ಕೊಪ್ಪಳ : ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ವತಿಯಿಂದ ಸಂಗೊಳ್ಳಿ ರಾಯಣ್ಣನವರ ೨೨೫ ನೆಯ ಜಯಂತ್ಯೋತ್ಸವ ಹಾಗೂ ವೃತ್ತದ ನಾಮ ಫಲಕ ಅನಾವರಣ ಗುರುವಾರ ಜರುಗಿತು. ವೇದ ಮೂತಿ೯ ವಿರೂಪಾಕ್ಷ ಯ್ಯ ಗುರುವಿನ ಸಾನಿಧ್ಯ ವಹಿಸಿದ್ದರು.
ಪ್ರಮುಖರಾದ ಉದ್ಯಮಿ ಅನಿಲ ಆಚಾರ, ಕಾಂಗ್ರೆಸ್ ಮುಖಂಡ ಕಳಕಪ್ಪ ಕಂಬಳಿ, ಬಿಜೆಪಿ ಹಿಂದುಳಿದ ಮೋಚಾ೯ ಅಧ್ಯಕ್ಷ ಶ್ರೀನಿವಾಸ ತಿಮ್ಮಾಪುರ, ಹಾಲುಮತ ಸಮಾಜದ ಅಧ್ಯಕ್ಷ ಶೇಖಪ್ಪ ಕಂಬಳಿ, ರೇವಣಪ್ಪ ಹಟ್ಟಿ, ಮುತ್ತು ಕವಲೂರು , ಬಸವರಾಜ್ ಹುಬ್ಬಳ್ಳಿ, ಮಹೇಶ್ ವೀರಪ್ಪ ಗಾವ ರಾಳ, ಮಾಲತೇಶಮುಧೋಳ, ಶಶಿ ಭಜಂತ್ರಿ, ಭೀಮಶಿ ಗುಳದಳ್ಳಿ, ಭರ್ಮಪ್ಪ ನೋಟಗಾರ ಅನೇಕ ಪಟ್ಟಣ ಪಂಚಾಯತಿ ಸದಸ್ಯರು , ಹಾಲುಮತ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ನಂತರ ಮಂಗಳಕರ ವಾದ್ಯಗಳ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುರುವಿನಮಠ ವರೆಗೆ ಸಂಗೊಳ್ಳಿ ರಾಯಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.
ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