ಕಾರವಾರ :- ಕೃಷಿ ಮತ್ತು ಕುಡಿಯಲು ಶರಾವತಿಯ ನೀರನ್ನು ಅವಲಂಬಿಸಿರುವ ಶರಾವತಿ ನದಿಪಾತ್ರದ ಮತ್ತು ಹೊನ್ನಾವರ ತಾಲ್ಲೂಕಿನ ಜನತೆಯ ಹಿತವನ್ನು ಕಡೆಗಣಿಸಿ ಶರಾವತಿಯ ನೀರನ್ನು
ರಾಜದಾನಿ ಸಹಿತ ಬೇರೆ ತಾಲ್ಲೂಕುಗಳಿಗೆ/ಜಿಲ್ಲೆಗಳಿಗೆ ಸಾಗಿಸುವ ಯಾವುದೇ ಯೋಜನೆಗಳಿಗೆ ಮತ್ತು ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮಪ್ರದೇಶದಲ್ಲಿ ಭೂಗರ್ಭಕಾಲುವೆ ಅಳವಡಿಸಿ ಶರಾವತಿಯ ನೀರನ್ನು ತಲಕಳಲೆ ಆಣೆಕಟ್ಟೆಗೆ ಸಾಗಿಸಿ ವಿದ್ಯುತ್ ಉತ್ಪಾದಿಸುವ ಉದ್ದೇಶಿಸಿತ ಜಲವಿದ್ಯುತ್ ಯೋಜನೆಗೆ ಶರಾವತಿ ನದಿಪಾತ್ರದ ಮತ್ತು ಜಿಲ್ಲೆಯ ಜನರ ತೀವ್ರ ವಿರೋಧ ವಿದ್ದು ಪರಿಸರ ಹಾಗೂ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ಈ ಹಂತದಲ್ಲಿಯೇ ಕೈ ಬಿಡಬಿಡಬೇಕೆಂದು ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇಂದು ಹೊನ್ನಾವರ ನಗರದಲ್ಲಿ ಸಭೆ ಸೇರಿ ಸರ್ಕಾರವನ್ನು ಆಗ್ರಹ ಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳ ಮತ್ತು ,ಜಿಲ್ಲೆಯ ಉಸ್ತುವಾರಿ ಸಚಿವರ ಮಧ್ಯಪ್ರವೇಶಕ್ಕೆ ಅವರು ಒತ್ತಾಯ ಪಡಿಸಿದ್ದಾರೆ. ಶರಾವತಿ ನೆರೆಸಂತ್ರಸ್ತರ ಹಿತರಕ್ಷಣಾ ಸಮೀತಿಯ ಆಶ್ರಯದಲ್ಲಿ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ವಿವಿಧ ಪಕ್ಷಗಳ ಪ್ರಮುಖರು ಇಂದು ಹೊನ್ನಾವರದಲ್ಲಿ ಸಭೆಸೇರಿ ಈ ಸಂಬಂಧದಲ್ಲಿ ಸುದೀರ್ಘ ಚರ್ಚೆನಡೆಸಿ ಪರಿಸರ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ವಿದ್ಯುತ ನಿಗಮದ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದವರ ಮೇಲಿನ ಉದ್ದೇಶಿಸಿತ ಎರಡೂ ಯೋಜನೆಗಳನ್ನು ವಿರೋದಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದ್ದು,ತಾಲ್ಲೂಕಿನ ವಿವಿಧ ಸಂಘಟನೆಗಳ ಪ್ರಮುಖರ ನಿಯೋಗವು ಇಂದುತಹಶೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿಯವರ ಮೂಲಕ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿತು.
