ಯಡಮೊಗೆಯಲ್ಲಿ ಎಡೆಬಿಡದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ. ಅಕ್ರಮ ಗಣಿಗಾರಿಕೆಗೆ ಸಾಥ್ ನೀಡುತ್ತಿರುವ ಸ್ವಯಂ ಘೋಷಿತ ನಕಲಿ ದಲಿತ ಹೋರಾಟ ಗಾರ ಆನಂದ ಕಾರೂರ್….!


ವರದಿ ಆರತಿ ಗಿಳಿಯಾರು

ಭಾಗ -2 ಮುಂದುವರಿಯುವುದು…..

ಉಡುಪಿ :- ಕುಂದಾಪುರ ತಾಲ್ಲೂಕಿನ ಯಡಮೊಗೆಯಲ್ಲಿ ನಿರಂತರವಾಗಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಾಗುತ್ತಿದ್ದು ಅಲ್ಲಿನ ಸ್ಥಳೀಯರಾದ ಮಾಣಿ ಶೆಟ್ಟಿ, ಸತೀಶ್ ಶೆಟ್ಟಿ, ಸಂತೋಷ್ ನಾಯಕ್ ಎಂಬುವರು  ಅಲ್ಲದೆ ಇನ್ನು ಕೆಲವೊಬ್ಬರು ಅಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಿಕೊಂಡು ಬರುತ್ತಿದ್ದು, ಅಲ್ಲದೆ ಯಾವುದೇ ಟ್ರಿಪ್ ಶೀಟ್ ಇಲ್ಲದೆ ಕೆಂಪು ಕಲ್ಲುಗಳನ್ನು ಕಾನೂನು ಉಲ್ಲಂಘನೆ ಮಾಡಿ ಲಾರಿಗಳಲ್ಲಿ ತುಂಬಿಸಿಕೊಂಡು ಸಾಗಿಸುತ್ತಿದ್ದು ಯಾರ ಭಯವು ಇಲ್ಲದೆ ಕಾನೂನು ಬಾಹಿರವಾಗಿ ರಾಜಾರೋಷವಾಗಿ ಎಲ್ಲರು ನೋಡುವ ಹಾಗೆ  ಹಗಲು ದರೋಡೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಅಲ್ಲದೆ ಈ ಅಕ್ರಮ ಕೆಂಪು ಕಲ್ಲು ಗಣಿ ದಣಿಗಳು ತಾವು ನಡೆಸುವ ಅಕ್ರಮವನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಸ್ಥಳೀಯ  ನಕಲಿ ದಲಿತ ಹೋರಾಟಗಾರನನ್ನು  ಇವರು ಮಾಡುವ ಅಕ್ರಮ ದಂಧೆಯ ಕಾವಲುಗಾರನಾಗಿ ಇರಿಸಿಕೊಂಡಿರುತ್ತಾರೆ.
ಇಲ್ಲಿ ಕೆಂಪು ಕಲ್ಲು ಕೋರೆ ಅನಧಿಕೃತವಾಗಿ ನಡೆಯುತ್ತಿರುವ ವಿಚಾರ ಪತ್ರಕರ್ತರಿಗೆ ತಿಳಿದಿದ್ದು ಅಲ್ಲಿ ನಡೆಯುತ್ತಿರುವ ಅನಧಿಕೃತ ಅಡ್ಡೆಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ಮಾಡಲು ಹೋದ ಪತ್ರಿಕೆಯವರ ಮೇಲೆ ದಲಿತ ದೌರ್ಜನ್ಯ ಕಾಯಿದೆಯ ಅಡಿ ಪ್ರಕರಣವನ್ನು ದಾಖಲು ಮಾಡುತ್ತೇನೆ ಎಂದು, ಬಂದ ಕೆಲವೊಬ್ಬರು ಪತ್ರಕರ್ತರಿಗೆ ಬೆದರಿಕೆ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.


