ಕೊಪ್ಪಳ: ಜಿಲ್ಲಾ ಕುಕನೂರ ಪಟ್ಟಣದ ಕೋಳಿಪೇಟೆಯ ದುರ್ಗಾದೇವಿಯ ಜಾತ್ರಾಮಹೋತ್ಸವ ಇದೇ ಆಗಸ್ಟ್ ೧೯ ರಿಂದ ೨೦ ರವರೆಗೆ ನಡೆಯಲಿದೆ.
ಈ ಕುರಿತು ಮಾಧ್ಯಮಪ್ರತಿನಿಧಿಗಳೊಂದಿಗೆ ಶ್ರೀ ದುರ್ಗಾ ದೇವಿ ದೇವಸ್ಥಾನದ ಕಮಿಟಿಯ ಪ್ರಮುಖರಾದ ಪರಪ್ಪ ಬಾಗೇವಾಡಿ ಮಾತನಾಡಿ,
ಪ್ರತೀ ಮುರುವರ್ಷಕ್ಕೊಮ್ಮೆ ನಡೆಯುವ ಜಗನ್ಮಾತೆ ದುರ್ಗಾದೇವಿಯ ಜಾತ್ರೆಯು ಈ ಭಾಗದಲ್ಲಿ ಮಳೆ, ಬೆಳೆ, ಶಾಂತಿ, ಸಮೃದ್ಧಿಗಾಗಿ ಗ್ರಾಮ ದೇವತೆ ದುರ್ಗಾ ದೇವಿಯು ಕುಕನೂರು ಹಾಗೂ ಸುತ್ತಲಮುತ್ತ ಭಾಗದಲ್ಲಿ ಪ್ರಸಿದ್ದಿ ಪಡೆದ ದೇವತೆ.
ಶ್ರಾವಣ ಮಾಸದ ನೂಲು ಹುಣ್ಣಿಮೆಯ ದಿನ ಅಂದರೆ ಮೂರನೇ ಶ್ರಾವಣ ಸೋಮವಾರದಂದು ಬೆಳೆಗ್ಗೆ ದೇವಸ್ಥಾನದಲ್ಲಿ ವಿಶೇಷ ಹೋಮ ಜರುಗುವುದು, ನಂತರ ಜಗನ್ಮಾತೆಯ ಮಹೋತ್ಸವ ನಡೆಯಲಿದೆ, ಭಜನೆ, ಶಹನಾಯಿ, ಡೊಳ್ಳು, ಕರಡಿ ಮಜಲು ಸೇರಿದಂತೆ ಮಂಗಳಕರ ವಾದ್ಯ ವೈಭವದೊಂದಿಗೆ ಸುಮಂಗಳೆಯರ ಕುಂಭ ಕಳಸದೊಂದಿಗೆ ಮೆರವಣಿಗೆ ನಡೆಯುವುದು, ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಲು ಕೊರಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ರುದ್ರಪ್ಪ ಕರಿಗಾರ್, ಮಲ್ಲಪ್ಪ ಮುಧೋಳ್ ಸಿದ್ದಪ್ಪ ಸಬರದ್, ಬಸಪ್ಪ ಸಬರದ್, ಹನುಮಪ್ಪ ಪಲ್ಲೆದ, ಬಸಪ್ಪ ಇಬೇರಿ, ಶರಣಪ್ಪ ಚೆಂಡೂರು, ಕೆಂಪಯ್ಯ ಮೆಣಸಿನಕಾಯಿ ಮೊದಲಾದವರು ಇದ್ದರು.
ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