78ನೇ ವರ್ಷದ ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ “ಹರ್ ತಿರಂಗ ತಿರಂಗ “ಬೈಕ್ ರ್ಯಾಲಿ. ಇಂದು ಬೆಳಿಗ್ಗೆ 10:00 ಗಂಟೆಗೆ ಭಟ್ಕಳ ಆಡಳಿತ ಸೌಧದಿಂದ ಬೈಕ್ ರ್ಯಾಲಿಗೆ ತಾಲೂಕಾ ದಂಡಾಧಿಕಾರಿಯವರು ಚಾಲನೆಯನ್ನು ನೀಡಿದರು.ಭಟ್ಕಳ ಪುರಸಭೆ ಪಟ್ಟಣಗಳಲ್ಲಿ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮರಳಿ ಆಡಳಿತ ಸೌಧದ ಆವರಣದಲ್ಲಿ ತಿರಂಗ ಬೈಕ್ ರ್ಯಾಲಿ ಯಶಸ್ವಿಯಾಗಿ ಸಂಪನ್ನವಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕ ದಂಡಾಧಿಕಾರಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಹರ್ ಗರ್ ತಿರಂಗ ಬೈಕ್ ರ್ಯಾಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮವು ತಾಲೂಕ ಮಟ್ಟದಲ್ಲಿ ಅಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲೂ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಹರ್ ಗರ್ ತಿರಂಗ ರ್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅದೇ ರೀತಿ ಶಹರ ಭಾಗಗಳಲ್ಲಿ ತಾಲೂಕ್ ಆಡಳಿತ, ಪುರಸಭೆ, ಪಟ್ಟಣ ಪಂಚಾಯಿತಿಯ ಅಧಿಕಾರಿವರ್ಗ ಸಿಬ್ಬಂದಿ ವರ್ಗ ತಿರಂಗ ಬೈಕ್ ರ್ಯಾಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಟ್ಟಣದ ಭಾಗಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ರಾಷ್ಟ್ರೀಯತೆ ಮತ್ತು ತಿರಂಗ ಧ್ವಜದ ಮಹತ್ವತೆಯ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಪಟ್ಟಣ ಪಂಚಾಯತ್ ಅಧಿಕಾರಿಗಳು ಆಡಳಿತ ವರ್ಗ ದವರು ಉಪಸ್ಥಿತರಿದ್ದರು
ವರದಿ: ಲೋಕೇಶ್ ನಾಯ್ಕ್. ಭಟ್ಕಳ.