ವರದಿ ಆರತಿ ಗಿಳಿಯಾರು
ಮುಂದುವರೆದ ಭಾಗ ೨
ಆದರೆ ಇಂದಿನ ಪರಿಸ್ಥಿತಿಯಲ್ಲಿ ಜನಸಂಖ್ಯೆ ಬಹುತೇಕ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗಿದೆ. ಆದರೆ ಗ್ರಾಮ ಪಂಚಾಯಿತಿಗಳಿಗೆ ನಿಗದಿಪಡಿಸಿತ ಸಿಬ್ಬಂದಿಗಳ ಸಂಖ್ಯೆ ಹಾಗೂ ಮಾದರಿ 1993ರ ಅಂದರೆ 30 ವರ್ಷಗಳಷ್ಟು ಹಳೆಯ ಮಾದರಿಯೇ ಇದೆ. ಮೂಲ ಸೌಕರ್ಯಗಳು ಕೂಡ ಯಾವುದೇ ಬದಲಾವಣೆ ಆಗಿಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಆರಂಭ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸಿದ ಯಾವುದೇ ಅಕ್ಷೇಪಣೆ ಸಲಹೆಗಳನ್ನು ಪರಿಗಣಿಸದೆ ಅಂತಿಮಗೊಳಿಸಿ ರೂಪಿಸಲಾಗಿದೆ.
ಇಲಾಖೆಯ ಸರ್ವೋತೋ ಮುಖ ಅಭಿವೃದ್ಧಿಯನ್ನು ಪರಿಗಣಿಸಲು ಆ ಬಗ್ಗೆ ನಿಯಮಗಳನ್ನು ರೂಪಿಸಲು ಅಧಿಕಾರಿ ವ್ರಂದದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರಿತು ಪರಿಹರಿಸಿಕೊಳ್ಳುವ ಸಲುವಾಗಿ ಉದಯಗೊಂಡ ಆಯುಕ್ತಾಲಯವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೇವಲ ಹೆಚ್ಚುವರಿ ಮತ್ತು ಅವೈಜ್ಞಾನಿಕ ಕೆಲಸಗಳನ್ನು ಗ್ರಾಮ ಪಂಚಾಯಿತಿ ಮೇಲೆ ಮತ್ತು ಅದರ ಅಧಿಕಾರಿಗಳ ಮೇಲೆ ಹೇರುವಂತ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಇಲಾಖೆಯ ಹಂತದಲ್ಲಿ ಯಾವುದೇ ಆದೇಶವನ್ನು ಹೊರಡಿಸುವ ಮುನ್ನ ಅನುಷ್ಠಾನ ಮಾಡುವ ಅಧಿಕಾರಿಗಳ ಸಮಸ್ಯೆಗಳನ್ನು ಕಾನೂನಿನ ತೊಡಕುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ ಹಾಗಾಗಿ ಈ ಎಲ್ಲಾ ಸಮಸ್ಯೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅನುಭವಿಸುವಂತೆ ಆಗಿದೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಜನರಿಂದ ಚುನಾಯಿತರಾದ ಆಡಳಿತ ಮಂಡಳಿ ಇರುತ್ತದೆ ಸದರಿ ಆಡಳಿತ ಮಂಡಳಿಯ ನಿರ್ಣಯ ಕೈಗೊಳ್ಳಲು ಅವಕಾಶವಿದ್ದು ಅಧಿಕಾರ ವಿಕೇಂದ್ರೀಕರಣ ಬಯಸುವ ಜನಪ್ರತಿನಿಧಿಗಳು ಇದ್ದರೂ ಸಹ ಅತಿಯಾದ ಸರಕಾರಿ ಆದೇಶಗಳು ಇಲ್ಲ ಆದೇಶಗಳ ಮುಖಾಂತರವೇ ಅಧಿಕಾರಿಗಳು ಕೆಲಸ ನಿರ್ವಹಿಸಿ ಅನುದಾನ ಬಳಸಲಾಗುವುದರಿಂದ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಅಧಿಕಾರಕ್ಕೆ ಧಕ್ಕೆ ತರುವಂತ ಇಂತಹ ಆದೇಶಗಳ ವಿರುದ್ಧ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಪ್ರತಿನಿತ್ಯ ಮನಸ್ತಾಪ ಪರಿಸ್ಥಿತಿ ಉಂಟಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಖಾಲಿಯಾದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಿರುವುದಿಲ್ಲ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಅನೇಕ ಹುದ್ದೆಗಳು ಖಾಲಿ ಇವೆ, ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸ್ವತ್ತು ತಂತ್ರಾಂಶ ಹಾಗೂ ಪಂಚತಂತ್ರ ತಂತ್ರಾಂಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಅದರಲ್ಲಿನ ಹಲವಾರು ದೋಷಗಳನ್ನು ಪರಿಗಣಿಸುವಂತೆ ಹಲವು ಬಾರಿ ಬೇಡಿಕೆ ಸಲ್ಲಿಸಲಾಗಿದ್ದು ಯಾವುದೇ ಸಮಸ್ಯೆ ಪರಿಹಾರವಾಗಿರುವುದಿಲ್ಲ ಎಂದು ತಿಳಿಸಿದರು.
