ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯದಲ್ಲಿ ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಚ್.ನಾಯಕ ಮಾತನಾಡಿ, ಗಣಿತ ವಿಷಯದ ಅಧ್ಯಾಪಕರಾಗಿ, ಮದ್ರಾಸ್ ವಿವಿಯ ಮೊದಲ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನವಾದ ಆಗಸ್ಟ್ 12ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ 2007ರಲ್ಲಿ ಸರಕಾರ ಘೋಷಿಸಿದೆ.
ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್ಆರ್. ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ಧೇವೆ ಎಂದರೆ ಅದು ಗ್ರಂಥಾಲಯದ ಸೇವೆಯಿಂದ. ಇದಕ್ಕೆ ರಂಗನಾಥನ್ ಅವರ ಕೊಡುಗೆ ದೊಡ್ಡದು ಎಂದು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಡಾ.ಟಿ.ವಿ.ವಾರುಣಿ, ಡಾ.ಭಾಗ್ಯಜ್ಯೋತಿ, ಶಿವನಾಥ್.ಇ.ಜಿ, ಅಜಯಕುಮಾರ್, ವಸಂತ್ಕುಮಾರ್, ಸತೀಶ್, ಶಂಕರಾನಂದ.ಡಿ., ಹನುಮಂತಗೌಡ, ಮಹೇಶ್.ಎನ್., ಬುಡ್ಡನಗೌಡ, ಗೀತಾ ಬನ್ನಿಕೊಪ್ಪ, ಬೋಧಕೇತರ ಸಿಬ್ಬಂದಿ ಮಹಾಂತೇಶ, ಅನುಷಾ, ಸಂಜನಾ, ಸುರೇಶ ಕಿನ್ನಾಳ, ಹಸನ್, ಗ್ರಂಥಪಾಲಕ ಬೀರಲಿಂಗೇಗೌಡ ಸೇರಿದಂತೆ ವಿದ್ಯಾರ್ಥಿಗಳು ಇತರರು ಇದ್ದರು.ಗ್ರಂಥಾಲಯ ಸಹಾಯಕ ವಿರೂಪಾಕ್ಷಿ.ಬಿ ಸ್ವಾಗತಿಸಿದರು. ಬಸವರಾಜ ಕರುಗಲ್ ವಂದಿಸಿದರು.
ವರದಿ: ರುದ್ರಪ್ಪ ಭಂಡಾರಿ ಕೊಪ್ಪಳ