ವರದಿ : ನಾರಾಯಣಸ್ವಾಮಿ ಹೊಸಕೋಟೆ
ವಿಮಾ ಹಣಕ್ಕಾಗಿ ಬೇರೊಬ್ಬ ವ್ಯಕ್ತಿಯನ್ನು ಕೊಂದು ಅಪಘಾತದಲ್ಲಿ ತಾನೇ ಮೃತಪಟ್ಟಂತೆ ಕಥೆ ಕಟ್ಟಿದ್ದ ವ್ಯಕ್ತಿ ಮತ್ತು ಸಂಚಿನಲ್ಲಿ ಪಾಲ್ಗೊಂಡಿದ್ದ ಆತನ ಪತ್ನಿ. ಹಾಸನ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂತು ಖತರ್ನಾಕ್ ಪ್ಲ್ಯಾನ್.
ಅಪಘಾತದಿಂದ ಸತ್ತರೆ ಕೋಟಿ ಕೋಟಿ ಜೀವ ವಿಮೆ ಹಣ ಕೈಸೇರಲಿದೆ ಎಂಬ ದುರುದ್ದೇಶದಿಂದ ತನ್ನಂತೆಯೇ ಇರುವ ಅಮಾಯಕ ವ್ಯಕ್ತಿಯನ್ನು ಕೊಲೆಮಾಡಿ ಅಪಘಾತದಿಂದ ಸತ್ತಿದ್ದಾನೆ ಎಂದು ಬಿಂಬಿಸಲು ಹೋಗಿ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. ಹಣದಾಸೆಗೆ ಈತನ ಕೃತ್ಯಕ್ಕೆ ಕೈಜೋಡಿಸಿದ ಟ್ರಕ್ ಚಾಲಕನನ್ನು ಸಹ ಬಂಧಿಸಲಾಗಿದೆ. ಮೃತ ವ್ಯಕ್ತಿ ತನ್ನ ಪತಿಯೇ ಎಂದು ಗುರುತಿಸಿ ಸಂಚಿನಲ್ಲಿ ಪಾಲ್ಗೊಂಡ ಆತನ ಪತ್ನಿ ಹಾಗೂ ಇತರ ಇಬ್ಬರ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ. ಹತ್ಯೆ ನಡೆದು 10 ದಿನಗಳ ನಂತರ ಪ್ರಕರಣ ಬಯಲಿಗೆ ಬಂದಿದೆ.
ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಸ್ವಾಮಿಗೌಡ, ಆತನ ಪತ್ನಿ ಶಿಲ್ಪಾರಾಣಿ, ಲಾರಿ ಚಾಲಕ ದೇವೇಂದ್ರ ನಾಯಕ್, ಸುರೇಶ್, ವಸಂತ್ ಈ ಸಂಚು ರೂಪಿಸಿದ್ದು ತನಿಖೆ ವೇಳೆ ತಿಳಿದು ಬಂದಿದೆ. ಲಾರಿ ಚಾಲಕ ದೇವೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಘಟನೆಯ ಸತ್ಯಾಂಶ ಬೆಳಕಿಗೆ ಬಂದಿದ್ದು ಮೇಲ್ನೋಟಕ್ಕೆ ಕೊಲೆಯಾಗಿರುವ ವ್ಯಕ್ತಿ ಓರ್ವ ಭಿಕ್ಷುಕ ಎಂಬ ಮಾಹಿತಿ ಲಭ್ಯವಾಗಿದೆ. ಆತನ ಗುರುತು ಪತ್ತೆಗೆ ಪೊಲೀಸರು ತನಿಖೆ ನಡೆಸಲಾಗುತ್ತಿದ್ದಾರೆ
ಪ್ರಕರಣದ ವಿವರ: ಆ.13 ರಂದು ಬೆಳಗಿನ ಜಾವ 3.15ರ ಸುಮಾರಿಗೆ ಈ ಬಗ್ಗೆ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿ ಗೇಟ್ ಹತ್ತಿರ ಕಾರಿನ ಟೈರ್ ಬದಲಾಯಿಸುವಾಗ ಲಾರಿ ಗುದ್ದಿ ಸಾವು ಸಂಭವಿಸಿದೆ ಎಂದು ದೂರು ಬಂದಿತ್ತು. ಹೊಸಕೋಟೆ ನಗರದ ಶಿಲ್ಪಾರಾಣಿ, ಅಪಘಾತದಲ್ಲಿ ಮೃತಪಟ್ಟಿರುವುದು ತನ್ನ ಗಂಡ ಮುನಿಸ್ವಾಮಿಗೌಡ ಎಂದು ದೂರು ನೀಡಿದ್ದಳು. ಅಲ್ಲದೇ ಮೃತದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಕೂಡ ನೆರೆವರೆಸಿದ್ದಳು.
”ಇದು ಗೊತ್ತಿರುವ ಕಾರ್ ಆಗಿದ್ದು, ನಿಂತಿರುವಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿರುವುದು ತನ್ನ ಪತಿಯೇ ಎಂದು ಮುನಿಸ್ವಾಮಿಗೌಡ ಪತ್ನಿ ಶಿಲ್ಪಾರಾಣಿ ಗುರುತಿಸಿ ದೂರು ಕೊಟ್ಟಿದ್ದರು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಮಾಹಿತಿ ನೀಡಿದರು.
