ಸಕಲ ಭಾಷೆಯ ಮೂಲವೇ ಸಂಸ್ಕೃತವಾಗಿದೆ .ಇದು ಗೌರವಸ್ಧರ ಭಾಷೆ, ಶ್ರೀಮಂತ ಭಾಷೆ, ಸುಂದರವಾದ ಭಾಷೆ, ಜ್ಞಾನ ಭಾಷೆ, ಪ್ರತಿಯೊಬ್ಬರು ಅಧ್ಯಯನವನ್ನು ಮಾಡಲೇಬೇಕಾದ ಭಾಷೆ ಎಂದು ಸಂಸ್ಕೃತ ವಿದ್ವಾಂಸ, ಸುಪ್ರಸಿದ್ಧ ಕೊಳಲು ವಾದಕ, ನಿವೃತ್ತ ಪ್ರಾಚಾರ್ಯ ಶ್ರೀ ಶಂಭು ಭಟ್ ಕಡತೋಕರವರು ನುಡಿದರು.
ಇವರು ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಸಂಸ್ಕೃತ ಸಪ್ತಾಹ ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಒಳಿತಿಗಾಗಿ ಒಂದಾಗಬೇಕು, ಒಂದಾಗಿ ಬದುಕಬೇಕು, ಬದುಕಿ ಸಾಧನೆಯನ್ನು ಮಾಡ ಬೇಕು ಎಂದು ಶಂಭು ಭಟ್ಟರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಿ ಜಿ ಹೆಗಡೆ ಗುಡ್ಗೆಯವರು ಮಾತನ್ನಾಡಿ ಸಂಸ್ಕೃತವು ಸರಳವಾದ ಭಾಷೆ,ಪವಿತ್ರವಾದ ಭಾಷೆ, ಗ್ರಂಥಸ್ಥ ಭಾಷೆಯಾಗಿದೆ.
ಸಂಸ್ಕೃತ ಅಧ್ಯಯನದಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ, ಜ್ಞಾನವು ಹೆಚ್ಚಾಗುತ್ತದೆ ಎನ್ನುವುದನ್ನು ವಿದೇಶಿ ತಜ್ಞರೂ ಸಹ ಒಪ್ಪಿಕೊಂಡಿದ್ದಾರೆ. ಸಂಸ್ಕೃತವನ್ನು ಮನೆಮನೆಗೂ ತಲುಪಿಸಬೇಕು ಎಂದು ನುಡಿದರು.
ಆಡಳಿತಾಧಿಕಾರಿ ಎಂ ಎಸ್ ಹೆಗಡೆ ಗುಣವಂತೆ, ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ರವರು ಉಪಸ್ಥಿತರಿದ್ದರು.ಕು ವಿಂಧ್ಯಾ ಹೆಗಡೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕಿ ಅಂಜನಾ ಶೆಟ್ಟಿ ಸ್ವಾಗತಿಸಿದರು, ಸೌಮ್ಯ ಹೆಗಡೆ ನಿರೂಪಿಸಿ ವಂದಿಸಿದರು.
ಉತ್ತರ ಕನ್ನಡ ವರದಿಗಾರರು ಅನು(ರೂಪಾ)