ಸಭೆಯಲ್ಲಿ ತಾಲ್ಲೂಕಿನ ಜನತೆ ಕ್ರಷಿ ಮತ್ತು ಕುಡಿಯುವ ನೀರಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ವಿಚಾರವನ್ನು ಮತ್ತು ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಗುಡ್ಡ ಪ್ರದೇಶದಲ್ಲಿ ಭೂಗರ್ಭ ಕೊಳವೆಯನ್ನು ಅಳವಡಿಸಿ ಟೇಲರೀಸ್ ಆಣೆಕಟ್ಟೆಯ ಶರಾವತಿಯ ನೀರನ್ನು ಎತ್ತರದ ತಲಕಳಲೆಗೆ ಸಾಗಿಸಿ ವಿದ್ಯುತ ಉತ್ಪಾದಿಸುವ ಯೋಜನೆಯನ್ನು ಕೈಬಿಟ್ಟು ಇಲ್ಲಿನ ಸೂಕ್ಷ್ಮ ಪರಿಸರ ಮತ್ತು ಅರಣ್ಯ ನಾಶ ವನ್ನು ತಪ್ಪಿಸಬೇಕು.ಇದಕ್ಕೆ ಬದಲಿಯಾಗಿ ಸೋಲಾರ್ ವಿದ್ಯುತ ಉತ್ಪಾದಿಸಲು ಕ್ರಮ ಆಗಬೇಕು ಎಂದು ಸರ್ಕಾರವನ್ನು ಆಗ್ರಹ ಪಡಿಸುವ ನಿರ್ಣಯವನ್ನು ಸಭೆ ಒಮ್ಮತದಿಂದ ಸ್ವೀಕರಿಸಿತು.ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಶರಾವತಿಯ ನೀರನ್ನು
ಶರಾವತಿ ನದಿಯಲ್ಲಿ ಕಳೆದ ಬೇಸಿಗೆಯ ಕೊನೆಯಲ್ಲಿ ಉಬ್ಬರದ ಸಂದರ್ಭದಲ್ಲಿ ಹಲವು ಬಾರಿ ಸಮುದ್ರದ ಉಪ್ಪು ನೀರು ಸುಮಾರು 25 ಕಿ.ಮೀ.ಉದ್ದಕ್ಕೆ ಶರಾವತಿ ನದಿನೀರಿಗೆ ಹಿಮ್ಮುಖವಾಗಿ ಸೇರ್ಪಡೆಯಾದುದರಿಂದ ತಾಲ್ಲೂಕಿನ ಹಲವೆಡೆ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವಂತಾಯಿತು.
ಬೆಳೆ ಹಾಳಾಗಿ ರೈತರು ಸಂಕಷ್ಟ ಪಡುವಂತಾಯಿತು.ಶರಾವತಿ ನದಿಪಾತ್ರದಲ್ಲಿ 10ಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳ ಮೂಲಕ ರೈತರ ಕ್ರಷಿ ಭೂಮಿಗೆ ಸರ್ಕಾರ ನೀರಾವರಿ ಸೌಲಭ್ಯವನ್ನು ಕಲ್ಪಿಸಿದೆ . ಶರಾವತಿಯಿಂದ ಹೊನ್ನಾವರ ನಗರ ಮತ್ತು ಗ್ರಾಮೀಣ ಭಾಗಕ್ಕೆ ಮತ್ತು ಮುರ್ಡೇಶ್ವರ, ಇಡಗುಂಜಿ ಯಾತ್ರಾ ಸ್ಥಳವು ಸೇರಿದಂತೆ ಈ ಭಾಗದ ಲಕ್ಷಾಂತರ ಜನರಿಗೆ ಶರಾವತಿಯಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಹಿಂದೆ ಸಮುದ್ರ ಸೇರತ್ತಿದ್ದ ಪೂರ್ಣ ಪ್ರಮಾಣದ ನೀರು ಈಗ ಈ ಭಾಗದ ಕುಡಿಯುವ ನೀರಿನ ಪೂರೈಕೆಗೆ ಹಾಗೂ ಏತನೀರಾವರಿ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಇತ್ತೀಚೆಗೆ ಹೊನ್ನಾವರ ನಗರಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಆರಂಭಿಸಿದ ನಂತರ, ಕಳೆದ ಬೇಸಿಗೆಯಲ್ಲಿ ಸಮುದ್ರದ ಉಪ್ಪುನೀರು ಶರಾವತಿಯ ನದಿ ನೀರಿಗೆ ಸೇರಿರುವದು ನದಿಯಲ್ಲಿ ಸಿಹಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿರುವುದಕ್ಕೆ ಪ್ರಮುಖ ನಿದರ್ಶನವಾಗಿದೆ.
