ಸ್ವಾತಂತ್ರö್ಯ ದಿನಾಚರಣೆ: ಕರ್ನಾಟಕ ಸಾಹಿತ್ಯ ಸಂಘದಲ್ಲಿ ಬಹುಭಾಷಾ ಕವಿಗೋಷ್ಠಿ
ವ್ಯಕ್ತಿಯ ಎದೆಗೆ ಇಳಿಯುವ ಸಾಹಿತ್ಯ ರಚನೆಯಾಗಲಿ –  ಅಪರ ಡಿ.ಸಿ .ಶಿವಕುಮಾರ

ಬೀದರ: ನಾವು ರಚಿಸುವ ಸಾಹಿತ್ಯ ವ್ಯಕ್ತಿಯ ಎದೆಗಿಳಿದು ಪರಿವರ್ತನೆಯಾಗುವಂತಿರಬೇಕು. ಕವಿಗೋಷ್ಠಿಗಳಲ್ಲಿ ಅಂತಹ ಸಾಹಿತ್ಯ ಮಾರ್ದನಿಸಿದ್ದು ಶ್ಲಾಘನೀಯ. ಬದುಕು, ಕೇರಳದ ವಯನಾಡಿನ ಮಳೆಯ ರೌದ್ರನರ್ತನ, ಪರಿಸರ, ಸ್ವಾತಂತ್ರö್ಯ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಕವಿಗೋಷ್ಠಿಯಲ್ಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದರು.

ಕರ್ನಾಟಕ ಸಾಹಿತ್ಯ ಸಂಘ ಬೀದರ ವತಿಯಿಂದ ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಬಹುಭಾಷಾ ಕವಿಗೋಷ್ಠಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಂದಿನ ಯುವಕರು ಯಾಂತ್ರಿಕ ಬದುಕಿನ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ತಾಳ್ಮೆಯನ್ನು ಕಳೆದುಕೊಂಡು ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯನ್ನು ಮರೆಯುತ್ತಿದ್ದಾರೆ. ಆದರೆ ಇಂತಹ ಕವಿಗೋಷ್ಠಿಗಳು ಯುವಕರನ್ನು ಸಾಹಿತ್ಯದ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರಲ್ಲದೆ 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ಗುರುತಿನ ಚೀಟಿ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಮನುಷ್ಯ ಮನುಷ್ಯನಂತೆ ಬದುಕಲು ಸಾಹಿತ್ಯ ಸಹಕಾರಿಯಾಗಿದೆ. ಮೊಬೈಲ್‌ಗಳಲ್ಲಿ ಮಗ್ನರಾದ ಇಂದಿನ ಯುವಕರು ಸಾಹಿತ್ಯದ ಅಭಿರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸಾಹಿತ್ಯದ ರಚನೆಯಿಂದ ಸಹಕಾರ, ಸಹಾನುಭೂತಿ, ಸಹಯೋಗ ಮತ್ತು ಪ್ರೀತಿ ವಾತ್ಸಲ್ಯ ಮೂಡುತ್ತದೆ. ಕವಿತೆಗಳು ವಾಸ್ತವತೆಯನ್ನು ಜನರ ಮುಂದಿಡುತ್ತವೆ.

ಸಮಾಜವನ್ನು ತಿದ್ದುವ ಕೆಲಸ ಮಾಡುತ್ತವೆ. ಯ ಯುವಕರು ಸಾಹಿತ್ಯದ ಕಡೆಗೆ ವಾಲುವಂತೆ ಮಾಡಲು ಸ್ವಾತಂತ್ರö್ಯ ದಿನಾಚರಣೆಯ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದರು. ಅಧ್ಯಕ್ಷತೆಯನ್ನು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ವಹಿಸಿ ಮಾತನಾಡಿದರು.

ವೇದಿಕೆ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಕಾರ್ಯಕ್ರಮದ ದಾಸೋಹಿ ಅಶೋಕ ಹೆಬ್ಬಾಳೆ, ಪ್ರಕಾಶ ಕನ್ನಾಳೆ ಉಪಸ್ಥಿತರಿದ್ದರು.

ರಾಷ್ಟಿçÃಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು.

ನಿಜಲಿಂಗಪ್ಪ ತಗಾರೆ ವಂದಿಸಿದರು. ಕವಿಗೋಷ್ಠಿಯಲ್ಲಿ ಮಹಿಳೆ, ಕೇರಳದ ವಯನಾಡಿನ ಅತಿವೃಷ್ಠಿ, ಆಗಸ್ಟ್ ಪಂದ್ರಾ, ನಮ್ಮನ್ನು ನಾವು ಪ್ರೀತಿಸಬೇಕು, ಆರ್.ವಿ.ಬಿಡಪ್ ಸಾಧನೆಗಳು, ಹೊಸ ನಿರ್ಭಯಾ ಎಂಬ ಕವಿತೆಗಳು ಮಾರ್ದನಿಸಿದವು. ಕವಿಗಳಾದ ಪ್ರೊ.ಎಸ್.ವಿ.ಕಲ್ಮಠ, ಭಾರತಿ ವಸ್ತçದ್, ಡಾ. ಶ್ರೇಯಾ ಮಹಿಂದ್ರಕರ್, ರೂಪಾ ಪಾಟೀಲ, ಪುಷ್ಪ ಕನಕ, ಜಗದೇವಿ ದುಬಲಗುಂಡಿ, ಮಹಾರುದ್ರ ಡಾಕುಳಗಿ, ಅಸೃತ್ ಖಾದ್ರಿ, ಮಾರುತಿ ಭೀಮಣ್ಣ, ವೀರಶೆಟ್ಟಿ ಚೌಕನಪಳ್ಳಿ, ಡಾ. ಮಹಾದೇವಿ ಹೆಬ್ಬಾಳೆ, ಹಂಸಕವಿ, ಡಾ. ರಾಮಚಂದ್ರ ಗಣಾಪುರ, ಡಾ. ಮುಸ್ತಾಕಂ, ಮಲ್ಲಮ್ಮ ಸಂತಾಜಿ, ಡಾ. ಸಾವಿತ್ರಿ ಹೆಬ್ಬಾಳೆ ಸೇರಿದಂತೆ ಇನ್ನಿತರರು ಕವನ ವಾಚನ ಮಾಡಿದರು.  

  ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್‌ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ  ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ  ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ವರದಿ :ಆರತಿ ಗಿಳಿಯಾರು ಉಡುಪಿ : ನ.23ಬ್ರಹ್ಮಾವರ ತಾಲ್ಲೂಕಿನ ಮೂಡು ಗಿಳಿಯಾರು ಶಾಲಾ ಮೈದಾನದಲ್ಲಿ  ದಿನಾಂಕ  ಡಿಸೆಂಬರ್ 14 ಮತ್ತು 15 ರಂದು ನಿಸರ್ಗ ಕ್ರಿಕೆಟರ್ಸ್   ಗಿಳಿಯಾರು ಇವರ ವತಿಯಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್…

    You Missed

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    ನಿಸರ್ಗ ಕ್ರಿಕೆಟರ್ಸ್ ಗಿಳಿಯಾರು ಇವರ ವತಿಯಿಂದ “ಡಾ|| ಪುನೀತ್ ರಾಜಕುಮಾರ್ ಕಪ್ 2024 ” ಕ್ರಿಕೆಟ್ ಪಂದ್ಯಾ ಕೂಟ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    2024 ರ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಬಳ್ಪ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.