ಶಿವಮೊಗ್ಗ ಮಹಾನಗರ ಪಾಲಿಕೆ ಹಿರಿಯ ನೌಕರ ಜಿ ಪರಮೇಶ್ ವಿಧಿವಶ
ಶಿವಮೊಗ್ಗ ಆ31
ಮಹಾನಗರ ಪಾಲಿಕೆಯ ಹಿರಿಯ ನೌಕರರು, ಸಂಘದ ಪೌರ ಸೇವಾ ನೌಕರರ ಸಂಘದ ಪ್ರಮುಖರು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಹಾಗೂ ಶಿವಮೊಗ್ಗ ಸಿಂಹ ದಿನಪತ್ರಿಕೆಯ ಸಂಪಾದಕ ಜಿ ಚಂದ್ರಶೇಖರ್ ಅವರ ಸಹೋದರ ಜಿ. ಪರಮೇಶ್ ನಿನ್ನೆ ರಾತ್ರಿ ನಿಧನರಾದರು.
ಅವರಿಗೆ 59 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಪತ್ರಕರ್ತ ಆಕಾಶ್ ಹಾಗೂ ಪುತ್ರಿ ಸೇರಿದಂತೆ ಸಹೋದರರು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಪರಮೇಶ್ ಅವರ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 3 ರವರೆಗೆ ಕರಿಯಣ್ಣ ಮನೆ ಹತ್ತಿರದ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪರಮೇಶ್ ಶಿವಮೊಗ್ಗ ನಗರಸಭೆ ಹಾಗೂ ಮಹಾನಗರ ಪಾಲಿಕೆಯಲ್ಲಿ ಅಪಾರ ಜನ ಮೆಚ್ಚುಗೆಯ ನೌಕರರಾಗಿ ಸರಳ ಸಜ್ಜನಿಕೆ ಹಾಗೂ ಸೇವಾ ಮನೋಭಾವದ ಜೊತೆ ಸ್ನೇಹದ ವ್ಯಕ್ತಿಯಾಗಿ ಗುರುತಿಸಿಕೊಂಡು ಬೆಳೆದಿದ್ದರು.
ಅವರ ನಿಧನಕ್ಕೆ “ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ “AKWJS” ನ ಜಿಲ್ಲಾ ಅಧ್ಯಕ್ಷರಾದ ಅನಿಲ್ ಕುಮಾರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾಬು ಹಾಗೂ ಸಂಘದ ಸದಸ್ಯರು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ವರದಿ : ಮೆಟ್ರೋ ನ್ಯೂಸ್ 7
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…