ವರದಿ :ಲೋಕೇಶ್ ನಾಯ್ಕ್.ಭಟ್ಕಳ.
ಭಟ್ಕಳ :ಕೃಷಿಕ ನೋರ್ವನ ಮೃತ ದೇಹ ಹೊಳೆಯಲ್ಲಿ ಪತ್ತೆ.
ಭಟ್ಕಳ: ಮಂಗಳವಾರದಂದು ಕೃಷಿಕನೋರ್ವ ತನ್ನ ತೋಟದ ಕೆಲಸಕ್ಕೆ ತೆರಳಿದ್ದರು, ತೋಟದ ಕೆಲಸದಿಂದ ಮನೆಗೆ ವಾಪಾಸು ಬಾರದೇ ಮಂಗಳವಾರದಿಂದ ನಾಪತ್ತೆ ಯಾಗಿದ್ದರು, ಗುರುವಾರದಂದು ಹತ್ತಿರದ ಕೆಜ್ಜಿಲು ಬಾಳೆ ಹೊಳೆಯಲ್ಲಿ ಗುರುವಾರ 03-10-202 ರಂದು ನಾಪತ್ತೆ ಯಾದವರ ಮೃತದೇಹ ಪತ್ತೆಯಾಗಿರುವ ಘಟನೆ ಭಟ್ಕಳ ತಾಲ್ಲೂಕಿನ ಮಾರುಕೇರಿ ಗ್ರಾಮಪಂಚಾಯಿತ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ರಾಮಯ್ಯ ಕೃಷ್ಣ ಗೊಂಡ (52) ಎಂದು ತಿಳಿದು ಬಂದಿದೆ.
ಈತ ಮಂಗಳವಾರದಂದು ತನ್ನ ತೋಟದ ಕೆಲಸಕ್ಕೆ ಹೋಗಿ ಸಂಜೆ ವೇಳೆ ಕೆಲಸ ಮುಗಿಸಿ ಹತ್ತಿರದ ಕೆಜ್ಜಿಲು ಬಾಳೆ ಹೊಳೆಯಲ್ಲಿ ಕೈ ಕಾಲು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾಗಿರ ಬಹುದು ಎಂದು ಶoಕಿಸಲಾಗಿದ್ದು.
ಬಳಿಕ ಮೃತ ದೇಹದ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಶೋದ ಕಾರ್ಯ ನಡೆಸಿದರು ಮೃತ ದೇಹ ಪತ್ತೆಯಾಗಿರಲಿಲ್ಲ.ಗುರುವಾರ ದಂದು ಬೆಳ್ಳಿಗ್ಗೆ ಅದೇ ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ನಂತರ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಯ ಮಾಡಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತನ ಸಹೋದರ ಮಾಸ್ತಿ ಗೊಂಡ ದೂರು ನೀಡಿದ್ದು.ಗ್ರಾಮೀಣ ಠಾಣೆಯ ಎ. ಎಸ್.ಐ ಕೃಷ್ಣನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
01/10/2024 ನಾಪತ್ತೆ ಆಗಿದ್ದು 03/10/2024. ಹೊಳೆಯಲ್ಲಿ ಮೃತ ದೇಹವಾಗಿ ಪತ್ತೆ.
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…