ಮೆಟ್ರೋ ವರದಿ
ಬೃಹತ್ ಪ್ರತಿಭಟನೆಯ ರೂಪುರೇಷೆಗಳ ಪೂರ್ವಭಾವಿ ಸಭೆಯನ್ನು ಹಿರಿಯ ಮುಖಂಡರ ಸಮ್ಮುಖದಲ್ಲಿ ನಗರದ ರೋಟರಿ ಭವನ ಏರ್ಪಡಿಸಲಾಗಿತ್ತು
ಮೈಸೂರು ಅ.6
ಮೈಸೂರು ಇದೇ ತಿಂಗಳು ದಿ.16 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಪ್ರತಿಭಟನೆ ಮುಖಾಂತರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಒಳ ಮೀಸಲಾತಿ ಯನ್ನು ಕರ್ನಾಟಕ ರಾಜ್ಯ ದಲ್ಲಿ ಜಾರಿ ಮಾಡಬೇಕೆಂದು ಒತ್ತಾಯಿಸಲು “ಕರ್ನಾಟಕ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ”ಯು ಕರೆ ನೀಡಿದೆ
ಕರೆ ಕೊಟ್ಟಿರುವ ಹಿನ್ನಲೆಯಲ್ಲಿ, ಇದರ ರೂಪರೇಷೆ ಮಾಡಬೇಕಾಗಿರುವುದರಿಂದ ಮೈಸೂರು ವಿಭಾಗ ಮಟ್ಟದ ಪೂರ್ವ ಭಾವಿ ಸಭೆಯನ್ನು ಈದಿನ ಭಾನುವಾರ ಮದ್ಯಾಹ್ನ 2:00 ಗಂಟೆಗೆ ಸರಿಯಾಗಿ ಮೈಸೂರಿನ ರೋಟರಿ ಭವನ ಜೆ ಎಲ್ ಬಿ ರಸ್ತೆ, ಮುಡಾ ಕಚೇರಿಯ ಎದುರು ನಲ್ಲಿ ಸಭೆ ಕರೆಯಲಾಯಿತು
ಆದ್ದರಿಂದ ಮೈಸೂರು ವಿಭಾಗಕ್ಕೆ ಸೇರುವ ಮಂಡ್ಯ,ಮೈಸೂರು, ಚಾಮರಾಜನಗರ, ಕೊಡಗು ಹಾಸನ, ಚಿಕ್ಕಮಂಗಳೂರು,ಜಿಲ್ಲೆಯ ಮುಂಚೂಣಿ ಸಂಘಟನೆಗಳ ಮುಖಂಡರು, ರಾಜಕೀಯ ಮುಖಂಡರು, ಸಮಾಜದ ಪ್ರಗತಿಪರ ಚಿಂತಾಕರು, ವಿದ್ಯಾರ್ಥಿ ಮುಖಂಡರು, ಮಹಿಳಾ ಮುಖಂಡರು,ಹಾಗೂ ಆಸಕ್ತ ಸ್ವಯಂ ಸೇವಕರು ಹಾಜರಾಗಿ ತಮ್ಮ ಅಮೂಲ್ಯ ಸಲಹೆ, ಸಹಕಾರ ನೀಡಬೇಕಾಗಿ ವಿನಂತಿಸಿಕೊಂಡರು.
ಈ ಸಭೆಗೆ ಸಮಾಜದ ಹಿರಿಯ ಹೋರಾಟಗಾರರು, ಚಿಂತಕರು ಆಗಿರುವ ಮಾದಿಗ ದಂಡೋರದ ಶಂಕರಪ್ಪ, ರವರು, ಬಳ್ಳಾರಿ ಹನುಮಂತಪ್ಪ ರವರು ಹಾಗೂ ರಾಜ್ಯದ ಪ್ರಮುಖ ನಾಯಕರು ಆಗಮಿಸಿದ್ದರು.
ಈ ಸಭೆಯಲ್ಲಿ ಮೀಸಲಾತಿ ಮತ್ತು ಒಳ ಮೀಸಲಾತಿ ಬಗ್ಗೆ ಸಂಪೂರ್ಣ ಚರ್ಚಿಸಲಾಯಿತು ಇದು ಸಮುದಾಯದ ಕೆಲಸ ಆಗಿರುವುದರಿಂದ ವಯಕ್ತಿಕ ಕರೆ ಸಾಧ್ಯವಾಗದ ಕಾರಣ ಇದನ್ನೇ ಆಹ್ವಾನ ಎಂದು ಭಾವಿಸಿ ಸರಿಯಾದ ಸಮಯಕ್ಕೆ ಆಗಮಿಸಿ ಸಮುದಾಯದ ಕೆಲಸ ಮಾಡಲು ಪ್ರೋತ್ಸಹಿಸಬೇಕಾಗಿ ವಿನಂತಿಸಿಕೊಂಡರು.
ಆಯೋಜಕರ ಪರವಾಗಿ ಆಹ್ವಾನ ಅರಕಲವಾಡಿ ನಾಗೇಂದ್ರ.