ಗ್ರಾಮೀಣ ಪ್ರದೇಶಗಳಿಂದ ಸಂಪ್ರದಾಯಿಕ ಆಚರಣೆಗಳು ಇನ್ನೂ ಜೀವಂತ

ಗ್ರಾಮೀಣ ಆಚರಣೆಗಳಿಂದ ಸಂಭ್ರಮದ ವಾತಾವರಣ

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಚ್.ಕೆ.ಲೋಕೇಶ್ ಅನಿಸಿಕೆ ವ್ಯಕ್ತಪಡಿಸಿದರು.

ನಗರದ ಗೋಪಾಳ ಬಡಾವಣೆಯ ಫ್ರೆಂಡ್ಸ್ ಸೆಂಟರ್ ನೂತನ ಕಟ್ಟಡದಲ್ಲಿ ಆಯೋಜಿಸಿದ್ದ ಬೆಳದಿಂಗಳ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಜಾನಪದ ಸಂಜೆ, ಹಳೆಯ ಚಿತ್ರಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಳದಿಂಗಳು ಎಂದರೆ ಸಂಭ್ರಮದ ವಾತಾವರಣ. ಬೆಳದಿಂಗಳ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮಹತ್ವ ಪಡೆದಿದೆ. ತಂತ್ರಜ್ಞಾನ ಮುಂದುವರೆದಂತೆ ಸಂಸ್ಕೃತಿ ಮೇಲಿನ ಆಸಕ್ತಿ ಕಡಿಮೆ ಆಗುತ್ತಿದೆ. ಆದರೆ ಗ್ರಾಮೀಣ ಕ್ರೀಡೆ, ಕಲೆ, ಆಚರಣೆಗಳನ್ನು ಎಲ್ಲರೂ ಸೇರಿ ಅನುಸರಿಸಲು ಮುಂದಾಗಬೇಕು ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ, ನಮ್ಮ ಸಂಸ್ಥೆಯು ಐದು ದಶಕಗಳಿಂದ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ವೈವಿಧ್ಯ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸುವ ಕೆಲಸ ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ, ನೇತ್ರ ಭಂಡಾರದ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸದಸ್ಯರ ಪ್ರತಿಭೆ ಅನಾವರಣಗೊಳಿಸಲು ಬೆಳದಿಂಗಳ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ. ಇಂತಹ ವೇದಿಕೆಗಳು ಪರಸ್ಪರರಲ್ಲಿ ವಿಶ್ವಾಸ ವೃದ್ಧಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದ ವಸಂತ ಮಾಧವ, ಪ್ರತಿಮಾ ಮಾಧವ, ಶುಭಾ ಹರ್ಷ ಅವರನ್ನು ಸನ್ಮಾನಿಸಲಾಯಿತು. ಜಿ.ವಿಜಯಕುಮಾರ್ ತಂಡದಿಂದ ಹಳೆಯ ಚಿತ್ರಗೀತೆಗಳ ಗಾಯನ ನಡೆಸಲಾಯಿತು.

ಕಾರ್ಯದರ್ಶಿ ರವೀಂದ್ರನಾಥ ಐತಾಳ್, ಮಲ್ಲಿಕಾರ್ಜುನ ಕಾನೂರು, ಮೋಹನ್, ಮಾಜಿ ಅಧ್ಯಕ್ಷ ಜಿ.ಸತ್ಯನಾರಾಯಣ, ವೀಣಾ ಗೋಪಾಲ್, ವೀಣಾ ಲೋಕೇಶ್, ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷ ಸುನೀತಾ ಮೋಹನ್, ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವರದಿ ಮೆಟ್ರೋ ನ್ಯೂಸ್

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ವರದಿ  ಲೋಕೇಶ್ ನಾಯ್ಕ್ ಭಟ್ಕಳ್. 2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮವನ್ನು ಗುರುವಾರದಂದು ಅಲಂಕಾರಿಕ ಮೀನುಗಳನ್ನು  ಅಕ್ವೆರಿಯಂನಲ್ಲಿ ತುಂಬುವ ಮೂಲಕ ಉದ್ಘಾಟಿಸಿದ ಉಪ‌ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  . ಮೀನುಗಾರಿಕೆ  ದಿನಾಚರಣೆಯಮತ್ಸ್ಯ ಮೇಳದ ಅಂಗವಾಗಿ ಮತ್ತು…

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ವರದಿ ನಾಗೇಶ್ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆ ಕಡಬ ಬಲ್ಪಗ್ರಾಮ.ಡಿ. 31ರಿಂದ ಜ. 1: ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ, ದೈವಗಳ ನೇಮೋತ್ಸವ – ಆಮಂತ್ರಣ ಪತ್ರ ಬಿಡುಗಡೆ ಸುಬ್ರಹ್ಮಣ್ಯ ನ.22: ಬಳ್ಪ ಗ್ರಾಮದ ಎಣ್ಣೆಮಜಲು, ಗುಂಡಾಜೆ…

    You Missed

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!