ಇದನ್ನು ತಿಳಿದ ದಲಿತ ಪತ್ರಕರ್ತೆಯೊಬ್ಬರು ಯಡಮೊಗೆ ಗ್ರಾಮಕ್ಕೆ ಭೇಟಿಕೊಟ್ಟು ರಸ್ತೆಯಲ್ಲಿ ಅಕ್ರಮವಾಗಿ ಕೆಂಪು ಕಲ್ಲು ತುಂಬಿದ  ಲಾರಿಗಳ ವೀಡಿಯೋ ಚಿತ್ರೀಕರಣ ಮಾಡುತ್ತಿರುವಾಗ ಅವರ ವಾಹನವನ್ನು ನಿಲ್ಲಿಸಿ ನೈತಿಕ ಪೊಲೀಸ್ ಗಿರಿ ಮಾಡಿರುತ್ತಾರೆ.ಅಲ್ಲದೇ ಅಕ್ರಮದ ಚಿತ್ರಣ ಮಾಡದಿರುವಂತೆ  ಧಮ್ಕಿ ಹಾಕಿ ತಡೆ ಒಡ್ಡಿರುತ್ತಾರೆ.

ಇವರ ಯಾವ ಗೊಡ್ಡು ಬೆದರಿಕೆಗೂ ಜಗ್ಗದೇ ಇದ್ದಾಗ ಅಲ್ಲಿನ ಸ್ಥಳೀಯ ದಲಿತ ಹೋರಾಟಗಾರ ಎಂದು ಹೇಳಿ ರಸ್ತೆಯಲ್ಲಿ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ಹಾಗೂ ಗುಂಡಾಗಿರಿ ಮಾಡಲು ಬಂದಿರುತ್ತಾರೆ. ಆದರೆ ಆ ಪತ್ರಕರ್ತರು ಯಾರ ಭಯವು ಇಲ್ಲದೆ ಇಲ್ಲಿ  ಎಷ್ಟು ಜನ ಅಕ್ರಮ ಕೆಂಪು ಕಲ್ಲು ಕೋರೆ ನಡೆಸುತ್ತಿದ್ದಾರೆ
ಎಂದು ಪ್ರಶ್ನಿಸಿದಾಗ..?

ಅವರಿಗೆ ಹಣದ ಆಮಿಷದ ಡಿಮ್ಯಾಂಡ್ ಅನ್ನು ಇಟ್ಟಿರುತ್ತಾರೆ. ಆಗ ಇವರು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಿಕೆಯ ಬಗ್ಗೆ ವಿವರಣೆ ನೀಡಿ ನಿಮ್ಮ ಈ ಕೆಲವೊಂದು ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ ನಾವು ನಿಮ್ಮ ಈ ಅಕ್ರಮ ದಂಧೆಯ ವಿಚಾರವನ್ನು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ನಿಮ್ಮ ಈ ದಂಧೆಗೆ ಬ್ರೇಕ್ ಹಾಕುತ್ತೇವೆ ಎಂದು ಅವರಿಗೆ ಸರಿಯಾದ ಉತ್ತರವನ್ನು ಕೊಟ್ಟು,
ತನ್ನ ಪತ್ರಿಕಾ ನಿಷ್ಠೆಯನ್ನು ಮೆರೆದು ಬಂದಿರುತ್ತಾರೆ.

ಆದರೆ ಈ ಅಕ್ರಮ ಕಲ್ಲು ಕೋರೆ ಅವಾಂತರದಿಂದ ಇಡೀ ಯಡಮೊಗೆ ಗ್ರಾಮವೇ ತತ್ತರಿಸಿ ಹೋಗಿದೆ.
ಈ ಅಕ್ರಮ ದಂಧೆಯ ಬಗ್ಗೆ ಪ್ರಶ್ನಿಸುವ ಸಾರ್ವಜನಿಕರು ಹಾಗೂ ಪತ್ರಕರ್ತರ ಮೇಲೆ ಈ ದಲಿತ ನಕಲಿ ಹೋರಾಟಗಾರ  ಸ್ವಯಂ ಘೋಷಿತ ದಲಿತ ಮುಖಂಡ ಎನಿಸಿಕೊಂಡವನು ಎಲ್ಲರ ಮೇಲೆ ನೈತಿಕ ಪೊಲೀಸ್ ಗಿರಿ ಮಾಡಿ ಎಲ್ಲರನ್ನೂ ಹೆದರಿಸುವುದೇ ಇವನು ಕಾಯಕ ಮಾಡಿಕೊಂಡಿದ್ದಾನೆ.

