ನಮೋ ಬುದ್ದಾಯ
ತಾರೀಕು 19-08-2024 ಸೋಮವಾರ ಸಂಜೆ 7.00 ಗಂಟೆಗೆ ಭಾರತೀಯ ಬೌದ್ಧ ಮಹಾಸಭಾ(BSI) ಉಡುಪಿ ಇದರ ಉಪಾಸಕ ಉಪಾಸಕಿಯರು ಕುಟುಂಬ ಸಹಿತ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ ತಿಂಗಳ ಸಮಣ(ಶ್ರಾವಣ) ಹುಣ್ಣಿಮೆಯನ್ನು ಬುದ್ಧ ವಂದನೆ, ತಿಸರಣ,ಪಂಚಾಶೀಲ ಧ್ಯಾನ ಮತ್ತು ಮೈತ್ರಿ ಧ್ಯಾನವನ್ನು ಮಾಡುವ ಮೂಲಕ ಸಾಮೂಹಿಕವಾಗಿ ಮಆಚರಿಸಿದರು.
ನಂತರ ದಮ್ಮ ಉಪೋಸತದಲ್ಲಿ ಬುದ್ಧ ಮತ್ತು ಆತನ ದಮ್ಮ ಕೃತಿಯಲ್ಲಿ *ಬುದ್ಧರ ಪ್ರಥಮ ಉಪದೇಶ* ಪಂಚಶೀಲ, ಅಷ್ಟಾಂಗ ಮಾರ್ಗ ಹಾಗು ಪಾರಮಿತಗಳನ್ನು ಮತ್ತು ವಿವರಣೆಯನ್ನು ತಿಳಿಸಿ ಎಲ್ಲರೂ ಪಾಲಿಸುವಂತೆ ಸೂಚಿಸಲಾಯಿತು.
ಇತರರೊಂದಿಗೆ ಬ್ರಾತೃತ್ವ, ಸಹಬಾಳ್ವೆ, ಕರುಣೆ ಮತ್ತು ಮೈತ್ರಿಯ ಜೀವನ ನಡೆಸುವುದು ಮತ್ತು ಇತರರನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿ ದಮ್ಮ ಚರ್ಚೆ ಮುಕ್ತಾಯಗೊಳಿಸಲಾಯಿತು.ನಂತರ ಎಲ್ಲರಿಗೂ ಪಾಷ್ಟಿಕ ಆಹಾರ ನೀಡಲಾಯಿತು.
ಬೌದ್ಧರಿಗೆ ಹುಣ್ಣಿಮೆ ವಿಶೇಷ ದಿನವಾಗಿದ್ದು ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಉಡುಪಿಯಲ್ಲಿ ಪ್ರತಿ ಹುಣ್ಣಿಮೆಯನ್ನು ಅದರ ವಿಶೇಷತೆಯೊಂದಿಗೆ ಆಚರಿಸಿಕೊಂಡು ಬರುತ್ತಿದ್ದು ಸಮಣ ಹುಣ್ಣಿಮೆಯು ಭಗವಾನ್ ಬುದ್ದರು ಅಂಗುಲಿಮಾಲನನ್ನು ಪರಿವರ್ತಿಸಿ ಬೌದ್ಧ ಬಿಕ್ಕುವಾಗಿ ಮಾಡಿದ ವಿಶೇಷ ದಿನವಾಗಿ ಆಚರಿಸಲಾಗುತ್ತಿದೆ.
ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ.