ಕಾರವಾರ : ಉತ್ತರ ಕನಡ ಜಿಲ್ಲೆಯ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ರವರು ಮಳೆಗಾಲದ ನೆರೆ ಪಿಡಿತ ಪ್ರದೇಶಗಳಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಜನರಿಗೆ ಸಹಾಯ ಮಾಡಿದ ನಗರಸಭೆಯ ಪೌರ ಕಾರ್ಮಿಕರಿಗೆ, ಹೆಸ್ಕಾಂ ಲೈನ್ ಮ್ಯಾನ್ ಗಳಿಗೆ,ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅಮೂಲ್ಯವಾದ ಸಲಹೆ ನೀಡಿದಂತಹ ಸಾರ್ವಜನಿಕರಿಗೆ,ಜನ ಪ್ರತಿನಿಧಿಗಳಿಗೆ ಶಾಸಕ ಭೀಮಣ್ಣ ಟಿ ನಾಯ್ಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಮಳೆ ಗಾಳಿಗೆ ಮರ ಗಿಡಗಳು ವಿದ್ಯುತ್ ಕಂಬಗಳು ಮನೆಯ ಮತ್ತು ರಸ್ತೆ ಮೇಲೆ ಬಿದ್ಧ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೆ ಪಣಕಿಟ್ಟು ಜೊತೆ ಸೇರಿ ಪೌರಕಾರ್ಮಿಕರಿಗೆ,ಲೈನಮನ್ ಗಳಿಗೆ,ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಇವರಿಗೆ ಇನ್ನೊಬ್ಬರಿಗಾದ ನೋವು ತಮಗಾದ ನೋವೆಂದು ತಿಳಿದು ಮರ ತೆಗೆಯಲು ಸಹಕಾರ ನೀಡಿದ ಸಾರ್ವಜನಿಕರಿಗೆ,ಜನಪ್ರತಿನಿಧಿಗಳಿಗೆ .ಮತ್ತು ಮಳೆ ಗಾಳಿಗೆ ಮನೆ ಮತ್ತು ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸರಕಾರದಿಂದ ಸಿಗಬಹುದಾದ ಪರಿಹಾರವನ್ನು ದೊರಕಿಸಿಕೊಡುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಮಾಡುವದಾಗಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ವರದಿಗಾರರು ಅನು (ರೂಪಾ)