ಈ ನಕಲಿ ದಲಿತ ಮುಖಂಡ ಈ ಹಿಂದೆಯೇ ಪತ್ರಿಕೆಗಳಲ್ಲಿ ಕುಂದಾಪುರ ಸಹಾಯ ಆಯುಕ್ತರಾದ ರಾಜು ಅವರು ಇರುವಾಗ ಈ ಅಕ್ರಮ ಕೆಂಪು ಕಲ್ಲು ಕೋರೆಯವರ ವಿರುದ್ದ ಪತ್ರಿಕೆಗಳಲ್ಲಿ ತನ್ನ ಹೆಸರನ್ನು ಹಾಕಿ ಅಕ್ರಮ ಗಣಿಗಾರಿಕೆಯವರ ವಿರುದ್ಧ ನಿಂತು ಹೋರಾಟ ಮಾಡಿದ ಹಾಗೆ ನಾಟಕ ಮಾಡಿ ಈಗ ಅವರು ಕೊಡುವ ಎಂಜಲು ಕಾಸಿಗೆ ಕೈ ಚಾಚಿ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವುದಂತು ಸತ್ಯ.
ಇಲ್ಲವಾದರೆ ಆತನು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಮುಖಂಡನಾಗಿದ್ದರೆ ಅವನು ಏಕೆ ಅವರ ಜೊತೆ ಸೇರಿ ಪತ್ರಿಕೋದ್ಯಮದವರು ಹಾಗೂ ಸಾರ್ವಜನಿಕರ ಮೇಲೆ ಅಟ್ರಾಸಿಟಿ ಪ್ರಕರಣವನ್ನು ದಾಖಲು ಮಾಡಲು  ಕಾರಣವಾಗಿರುತ್ತಾನೆ…?ಈ ಅಡ್ನಾಡಿ ಅಕ್ರಮ ಕೆಂಪು ಕಲ್ಲು ಗಾಣಿಗಾರಿಕೆಯವರು ಕೊಡುವ ಎಂಜಲು ಕಾಸಿಗೆ ಕೈಚಾಚಿರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದಂತು ದಿಟ ಎಂಬುದು ಈ ಮೂಲಕ ಸ್ಪಷ್ಟವಾಗಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಈಗಾಗಲೇ ಅಭಿಪ್ರಾಯ ತಿಳಿದು ಬಂದಿದೆ…!!

ಇಂತಹ ಪುಂಡಾಟಿಕೆ  ಭೂಟಾಟಿಕೆಯ ನಕಲಿ ದಲಿತ ಮುಖಂಡರಿದಾಗಿಯೇ ನಿಜವಾದ ದಲಿತ ಹೋರಾಟಗಾರರ ಮುಖಕ್ಕೆ ಮಸಿ ಬಳಿಯುವಂತ ಕೆಲಸಗಳು ಸ್ವಯಂ ಘೋಷಿತ ಮುಖಂಡನಿಂದ ಆಗುತ್ತಿದ್ದು ಎಲ್ಲರಿಗೂ ಬೇಸರ ತಂದಿರುವ ವಿಚಾರವಾಗಿದೆ.

ಈ ನಕಲಿ ದಲಿತ ಮುಖಂಡ ಯಾವ ಸಂಘಟನೆಯಲ್ಲೂ ಇಲ್ಲ..!ಎನ್ನುವುದು ಸಹ ಬೆಳಕಿಗೆ ಬಂದಿದ್ದು, ತನ್ನನ್ನು ತಾನು ಜಿಲ್ಲಾ  ಸಂಚಾಲಕನೆಂದು ಸ್ವಯಂ ಘೋಷಣೆ ಮಾಡಿಕೊಂಡು  ಸಾರ್ವಜನಿಕರನ್ನು ಹಾಗೂ ಬರುವ ಪತ್ರಕರ್ತರನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸುವಂತ  ಕೆಲಸಗಳು ಈತನಿಂದ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿರುವ ಸಂಗತಿ.

