ಕಾರವಾರ :ಅಂಕೋಲಾ ಶಿರೂರು ಗುಡ್ಡ ಕುಸಿದು ಬಿದ್ದು ನಾಮಧಾರಿ ಈಡಿಗ ಸಮಾಜದ ಏಳು ಜನ ಸೇರಿದಂತೆ 11ಜನ ಮರಣ ಹೊಂದಿರುವ ಘಟನೆಯಲ್ಲಿ ಪೊಲೀಸರು ಕಂಪನಿಯ ವಿರುದ್ಧ ಎಫ್ಐಆರ್ ಮಾಡದ ಹಿನ್ನೆಲೆಯಲ್ಲಿ ಅಂಕೋಲ ನ್ಯಾಯಾಲಯದಲ್ಲಿ ಖಾಸಗಿ ದೂರು ಈಡಿಗ ಬಿಲ್ಲವ ನಾಮದಾರಿ ಸಮಾಜದ ಶ್ರೀ ಪ್ರಣವಾನಂದ ಗುರುಗಳು ದಾಖಲಿಸಿದ್ದರು ವಿಚಾರಣೆಯ ನಂತರ ಇಂದು ಸಂಜೆ ಸಮಯದಲ್ಲಿ ಮಾನ್ಯ ಅಂಕೋಲ ನ್ಯಾಯಾಲಯದಿಂದ
ಐ ಆರ್ ಬಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರುಗಳಾದ
ವೀರೇಂದ್ರ ಡಿ ಮಾಯಸ್ಕರ್
ಸೇರಿದಂತೆ ಎಂಟು ಜನರ ಮೇಲೆ ಕೊಲೆ ಕೇಸು( FIR) ಮಾಡಿ ತನಿಖೆ ಮಾಡಲು ಅಂಕೋಲ ನ್ಯಾಯಾಲಯದಿಂದ ಆದೇಶ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಲೋಕಾಯುಕ್ತ
ಈ ಡಿ ಸಿಬಿಐ ಗಳಿಗೂ ಮತ್ತು ಸಂಬಂಧಪಟ್ಟ ಎಲ್ಲಾ ಕಾನೂನಾತ್ಮಕವಾದ ಸಂಸ್ಥೆಗಳಿಗೂ ದೂರು ನೀಡಿ ಮರಣ ಹೊಂದಿರುವವರ ಕುಟುಂಬಗಳಿಗೆ ಪರಿಹಾರ ಮತ್ತುನ್ಯಾಯ ಒದಗಿಸಲು ಸಂಪೂರ್ಣ ಪ್ರಯತ್ನವನ್ನು ಮಾಡುತ್ತೇನೆ ಎಂದು ಈಡಿಗ ಬಿಲ್ಲವ ನಾಮದಾರಿ ಸಮಾಜದ ಶ್ರೀ ಪರಣವಾನಂದ ಗುರುಗಳು ತಿಳಿಸಿದರು.
ಈ ಎಫ್ ಐ ಆರ್ ದಾಖಲು ಮಾಡಲು ಆದೇಶ ನೀಡಿರುವುದು ಆ ಕುಟುಂಬಗಳಿಗೆ ಸಿಕ್ಕಿರುವ ಮೊದಲನೇ ಕಾನೂನಾತ್ಮಕ ಗೆಲುವು ಎಂದು ತಿಳಿಯ ಬಹುದು ಎಂದು ಶ್ರೀ ಪ್ರಣವಾನಂದ ಗುರುಗಳು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ವರದಿಗಾರರು ಅನು (ರೂಪಾ)