ಕಾರವಾರ :ಶಿರಸಿಯಿಂದ ಮಡಗಾಂವಗೆ ತೆರಳುತ್ತಿದ್ದ ಬಸ್ಸ ನಲ್ಲಿ ಮಹಿಳೆಯೊಬ್ಬಳು ತನ್ನ ಪರ್ಸ ಬಿಟ್ಟಿ ಹೋಗಿದ್ದು ಪೋಲೀಸ್ ಸಿಬ್ಬಂದಿಯ ಸಹಾಯದಿಂದ ಮರಳಿ ಪಡೆದ ಘಟನೆ ನಡೆದಿದೆ.
ಶಿರಸಿಯ ಸೀತಾ ಗೌಡ ಎನ್ನುವ ಮಹಿಳೆ ತನ್ನ ಊರಾದ ಬಡಾಳ ಬಳಿ ಬಸ್ ನಿಂದ ಇಳಿದಿರುತ್ತಾಳೆ ಸ್ವಲ್ಪ ಮುಂದಕ್ಕೆ ಹೊದಾಗ ತನ್ನ ಪರ್ಸ್ ಬಸ್ಸಿನಲ್ಲಿ ಬಿಟ್ಟಿರುವುದು ಗಮನಕ್ಕೆ ಬಂದಾಗ ಬಸ್ಸು ಕುಮಟಾ ಕಡೆ ಹೊರಟಿತ್ತು. ಗಾಬರಿಗೊಂಡ ಮಹಿಳೆ ಸೀತಾ ಅಕ್ಕಪಕ್ಕದ ಜನರಿಗೆ ವಿಷಯವನ್ನು ತಿಳಿಸಿದ್ದಳು.
ಪರ್ಸ್ ನಲ್ಲಿ ಇದ್ದ ಮೊಬೈಲ್ ಗೆ ಕರೆ ಮಾಡಿದ್ದಾಳೆ ನೆಟ್ವರ್ಕ್ ಇಲ್ಲದ ಕಾರಣ ಮೊಬೈಲ್ ಸಂಪರ್ಕ ಸಾಧ್ಯವಾಗಿಲ್ಲ ಮತ್ತಷ್ಟು ಗಾಬರಿ ಆಗಿ ಕಣ್ಣಿರು ಹಾಕುತ್ತಾ ಇರುವುದನ್ನು ನೊಡಿದ ಸ್ಥಳೀಯರು ತಕ್ಷಣ ಕುಮಟಾದ ಕತಗಾಲ ಪೋಲಿಸ್ ಚೆಕ್ ಪೊಸ್ಟಗೆ ಕರೆಮಾಡಿ ವಿಷಯವನ್ನು ತಿಳಿಸಿದ್ದಾರೆ.
ಕರ್ತವ್ಯದಲ್ಲಿ ಇದ್ದ ಕತಗಾಲ ಪೋಲಿಸ್ ಚೆಕ್ ಪೊಸ್ಟ್ ಸಿಬ್ಬಂದಿ ಮಲ್ಲಿಕಾರ್ಜುನ ಹುಗ್ಗಿ ಯವರು ಚೆಕ್ ಪೊಸ್ಟ್ ಬಳಿ ಬಸ್ಸು ಬರುವುದನ್ನು ನೊಡಿ, ಬಸ್ ನಿಲ್ಲಿಸಿ ಮಹಿಳೆ ಕುಳಿತ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಬಸ್ಸಿನಲ್ಲಿ ಪರ್ಸ್ ಸಿಕ್ಕಿದ್ದು, ಪರ್ಸ್ ಕಳೆದುಕೊಂಡ ಮಹಿಳೆಯ ಕುಟುಂಬದವರಿಗೆ ವಿಷಯವನ್ನು ತಿಳಿಸಿ ಕತಗಾಲ ಚಕ್ ಪೊಸ್ಟ್ ಬಳಿ ಬಂದು ಸ್ವೀಕರಿಸುವಂತೆ ತಿಳಿಸಿದ್ದಾರೆ.
ಸೀತಾ ಗೌಡ ಅವರ ತಂದೆಯವರು ಬಂದು ಮಲ್ಲಿಕಾರ್ಜುನ ಹುಗ್ಗಿ ಯವರಿಂದ ಕಳೆದುಕೊಂಡ ಪರ್ಸ್ ನ್ನು ಪಡೆದಿರುತ್ತಾರೆ.ಸರಿಯಾದ ಸಮಯಕ್ಕೆ ಸ್ಥಳಿಯರ ಕರೆಯನ್ನು ಸ್ವೀಕರಿಸಿ ಕಳೆದುಕೊಂಡ ಪರ್ಸ್ ನ್ನು ಮರಳಿಸಿದ ಕುಮಟಾ ಠಾಣೆಯ ಸಿಬ್ಬಂದಿ ಮಲ್ಲಿಕಾರ್ಜುನ ಹುಗ್ಗಿಯವರ ಕರ್ತವ್ಯಕ್ಕೆ ಸ್ಥಳಿಯರ ಮೆಚ್ಚುಗೆಗೆ ಪ್ರಾತ್ರರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ವರದಿಗಾರರು ರೂಪಾ