ಆದ್ದರಿಂದ ಮಾನ್ಯ ವರಿಷ್ಠಾಧಿಕಾರಿಗಳು ಇಂಥ ನಕಲಿ ಭೂಟಾಟಿಕೆಯ ದಲಿತ ಮುಖಂಡ ಎಂದು ತಾವೇ ಸ್ವಯಂ ಘೋಷಣೆ ಮಾಡಿಕೊಂಡು ಸಾರ್ವಜನಿಕ ವಲಯಗಳಲ್ಲಿ ಬೆದರಿಕೆ ಹಾಕುವಂತಹ ಇಂಥವನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು  ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಎಂದು ಸಾರ್ವಜನಿಕರು ಈ ಮೂಲಕ ತಿಳಿಸಿರುತ್ತಾರೆ.

ಜಿಲ್ಲಾದ್ಯಂತ ಅಕ್ರಮಗಳು ನಡೆದಾಗ ಅದು ಪತ್ರಿಕೋದ್ಯಮದ ಕಿವಿಗೆ ಬಿದ್ದಾಗ ಅದನ್ನು ಭಟ ಬಯಲು ಮಾಡುವುದರ ಜೊತೆಗೆ ಸಮಾಜದ ನ್ಯೂನ್ಯತೆಗಳನ್ನು ಪತ್ರಿಕೆಗಳಲ್ಲಿ ಬಿತ್ತರ ಮಾಡುವುದು  ಪ್ರತಿಯೊಬ್ಬ ಪತ್ರಕರ್ತರ ಆದ್ಯ ಕರ್ತವ್ಯವಾಗಿದೆ.

  ಪತ್ರಕರ್ತರ ಕೆಲಸವನ್ನು ಹತ್ತಿಕ್ಕುವಂತಹ ಮತ್ತು ಅವರನ್ನು ತಡೆಯುವಂತಹ ಕೆಲಸ ಮಾಡುತ್ತಿರುವಂತಹ ಅಲ್ಲದೆ ಕಾನೂನು ಬಾಹಿರ ಕೆಲಸ ಮಾಡುವ ವಿಚಾರದ ಬಗ್ಗೆ ತಮ್ಮ ಗಮನಕ್ಕೆ ಬಂದ ಕೂಡಲೇ ಈತನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಾರ್ವಜನಿಕರು ತಿಳಿಸಿರುತ್ತಾರೆ.

ಈ ಅಕ್ರಮ ಗಣಿಗಾರಿಕೆ ಮಾಡುತ್ತಿರುವರಲ್ಲಿ ಕೇಳಿದರೆ ಕುಂದಾಪುರ ಶಾಸಕರು, ಸ್ಥಳೀಯ ಠಾಣೆ ಹಾಗೂ ತಾಲೂಕು  ಅಧಿಕಾರಿಗಳು ಹಾಗೂ ಗಣಿ ಅಧಿಕಾರಿಗಳ ಗಮನಕ್ಕೆ ತಂದು ಅವರಿಗೆ ತಿಂಗಳು ಹಫ್ತಾ ನೀಡಿ,
ಅವರ ಒಪ್ಪಿಗೆಯ ಮೇರೆಗೆ ಅಕ್ರಮ ಗಣಿಗಾರಿಕೆಯನ್ನು ಮಾಡುತ್ತಿದ್ದೇವೆ, ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೆಸರು ಹೇಳುವುದು ಅಲ್ಲದೆ
ನಮ್ಮನ್ನು ಯಾರು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ದರ್ಪದ ಮಾತುಗಳನ್ನು ಆಡುವುದರ ಜೊತೆಗೆ ಗಲ್ಲಿ ಗಲ್ಲಿಗಳಲ್ಲಿ ರಸ್ತೆಯಲ್ಲಿ ಜನರನ್ನು ನಿಲ್ಲಿಸಿ ಧಮ್ಕಿ ಹಾಕುವುದು ಇವರ ದೈನಂದಿನ ಕೆಲಸವಾಗಿದೆ.

