ್ಕ್ ಭಟ್ಕಳ್.
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…