ಕಾರವಾರ :ಕಳೆದ ವಾರದಿಂದ ಅರೇಬಿ ಸಮುದ್ರದಲ್ಲಿ ಆದ ಅನಿರಿಕ್ಷಿತ ಬದಲಾವಣೆಯಿಂದ ಎದ್ದ ಬಾರಿ ತೆರೆ, ಗಾಳಿಗೆ ಸಿಕ್ಕಿ ಅಳಿವಿನಂಚಿನಲ್ಲಿರುವ ಹಬ್ ಬ್ಯಾಕ್ ಪ್ರಭೇದದ ಡಾಲ್ಫಿನ್ ಉತ್ತರಕನ್ನಡ ಜಿಲ್ಲೆಯ ಹೊನ್ನಾವರತಾಲೂಕಿನ ಕಾಸರಕೋಡ ಟೊಂಕಾದಲ್ಲಿ ಸತ್ತ ಸ್ಥಿತಿಯಲ್ಲಿ ಕಂಡುಬಂದಿದೆ.
ಅಲ್ಲಿನ ಮೀನುಗಾರರು ತಕ್ಷಣ
ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದರು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬಂದಿಗಳು ರೀಫ ವಾಚ್ ವೈದ್ಯರಿಂದ ಡಾಲ್ಲಿನ್ ನ ಮರಣೋತ್ತರ ಪರಿಕ್ಷೆ ಮಾಡಿ ಮೃತ ಡಾಲ್ಲಿನ್‌ನ ವಿಲೇವಾರಿ ಮಾಡಿದರು.
ಸ್ಥಳೀಯ ಮೀನುಗಾರರಾದ ಹಾಗೂ ಟೊಂಕಾ ಖಾರ್ವಿವಾಡೆ ಬುದವಂತರಾದ ಶ್ರೀರಾಜೇಶ ಗೋವಿಂದ ತಾಂಡೇಲ್ ಸ್ಥಳದಲ್ಲಿ ಹಾಜರಿದ್ದು ಅಳಿವಿನಂಚಿನಲ್ಲಿರುವ ಸಮುದ್ರ ಸಸ್ಥನಿಯ ಸಾವಿಗೆ ಸಂತಾಪ ಸೂಚಿಸಿದರು. ಟೊಂಕಾ ಕಾಸರಕೋಡ ಕಡಲು ಡಾಲ್ಲಿನ್ ಗೆ ಹೆಸರುವಾಸಿಯಾಗಿದ್ದು ಸದರಿ ಪ್ರದೇಶದಲ್ಲಿ ಡಾಲ್ಲಿನ್ ಜಿಗಿಯವ ದೃಶ್ಯವು ಹೊನ್ನಾವರ ಅರಣ್ಯ ವಿಭಾಗದ ವರ್ಕಿಂಗ್ ಪ್ಯಾನ್ 2023ನಲ್ಲಿ ಪ್ರಕಟವಾಗಿರುತ್ತದೆ.
ಹೊನ್ನಾವರ ಅರಣ್ಯ ವಲಯವು ಅಳಿವಿನಂಚಿನಲ್ಲಿರುವ ಸಮುದ್ರ ವನ್ಯಜೀವಿಗಳ ಸೌಂರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿರುತ್ತದೆ.
ಉತ್ತರ ಕನ್ನಡ ಜಿಲ್ಲಾ ವರದಿಗಾರರು ಅನು (ರೂಪಾ)