ಭಟ್ಕಳ ಸಹಾಯಕ ಆಯುಕ್ತರ ಮುಖಾಂತರ ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು.
ಭಟ್ಕಳ : ಸಮಸ್ತ ಹಿಂದೂ ಸಮಾಜ ವಿಶ್ವಹಿಂದೂ ಪರಿಷದ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಮಕೃಷ್ಣ ನಾಯ್ಕಅವರು, ಬಾಂಗ್ಲಾದೇಶ ಅಕ್ಷರಶಃ ರಣರಂಗವಾಗಿದ್ದು ಅಲ್ಲಿ ಹಿಂದೂಗಳ ಮೇಲೆ ಕ್ರೂರ ದೌರ್ಜನ್ಯ, ಅತ್ಯಾಚಾರದಂತ ದುಸ್ಕೃತ್ಯಗಳು ಎಗ್ಗಿಲ್ಲದೆ ಸಾಗುತ್ತಿದೆ.
ಹಿಂದು ದೇವಾಲಯಗಳನ್ನು ದ್ವಂಸ, ವ್ಯಾಪಾರಸ್ತರ ಮೇಲೆ ಹಲ್ಲೆಮಾಡಲಾಗುತ್ತಿದೆ. 70ವರ್ಷಗಳ ಹಿಂದೆ ಹಿಂದೂಗಳು ಶೇಖಡ 30% ಇದ್ದಿದ್ದು ಈಗ ಶೇಖಡ 7-8% ಉಳಿದುಕೊಂಡಿದ್ದಾರೆ.ಎಲ್ಲೆಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣವಾಗುತ್ತಾ ಹೋಗುತ್ತದೆ ಅಲ್ಲೆಲ್ಲಾ ಮತಾಂಧರ ಅಟ್ಟಹಾಸ ಮೀತಿಮೀರುತ್ತದೆ.
ದೂರದ ಪ್ಯಾಲೆಸ್ತೇನ್ ನಲ್ಲಿ ಹಮಾಸ ಉಗ್ರರ ಮೇಲೆ ದಾಳಿ ನಡೆದರೆ ಇಲ್ಲಿಯ ಸೋ ಕಾಲ್ಡ್ ಬುದ್ದಿ ಜೀವಿಗಳು ಬೊಬ್ಬೆ ಹೊಡೆಯುತ್ತಿದ್ದರು ಈಗ ಅವರ ನಾಲಿಗೆಗೆ ಲಕ್ವ ಹೊಡೆದಿದೆಯಾ ಎಂದು ಕಿಡಿಕಾರಿದರು.
ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ, ನಿವೃತ್ತ ಯೋಧ ಶ್ರೀಕಾಂತ ನಾಯ್ಕ ಮಾತನಾಡಿ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ನಿರಂತರವಾಗಿ ಕ್ಷೀಣಿಸಿದ್ದು, ಅವರನ್ನು ಷಡ್ಯಂತ್ರದಿಂದ ಅಮಾನುಷವಾಗಿ ಕೊಲೆಗಯ್ಯಲಾಗಿದೆ. ಹಿಂದೂಗಳು ರಾಷ್ಟ್ರ ವಿರೋಧಿಗಳಲ್ಲ ರಾಷ್ಟ್ರೀಯತೆ ಹಾಗೂ ಹಿಂದುತ್ವದ ಪ್ರತಿಪಾದಕರು ಪೊಲೀಸ್ ಇಲಾಖೆ ಭಾರತದ್ಯಾದ್ಯoತ ರೋಹಿಂಗ್ಯಾಮುಸ್ಲಿಂ ನುಸುಳು ಕೋರರ ವಿರುದ್ಧ ಕಾರ್ಯಚಾರಣೆಯನ್ನು ನಡೆಸಿ ಬಂದಿಸುವ ಕಾರ್ಯವಾಗಬೇಕಿದೆ ಎಂದರು.
ಹಿಂದೂ ಮುಖಂಡ ಕೃಷ್ಣ ನಾಯ್ಕ ಮತನಾಡಿ ಇಂದು ಪ್ರಕಾಶ ರಾಜ್, ನಿಜಗುಣಾಂದ ಸ್ವಾಮೀಜಿ, ಕೆ.ಎಸ್ ಭಗವಾನ್ ನಂತಹ ಬುದ್ಧಿಜೀವಿಗಳು ಬಾಂಗ್ಲಾದೇಶದ ಹಿಂದೂಗಳ ವಿಷಯದಲ್ಲಿ ಮೌನವಾಗಿರುವುದೇಕೆ ಎಂದರು.
ವಿವಿಧ ಹಿಂದೂ ಸಂಘಟಯ ನೂರಾರು ಮುಖಂಡರು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :ಲೋಕೇಶ್ ನಾಯ್ಕ್. ಭಟ್ಕಳ