ಈ ಅಕ್ರಮ ಗಣಿಗಾರಿಕೆಯಲ್ಲಿ ಬಡ ಕೂಲಿ ಕಾರ್ಮಿಕರು ಇದ್ದು ಇವರಿಗೆ ಜೀವ ರಕ್ಷಣೆಗೆ ಯಾವುದೇ ಸವಲತ್ತುಗಳಿಲ್ಲದೆ ಇದೊಂದು ಅವೈಜ್ಞಾನಿವಾಗಿ ಕೆಂಪು ಕಲ್ಲು ಕಟ್ಟಿಂಗ್ ಮಾಡುತ್ತಿರುವುದರಿಂದ ಕಾರ್ಮಿಕರ ಜೀವಕ್ಕೆ ಕುತ್ತು ಬಂದರೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುವುದು ಕಷ್ಟ ಸಾಧ್ಯ  ಕೂಡಲೇ ಅಧಿಕಾರಿಗಳು ಈ ಅಕ್ರಮ ಗಣಿಗಾರಿಕೆಯನ್ನು  ತಡೆಗಟ್ಟುವುದರ ಜೊತೆಗೆ ಕೂಲಿ ಕಾರ್ಮಿಕರ ಬದುಕು ಬೀದಿ ಪಾಲಾಗುವುದನ್ನು ತಪ್ಪಿಸುವುದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು ಅಕ್ರಮಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲು ಮಾಡಿ ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಿ  ಪ್ರಕೃತಿಯ ನಾಶ ಮಾಡುವವರನ್ನು ಬೆಂಡೆತ್ತುವ ಅಗತ್ಯವಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಿಂದ ಇಡೀ ಯಡಮೊಗೆ  ಧೂಳಿನಿಂದ ಒಂದು ಹೊತ್ತು ಊಟದ ತಟ್ಟೆ ಹಿಡಿದು ಊಟ ಮಾಡುವುದೇ ಕಷ್ಟವಾಗಿದೆ ಹೀಗೆ ಆದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯಕ್ಕೆ ತುತ್ತಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಇವರು ನಡೆಸುತ್ತಿರುವ ಆಕ್ರಮ ಗಣಿಗಾರಿಕೆ ಹತ್ತಿರದಲ್ಲಿ ಶಾಲೆ ಅಂಗನವಾಡಿ ಮನೆಗಳಿದ್ದು ಇವರ ಈ ಅಕ್ರಮ ದಂಧೆಯಿಂದಾಗಿ ಇಡೀ ಯಡಮೊಗೆ ತತ್ತರಿಸಿ ಹೋಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕುವರೇ ಎಂದು ಕಾದು ನೋಡಬೇಕಾದ ಪರಿಸ್ಥಿತಿ ಎದುರಾಗಿರುವುದಂತು ಸತ್ಯ.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್‌ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ವರದಿ: ಲೋಕೇಶ್ ನಾಯ್ಕ.ಭಟ್ಕಳ. ನಟ ಡಾಲಿ ಧನಂಜಯ  ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್. ಭಟ್ಕಳ: ನ.23ಮುರುಡೇಶ್ವರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ(ಮತ್ರ್ಯಮೇಳ) ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ ಡಾಲಿ ಧನ ಧನಂಜಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬ್ ಡೈವಿಂಗ್ ಮಾಡುವ…

    You Missed

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ನಟ ಡಾಲಿ ಧನಂಜಯ ನೇತ್ರಾಣಿ  ದ್ವೀಪದಲ್ಲಿ ಸ್ಕೂಬ್ ಡೈವಿಂಗ್

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