ಮಕ್ಕಳ ಸಂಖ್ಯೆ ಇಲ್ಲದಿದ್ದರೂ ಕೂಡ ಕೂಸಿನ ಮನೆ ನಡೆಸುವಂತೆ ಬೇಡಿಕೆ ಆಧಾರಿತ ಯೋಜನೆಯದ ಎಂ. ಜಿ. ಎನ್. ಆರ್. ಇ. ಜಿ. ಎ ಯೋಜನೆಗಳನ್ನು ಬೇಡಿಕೆ ಇಲ್ಲದಿದ್ದರೂ ಗುರಿ ನಿಗದಿಪಡಿಸಿ ಅನುಷ್ಠಾನ ಮಾಡುವಂತೆ ಒತ್ತಡ ಹೇರಿರುವುದು ಹಲವು ಯೋಜನೆಗಳನ್ನು ಗ್ರಾಮ ಪಂಚಾಯಿತಿಗೆ ತಂದು ಅವುಗಳನ್ನು ಅನುಷ್ಠಾನ ಮಾಡಲು ಸೂಕ್ತ ಸಿಬ್ಬಂದಿ ಮತ್ತು ಮೂಲಸೌಕರ್ಯ ನೀಡದೆ ಅನುಷ್ಠಾನದಲ್ಲಾಗುವ ಯಾವುದೇ ಸಮಸ್ಯೆಗಳಿಗೆ ಜನಪ್ರತಿನಿಧಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ನೌಕರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ.
ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕೇಂದ್ರೀಕೃತ ವ್ಯವಸ್ಥೆ ಯಾಗಿರುವುದರಿಂದ ಇದರಲ್ಲಿ ಹಲವಾರು ವಿಷಯಗಳಿಗೆ ನಿಯಮಗಳು ಇಲ್ಲದೆ ಇರುವುದರಿಂದ ದೂರುಗಳು ಸಹಜವಾಗಿರುತ್ತದೆ. ಅದಕ್ಕಾಗಿ ಕುಂದು ಕೊರತೆ ಪ್ರಾಧಿಕಾರಗಳನ್ನು ರಚನೆ ಮಾಡುವಂತೆ ಕೋರಿದ್ದರ ಮೇರೆಗೆ ಅವುಗಳನ್ನು ನೆಪ ಮಾತ್ರಕ್ಕೆ ರಚನೆ ಮಾಡಿ ಬಿಡಲಾಗುತ್ತಿದೆ. ಅವುಗಳ ಸೂಕ್ತ ಬಲವರ್ಧನೆ ಆಗಬೇಕಾಗಿದೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಅದರ ಅಧಿಕಾರಿಗಳ ಮೇಲಿನ ದೂರನ್ನು ಮೊದಲು ಅಲ್ಲಿಯೇ ಇತ್ಯರ್ಥವಾಗುವಂತೆ ಮಾಡಬೇಕಾಗಿದೆ ಎಂದರು.