ಆದರೆ, ತನಿಖೆ ವೇಳೆ ಮೃತಪಟ್ಟಿರುವುದು ಅಪಘಾತದಿಂದ ಅಲ್ಲ ಎಂಬ ಸ್ಪಷ್ಟತೆಯೂ ವೈದ್ಯರ ವರದಿಯಿಂದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಆಗ ಲಾರಿ ಚಾಲಕನ ದೇವೇಂದ್ರ ನಾಯಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ಈ ವೇಳೆ ಮೃತಪಟ್ಟಿರುವು ಮುನಿಸ್ವಾಮಿಗೌಡ ಅಲ್ಲ, ಮತ್ತು ಇದು ಅಪಘಾತವೂ ಅಲ್ಲ ಎಂಬ ವಿಷಯ ಬೆಳಕಿಗೆ ಬಂದಿತು. ಮುನಿಸ್ವಾಮಿಗೌಡ ಮೃತಪಟ್ಟಿಲ್ಲ, ಊರಲ್ಲಿದ್ದಾರೆಂದು ದೇವೆಂದ್ರ ನೀಡಿದ ಮಾಹಿತಿ ಮೇರೆಗೆ ಆತನನ್ನು ಬೀರೂರಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಸುಜೀತಾ ತಿಳಿಸಿದ್ದಾರೆ.
ಮುನಿಸ್ವಾಮಿಗೌಡ, ದೇವೇಂದ್ರ, ಸುರೇಶ್ ಮತ್ತು ವಸಂತ್ ಎಂಬ ನಾಲ್ವರು ಸೇರಿ ಈ ಸಂಚು ಮಾಡಿರುತ್ತಾರೆ.
ಮುನಿಸ್ವಾಮಿಗೌಡ ಹಲವಾರು ಇನ್ಸೂರೆನ್ಸ್ ಮಾಡಿಸಿರುತ್ತಾರೆ. ಅಲ್ಲದೇ ಅಫಘಾತ ವಿಮೆಯಿಂದ ಹಣ ಹೆಚ್ಚು ಬರಬಹುದೆಂದು ಪ್ಲ್ಯಾನ್ ಮಾಡಿ ಬೇರೆಯವರನ್ನು ಮೃತಪಟ್ಟಂತೆ ತೊರಿಸಿ ಈ ಸಂಚು ಮಾಡಿರುತ್ತಾರೆ. ಮೃತದೇಹದೊಂದಿಗೆ ಮುನಿಸ್ವಾಮಿ ಆಧಾರ್ ಕಾರ್ಡ್ ಮತ್ತು ಗುರುತಿನ ಪತ್ರಗಳನ್ನು ಇಟ್ಟಿರುತ್ತಾರೆ. ಅಲ್ಲದೇ ಪತ್ನಿ ಶಿಲ್ಪಾರಾಣಿ ಕೂಡ ಮೃತದೇಹ ತನ್ನ ಪತಿಯದೇ ಎಂದು ಗುರುತಿಸಿ ಸಂಚಿನಲ್ಲಿ ಮುಖ್ಯಪಾತ್ರಧಾರಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಮುನಿಸ್ವಾಮಿಗೌಡ ಮತ್ತು ಮೃತಪಟ್ಟ ವ್ಯಕ್ತಿ ನೋಡಲು ಹೋಲಿಕೆಯಿಂದ ಕೂಡಿದ್ದರು. ಬೇರೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ಸ್ಥಳದಲ್ಲಿ ಇಟ್ಟು ಅಪಘಾತದಂತೆ ಬಿಂಬಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಎಸ್ಪಿ ಸುಜೀತಾ ಮಾಹಿತಿ ನೀಡಿದರು.
ಮೂರು ಬಾರಿ ಪ್ರಯತ್ನ: ಸಂಚಿನಲ್ಲಿ ಪಾಲ್ಗೊಂಡಿರುವ ನಾಲ್ವರು ಮೊದಲು ಹೊಸಕೋಟೆಯಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದರು. ಆ ವೇಳೆ ಸುಮಾರು ಆರು ತಿಂಗಳಿಂದ ಹೆದ್ದಾರಿಯಲ್ಲಿ ಇಂತಹ ಕೃತ್ಯ ಮಾಡಬಹುದು ಎಂಬ ಯೋಚನೆ ರೂಪಿಸಿದ್ದರು. ಅಲ್ಲದೇ ತಂಡ ಹಲವು ಬಾರಿ ತನ್ನಂತೆಯೇ ಇರುವ ಅಮಾಯಕನ ಕೊಲೆಗೆ ಪ್ಲಾನ್ ಮಾಡಿತ್ತು. ಆದರೆ, ಅದು ಒಂದಲ್ಲ ಒಂದು ಕಾರಣಕ್ಕೆ ವಿಫಲವಾಗಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…