ವರದಿ :ಲೋಕೇಶ್ ನಾಯ್ಕ್.ಭಟ್ಕಳ.
ಸ್ವಾಮಿ ವಿವೇಕಾನಂದ ಜನಸ್ಪಂದನ ಪೌಂಡೇಷನ್ (ರಿ) ಜಾಲಿ. ಉದ್ಘಾಟನಾ ಕಾರ್ಯಕ್ರಮ.
ಭಟ್ಕಳ:ಅಕ್ಟೋಬರ್ 12.
ನಗರದಲ್ಲಿ ರವಿವಾರ ದಂದು ಜಾಲಿಯ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘ ಜಾಲಿಯ ಸಭಾಭವನದಲ್ಲಿ ಶ್ರೀ ವಿಜಯ್ ಕುಮಾರ್ ಸಮನ್ವಯಕರು ಹಿಂದೂ ಜನಜಾಗ್ರತಿ ಸಮೀತಿ ದಕ್ಷಿಣ ಕನ್ನಡ ದೀಪ ಬೆಳಗುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು,ಸ್ವಾಮಿ ವಿವೇಕಾನಂದ ಮತ್ತು ಛತ್ರಪತಿ ಶಿವಾಜಿ ಮತ್ತೆ ಹುಟ್ಟಿ ಬರಲಿ ಎನ್ನುವ ಆಶಯ ನಮ್ಮದಾಗಿದೆ. ನಿಮ್ಮ ಈ ಉತ್ತಮ ಕಾರ್ಯಕ್ಕೆ ದೇವರ ಕೃಪೆ ಇರಲಿ,ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಆದ್ಯಾತ್ಮಿಕ ಕಾರ್ಯ ಈ ಸಂಘಟನೆ ಮುಂದುವರೆಸಿ ಕೊಂಡು ಹೋಗುವಂತಾಗಲಿ. ಕೇವಲ ಜಾಲಿ ಗ್ರಾಮಕ್ಕೆ ಸೀಮಿತವಾಗಿರದೆ ಭಟ್ಕಳ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲೂ ಈ ಸಂಘಟನೆಯ ಕಾರ್ಯವ್ಯಾಪ್ತಿ ಹರಡಲಿ ಎಂದು ಹಾರೈಸಿದರು.
ಶ್ರೀ ಜೆ. ಡಿ. ಭಟ್ ಹಾಗೂ ಶಿಕ್ಷಕರು ಶ್ರೀ ಯಶ್ವoತ್ ಆರ್ ನಾಯ್ಕ್ ಸಂಘಟನೆಯ ಲೋಗೋವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಖ್ಯಾತ ವಕೀಲರು ಸಂಘಟನೆಯ ಸದಸ್ಯರು ಆದ ಜೆ. ಡಿ . ಭಟ್. ಹಿಂದೂ ಸನಾತನ ಧರ್ಮ ಅದರ ಮಹತ್ವತೆಯನ್ನು ದೇಶದ ಎಲ್ಲೆಡೆ ತಿಳಿಸಿಕೊಟ್ಟಂತ ಮಹಾನ್ ಪುರುಷ ಹಾಗೂ ಸಂತರು. ಅವರ ಹೆಸರೇ ಒಂದು ಶಕ್ತಿ. ಅದೇ ರೀತಿಯಾಗಿ ಸಂಘಟನೆ ಸ್ವಾಮಿ ವಿವೇಕಾನಂದ ಜನಸ್ಪಂದನಾ ಟ್ರಸ್ಟ್ ಇಂದು ವಿದ್ಯುಕ್ತವಾಗಿ ಇಂದು ಉದ್ಘಾಟನೆಗೊಂಡಿದೆ.ಬಹಳ ಮುಖ್ಯವಾಗಿ ಈ ಸಂಘಟನೆಯ ಹಸಿರಿನಲ್ಲಿಯೇ ಜನಸ್ಪಂದನಾ ಇದೆ.
ಜಾತಿ ಮತ ಪಂಥವನ್ನು ಮರೆತು ಬಡವರು ಶ್ರೀಮಂತರು ಎನ್ನದೆ ಸ್ಪಂದಿಸುವ ಕಾರ್ಯ ಸಂಘಟನೆಯಿಂದ ಆಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಬಗ್ಗೆ ಬರುವ ಕಮೆಂಟ್ಗಳಿಗೆ ಅನಿಸಿದ ಉತ್ತರಗಳನ್ನ ನೀಡುವುದರ ಬದಲು ಸಮಾಧಾನದಿಂದ ಇದ್ದು ಮೌನದಿಂದಲೇ ಎಲ್ಲದಕ್ಕೂ ಉತ್ತರಿಸಿದರೆ ಭಿನ್ನಾಭಿಪ್ರಾಯಗಳು ಕಲಹಗಳು ಬರದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವೆಂಕಟೇಶ್ವರ ವಿದ್ಯಾವರ್ಧಕ ನಾಮಧಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕ್, ಜನಸ್ಪಂದನ ಟ್ರಸ್ಟಿನ ಅಧ್ಯಕ್ಷ ವಸಂತ್ ನಾಯ್ಕ್. ಉಪಾಧ್ಯಕ್ಷ ದೇವರಾಜ್ ಕೆ ಮೊಗೆ ರ. ಕಾರ್ಯದರ್ಶಿ ಮಾರುತಿ ನಾಯ್ಕ್, ಸಾಲಿಗ್ರಾಮದ ಮುಖಂಡರು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸಿತರಿದ್ದರು.