ವರದಿ: ಆರತಿ ಗಿಳಿಯಾರು
ಉಡುಪಿ : ಅ.10
ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸಾಲ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿರುವ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನ ವ್ಯವಸ್ಥಾಪಕ ಸಿಬ್ಬಂದಿ ವಿರುದ್ಧ ದೊಡ್ಡ ಮಟ್ಟದ ಆರೋಪಗಳು ಕೇಳಿ ಬಂದಿರುತ್ತದೆ.
ಬ್ಯಾಂಕಿನಿಂದ ಮೋಸ ಹೋದ ಸಂತ್ರಸ್ತರು ಶಾಸಕರ ಅಧ್ಯಕ್ಷತೆಯಲ್ಲಿರುವ ಬ್ಯಾಂಕಿನಿಂದ ಅನ್ಯಾಯವಾಗಿರುವ ಬಗ್ಗೆ ಮಾಧ್ಯಮದ ಮುಂದೆ ತಮ್ಮ ಅಳಲನ್ನು ಹಂಚಿಕೊಂಡಿದ್ದು, ಬ್ಯಾಂಕ್ ನ ಸಿಬ್ಬಂದಿ ಆದ ಸುಬ್ಬಣ್ಣ ಕೊರೊನಾ ಕಾಲದಲ್ಲಿ 2021ರ ಜೂನ್ ತಿಂಗಳಲ್ಲಿ ಮನೆಗೆ ಬಂದು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ಯಾವುದೇ ದಾಖಲಾತಿಗಳಿಗೆ ಸಹಿ ಹಾಕಿ ಪಡೆಯದೆ 20 ಸಾವಿರ ಸಾಲ ನೀಡಿದ್ದು ತಿಂಗಳಿಗೆ 900 ರೂ ಬ್ಯಾಂಕಿಗೆ ಪಾವತಿಸುವಂತೆ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಸುಬ್ಬಣ್ಣ ಇವರು ದೀಪಕ್, ಮಿಥುನ್, ವಾರಿಜ, ರೆಹನಾ, ನಸೀಮ್ ಹಾಗೂ ಇತರ ಹಲವು ಮಂದಿಗಳಿಗೆ ಇದೇ ರೀತಿ ಸಾಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನಂತರ ನಾವು ಸಾಲದ ಹಣವನ್ನು ತಿಂಗಳಿಗೆ ಸರಿಯಾಗಿ ಕಟ್ಟಕೊಂಡು ಬಂದಿದ್ದು ಬಳಿಕ ಬ್ಯಾಂಕ್ ನಿಂದ ನೋಟಿಸ್ ಬಂದಿದ್ದು ಮಲ್ಪೆ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ನಮ್ಮ ಖಾತೆಯಿಂದ 2 ಲಕ್ಷ ರೂ ಸಾಲ ಮಾಡಿದ್ದು ಕೂಡಲೇ ಪಾವತಿಸಬೇಕೆಂದು ಸಿಬ್ಬಂದಿ ತಿಳಿಸಿರುತ್ತಾರೆ.
ಈ ಬಗ್ಗೆ ವಿಚಾರಿಸಿದಾಗ ವ್ಯವಸ್ಥಾಪಕರು ಸರಿಯಾಗಿ ಉತ್ತರ ನೀಡಲಿಲ್ಲ. ಇದೇ ವಿಚಾರ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಯಶ್ ಪಾಲ್ ಸುವರ್ಣ ರವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನಲ್ಲಿ 20 ಸಾವಿರ ಸಾಲ ಕೊಟ್ಟು ಎರಡು ಲಕ್ಷ ಹಣವನ್ನು ಬ್ಯಾಂಕಿಗೆ ಪಾವತಿಸಬೇಕೆಂದು ಮನೆ ಬಾಗಿಲಿಗೆ ಬಂದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದು ಇದೇ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ಬಣ್ಣ ಎಂಬವರು ದಲಿತ ನೌಕರನಾಗಿದ್ದು ಈ ಹಿಂದೆ ಇದೇ ಕೋಪರೇಟಿವ್ ಸೊಸೈಟಿಯ ನಕಲಿ ದಾಖಲೆ ಸೃಷ್ಟಿಸಿ ಸಾಲ ನೀಡಿದ ವಿಚಾರವಾಗಿ ಬ್ಯಾಂಕಿನ ಅಧ್ಯಕ್ಷರು ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳ ಕಿರುಕುಳದಿಂದಾಗಿ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಇದೇ ವಿಚಾರವಾಗಿ ಸುಬ್ಬಣ್ಣನ ಮನೆಯವರು ಮಲ್ಪೆ ಠಾಣೆಯಲ್ಲಿ ಕಿರುಕುಳ ನೀಡಿರುವವರು ವಿರುದ್ಧ ಪ್ರಕರಣ ದಾಖಲು ಮಾಡಿದ್ದು ದಲಿತನಾದ ಸುಬ್ಬಣ್ಣನ ಪಾರ್ಥಿವ ಶರೀರವನ್ನು ಬಿಟ್ಟುಕೊಡಲು ನಿರಾಕರಿಸಿ ತನಿಖೆಯಾಗಬೇಕು ಎಂದಿರುತ್ತಾರೆ. ಅದೆಷ್ಟು ಕಿರುಕುಳಗಳನ್ನು ಅನುಭವಿಸಿದ ಸುಬ್ಬಣ್ಣನ ಮನೆಯವರು ಕೋ ಆಪರೇಟಿವ್ ಸೊಸೈಟಿಯ ಗೋಲ್ಮಾಲ್ ಗೆ ಸುಬ್ಬಣ್ಣನನ್ನು ಬಲಿ ತೆಗೆದುಕೊಂಡು ಈಗ ಸುಬ್ಬಣ್ಣನನ್ನು ಕಳೆದುಕೊಂಡು ಬಡ ದಲಿತ ಕುಟುಂಬ ನೊಂದಿರುತ್ತದೆ.
ಯಾವುದೇ ಒಂದು ಬ್ಯಾಂಕ್ ಗಳಲ್ಲಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರ ಸಮ್ಮತಿ ಇಲ್ಲದೆ ಬ್ಯಾಂಕಿನ ಯಾವುದೇ ವ್ಯವಹಾರಗಳು ಬ್ಯಾಂಕಿನ ಸಿಬ್ಬಂದಿಗಳಿಗೆ ಜವಾಬ್ದಾರಿಯನ್ನು ನೀಡುವುದಿಲ್ಲ. ಆದರೆ ಇಲ್ಲಿ ಇಷ್ಟು ದೊಡ್ಡ ಹಗರಣವಾಗಿದೆ ಎಂದರೆ ಇಲ್ಲಿನ ವ್ಯವಸ್ಥಾಪಕರು ಹಾಗೂ ಅಧ್ಯಕ್ಷರ ಸಾರಥ್ಯದಲ್ಲಿ ನಡೆದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇಲ್ಲಿ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿಯಾಗಿದ್ದಂತ ಸುಬ್ಬಣ್ಣ ಇವರ ಮೇಲೆ ಆಪಾದನೆಯನ್ನು ಹೊರಿಸಿ ವಂಚನೆ ಆಗಿರುವ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಹುನ್ನಾರ ನಡೆಸುತ್ತಿರುವುದು ಸಾರ್ವಜನಿಕರಾದ ನಮಗೆ ತಿಳಿದಿದೇ ಎಂದು ತಿಳಿಸಿದ್ದಾರೆ.
ಈ ಬ್ಯಾಂಕ್ ನ ಗೋಲ್ಮಾಲ್ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ವಂಚನೆಗೊಳಗಾದ ಸಾರ್ವಜನಿಕರು ಠಾಣೆಗೆ ದೂರು ನೀಡಿದಾಗ ಪ್ರಕರಣದ ವಿಚಾರ ಹೊರ ಬಿದ್ದಿದ್ದು ಆತ್ಮಹತ್ಯೆ ಮಾಡಿಕೊಂಡ ಸುಬ್ಬಣ್ಣನ ಮೇಲೆ ಹಾಕಿ ಸಾರ್ವಜನಿಕರಿಗೆ ಮತ್ತೆ ವಂಚನೆ ಮಾಡಲು ಹೊರಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಾಸಕ ಯಶ್ ಪಾಲ್ ಸುವರ್ಣ ರವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನಪ್ರತಿನಿಧಿಯಾಗಿದ್ದು ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕಾಗಿದ್ದು ಜನರ ಹಿತಸಾಕ್ತಿ , ಬಯಸಬೇಕಾಗಿದ್ದ ಇವರು ಅಧ್ಯಕ್ಷರಾಗಿರುವ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಮುಗ್ಧ ಸಾರ್ವಜನಿಕರಿಗೆ ವಂಚನೆ ಮಾಡಿದ್ದು ಇವರ ಗಮನಕ್ಕಿದ್ದು ನೋಡಿಯೂ ನೋಡದಂತೆ ಕೇಳಿಯೂ ಕೇಳದಂತೆ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವ ಹಾಗೆ ವರ್ತನೆ ಮಾಡಿ ಬಡ ಸಾರ್ವಜನಿಕರ ಹೊಟ್ಟೆಯ ಮೇಲೆ ಹೊಡೆದು ಅವರ ಹಣದಿಂದ ರಾಜಕೀಯ ಮಾಡಲು ಶಾಸಕರಾಗಿ ನಿಮಗೆ ನಾಚಿಕೆಗೇಡಿನ ವಿಚಾರವಲ್ಲವೇ ಎಂದು ವಂಚನೆಗೆ ಒಳಗಾದ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ನಿಜವಾಗಲೂ ನಿಜವಾದ ಜನಪ್ರತಿನಿಧಿಯಾದರೆ ಕೂಡಲೇ ಇದರ ಬಗ್ಗೆ ಚರ್ಚೆ ಮಾಡಿ ಅನ್ಯಾಯಕ್ಕೆ ಒಳಗಾದ ಸಾರ್ವಜನಿಕರಿಗೆ ಪರಿಹಾರ ಸೂಚಿಸಬೇಕು, ಸಾರ್ವಜನಿಕರ ಮೇಲೆ ಈ ರೀತಿಯಾಗಿ ವಂಚನೆ ಮಾಡಿ ದಬ್ಬಾಳಿಕೆ ಮಾಡುವುದು ನ್ಯಾಯ ಸಮ್ಮತವಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ಗೋಲ್ಮಾಲ್ ನ ವಿಚಾರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಸುಬ್ಬಣ್ಣ ಇವರು 28 ಕೋಟಿ ನುಂಗಿದ್ದಾರೆ ಎನ್ನುವ ಆಪಾದನೆಯನ್ನು ಅವರ ಮೇಲೆ ಹಾಕಿ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಅಧ್ಯಕ್ಷರು ತಪ್ಪಿಸಿಕೊಳ್ಳುವುದು ಸಮಂಜಸವಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಈ ಬ್ಯಾಂಕಿನ ದೌರ್ಜನ್ಯಕ್ಕೋಳಗಾದ ಕೊಳಲಗಿರಿ ಲಕ್ಷ್ಮೀ ನಗರದ ವಿಶ್ವನಾಥ್ ಹಾಗೂ ಸುಕೇಶ್ ಸೇರಿದಂತೆ 10 ಮಂದಿ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಲ್ಲದೆ ಈ ವಿಚಾರವನ್ನು ಕೋಟ ನಾಗೇಂದ್ರ ಪುತ್ರನ್ ಅವರ ಬಳಿ ತಮಗಾದ ಅನ್ಯಾಯವನ್ನು ಹಂಚಿಕೊಂಡಿರುತ್ತಾರೆ.
ಪ್ರತಿ ಬ್ಯಾಂಕ್ ಗಳಲ್ಲೂ ತಿಂಗಳಿಗೊಮ್ಮೆ ಮೀಟಿಂಗ್ ನಡೆಯುತ್ತಿದ್ದು ಮೂರು ತಿಂಗಳಿಗೊಮ್ಮೆ ಇಂಟರ್ನಲ್ ಎಡಿಟಿಂಗ್ ಆಗುತ್ತದೆ ಈ ರೀತಿ ವ್ಯವಸ್ಥೆ ಇರುವಾಗ 2011 ರಿಂದ 2023ರ ತನಕ 28 ಕೋಟಿ ಹಗರಣ ಆಗಿದೆ ಎಂದು ತಿಳಿಸಿದ್ದಾರೆ ಹೀಗೆ 1413 ಜನರಿಗೆ ಅನ್ಯಾಯವಾಗಿದ್ದು ಇದನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಇವರು ಸಂತಸ್ಥರ ಪರವಾಗಿ ನಿಂತು ಅವರಿಗೆ ನ್ಯಾಯ ಒದಗಿಸಿಕೊಟ್ಟು ವಂಚನೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಗೆ ರಕ್ಷಣೆ ನೀಡಿ ನ್ಯಾಯ ಸಿಗುವಂತದ್ದು ಆಗಬೇಕು ಕಿರುಕುಳಕ್ಕೆ ಒಳಗಾದ ದಲಿತ ಸಿಬ್ಬಂದಿ ಆದಂತಹ ಸುಬ್ಬಣ್ಣ ಅವರ ಸಾವಿಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.