ಇದು ನದಿಪಾತ್ರದ ರೈತರ ಮತ್ತು ಕುಡಿಯುವ ನೀರನ್ನು ಅವಲಂಬಿಸಿರುವ ಲಕ್ಷಾಂತರ ಜನರ ಆತಂಕಕ್ಕೆ ಕಾರಣ ವಾಗಿದೆ . ಇದರಿಂದಾಗಿ ಇನ್ನುಮುಂದೆ ಶರಾವತಿಯಿಂದ ಬೇರೆ ತಾಲ್ಲೂಕುಗಳಿಗೆ ನೀರಿನ ಪೂರೈಕೆ ಮಾಡುವ ಹೊಸ ಯೋಜನೆಗಳಿಗೆ ಕಡಿವಾಣ ಹಾಕಬೇಕು.
ಶರಾವತಿನದಿಪಾತ್ರದ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಜನರ ಹಿತವನ್ನು ಬಲಿಕೊಟ್ಟು,ಶರಾವತಿಯ ನೀರನ್ನು ರಾಜಧಾನಿ ಬೆಂಗಳೂರು ಮತ್ತು ಮಧ್ಯ/ಪೂರ್ವ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಒಯ್ದು ಕುಡಿಯುವ ನೀರು ಪೂರೈಸುವ ಮತ್ತು ಕೆರೆಗಳನ್ನು ತುಂಬಿಸುವ ಅವೈಜ್ಞಾನಿಕ ಚಿಂತನೆಯನ್ನು ಸರ್ಕಾರ ಈ ಹಂತದಲ್ಲಿಯೇ ಕೈಬಿಟ್ಟು ಮಲೆನಾಡು,ಕರಾವಳಿ ಭಾಗದ ಜನರ ಹಿತವನ್ನು ಕಾಪಾಡುವ ಕೆಲಸ ಸರ್ಕಾರದಿಂದ ಆಗಬೇಕೆಂದರು.
ಹಾಗೂ ಈ ನಡುವೆ ಸಾಧ್ಯತಾ ವರದಿಯೊಂದಿಗೆ ಡಿ.ಪಿ.ಎ.ಆರ್ .ಸಿದ್ಧಪಡಿಸಲು ಬೆಂಗಳೂರಿನ ಈಐ ಟೆಕ್ನಾಲಾಜೀಸ್ ಕಂಪೆನಿಯು
ಸಮೀಕ್ಷೆ ನಡೆಸುತ್ತಿರುವ ಕ್ರಮ ಸರಿಯಲ್ಲ ಎಂಬ ಆಕ್ಷೇಪವನ್ನು ವ್ಯಕ್ತಪಡಿಸಲಾಗಿದೆ.
ವಿಶ್ವಸ್ವರಯ್ಯ ಜಲ ನಿಗಮದವರ ಮತ್ತು ಕರ್ನಾಟಕ ವಿದ್ಯುತ ನಿಗಮದವರ ಉದ್ದೇಶಿಸಿತ ಎರಡೂ ಯೋಜನೆಯನ್ನು ಕೈಬಿಡುವಂತೆ ಮತ್ತು ಈ ಭಾಗದ ಜನರ ಹಿತರಕ್ಷಣೆ ಮಾಡುವಂತೆ ಚಂದ್ರಕಾಂತ ಕೊಟ್ಟುರು ತಿಳಿಸಿದರು.
ಈ ಭಾಗದ ವಿವಿದ ಸಂಘಸಂಸ್ಥೆಗಳ ಪ್ರತಿನಿಧಿಗಳು ಜಂಟಿಯಾಗಿ ಸಹಿ ಮಾಡಿದ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಆಗ್ರಹ ಪಡಿಸಿದ್ದಾರೆ.
ಶರಾವತಿ ನದಿ ಪಾತ್ರಕ್ಕೆ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ ಯಾವುದೇ ಯತ್ನಗಳನ್ನು ಮತ್ತು ಯೋಜನೆಯನ್ನು ತಡೆಯಬೇಕು ಮತ್ತು ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಶರಾವತಿಯಿಂದ
ಹೊರ ಭಾಗಕ್ಕೆ ಮತ್ತು ರಾಜಧಾನಿಗೆ
ನೀರನ್ನು ಸಾಗಿಸುವ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಹೊನ್ನಾವರ ತಹಶಿಲ್ದಾರರಲ್ಲಿ ಮನವಿಯನ್ನು ಸಲಿಸಿದರು.
