ಯಲಬುರ್ಗಾ : ದಲಿತ ಯುವಕನ ಜೊತೆ ಕ್ಷೌರ ಮಾಡಿಸುವ ವಿಷಯ ಕುರಿತು ಮಾತಿಗೆ ಮಾತು ಬೆಳೆದು ಕ್ಷೌರಿಕ ಮುದುಕಪ್ಪ ಹಡಪದ ಎನ್ನುವ ವ್ಯಕ್ತಿ ದಲಿತ ಯುವಕನನ್ನು ಕೊಲೆ ಮಾಡಿದ ಘಟನೆ ಶನಿವಾರ ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಯಮನೂರ ಸ್ವಾಮಿ ಈರಪ್ಪ ಬಂಡ್ಯಾಳ( 27 ) ಎಂದು ತಿಳಿದಿದೆ. ಕೊಲೆ ಪಿಯುಸಿ ವರೆಗೆ ಓದಿರುವ ಯಮನೂ ರ ಸ್ವಾಮಿ ಶನಿವಾರ ಮುಂಜಾನೆ ಕಟಿಂಗ್ ಮಾಡಿಸಲು ಹೋದಾಗ ಜಾತಿ ವಿಷಯ ಮುಂದಿಟ್ಟುಕೊಂಡು ಜಗಳ ಕೆದಕಿದ ಕ್ಷೌರಿಕ ಮುದುಕಪ್ಪ ಯಮನೂರು ಸ್ವಾಮಿಗೆ ಕ್ಷೌರ ಮಾಡಲು ನಿರಾಕರಿಸಿದ್ದಾನೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯಮನುರ ಸ್ವಾಮಿ ಗೆ ಸಿಟ್ಟಿನಿಂದ ಕೆರಳಿದ ಮುದುಕಪ್ಪಾ ಅನವಶ್ಯಕವಾಗಿ ಬೈದಾಡಿ ಜಾತಿ ನಿಂದನೆ ಮಾಡಿ ಕಟಿಂಗ್ ಮಾಡಲು ಬಳಸುವ ಕತ್ತರಿಯಿಂದ ಸ್ವಾಮಿ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಎಸ್ಪಿ ರಾಮ ಆರಸಿದ್ದಿ, ಡಿವೈಎಸ್ಪಿ, ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