ಮಾದ್ಯಮದೊಂದಿಗೆ ಶರಾವತಿ ಹಿತರಕ್ಷಣಾ ನೆರೆಸಂತಸ್ತರ ಅಧ್ಯಕ್ಷರಾದ ಚಂದ್ರಕಾಂತ ಕೊಚರೆಕರರವರು ಮಾತನಾಡಿ ಸಭೆಯಲ್ಲಿ ಸರ್ಕಾರದ ಉದ್ದೇಶಿತ ಯೋಜನೆಯ ಸಾಧಕ ಭಾಧಕಗಳ ಬಗ್ಗೆ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಒಂದು ತಜ್ಞರ ತಂಡದಿಂದ ಅಭಿಪ್ರಾಯ ಪಡೆಯುವ ಬಗ್ಗೆ ಮತ್ತು ಅಗತ್ಯಬಿದ್ದರೆ ಕಾನೂನಾತ್ಮಕ ಹೋರಾಟವನ್ನು ಮಾಡಿ ಈ ಭಾಗದ ಜನರ ಹಿತ ರಕ್ಷಣೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಶರಾವತಿ ನೆರೆಸಂತ್ರಸ್ತರ ಹಿತರಕ್ಷಣಾ ಸಮೀತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ,ಸಂಚಾಲಕ ಯೋಗೇಶ ರಾಯ್ಕರ, ಹೊನ್ನಾವರ ಉಳಿಸಿ ಬೆಳೆಸಿ ಹೋರಾಟ ಸಂಘದ ಅಧ್ಯಕ್ಷ ಜಿ.ಎನ್.ಗೌಡ, ದಲಿತ ಸಂಘರ್ಷ ಸಮಿತಿಯ ಪ್ರಭು ಹಳ್ಳೇರ, ಮತ್ತು ಜಿ.ಟಿ.ಹಳ್ಳೇರ, ಗ್ರಾ.ಪಂ.ಸದಸ್ಯರ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಕೇಶವ ನಾಯ್ಕ ಬಳ್ಕೂರ,.ದೇವರಾಜ ಅರಸು ವೇದಿಕೆಯ ಅನಂತ ನಾಯ್ಕ ಹೆಗ್ಗಾರ, ಮಂಜುನಾಥ ನಾಯ್ಕ ಉಪ್ಪೋಣಿ.
ಮರಳು ಪರವಾನಿಗೆದಾರರ ಒಕ್ಕೂಟದ ಅಧ್ಯಕ್ಷ ವಿನೋದ ನಾಯ್ಕ ಮಾವಿನಹೊಳೆ, ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶತಾಂಡೇಲ, ಪಂಚಾಯಿತ ಅಧ್ಯಕ್ಷರಾದ ಶ್ರೀಧರ ನಾಯ್ಕ ಖರ್ವಾ,ಉಪಾಧ್ಯಕ್ಷ ಮಂಜುನಾಥ ನಾಯ್ಕ ನಗರಬಸ್ತಿಕೇರಿ. ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ಬಿ.ನಾಯ್ಕ ಮೂಡ್ಕಣಿ,ರೈತ ಮುಖಂಡ ರವಿ ಫರ್ನಾಂಡಿಸ್ ,ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ಸದ್ರುದ್ದೀನ ಕುರ್ವೆ, ಹೊನ್ನಾವರ ಜನಪರ ವೇದಿಕೆಯ ಪ್ರಭು ಪಟಗಾರ, ಮೈದಾಪು ಜೀವಾಪು, ಜಾಬೀರ ಕುರ್ವೆ,ಕೇಶವ ನಾಯ್ಕ ಮಾಗೋಡ,ದೀಪಕ ಅಂಕೋಲೇಕರ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ವರದಿಗಾರರು ಉತ್ತರ ಕನ್ನಡ ಅನು (ರೂಪಾ)