ಉತ್ತರ ಕನ್ನಡ ಜಿಲ್ಲೆಯ ಕಾರವಾರ ದಿಂದ ಗೋವಾ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 ಕಾಳಿನದಿಯ ಸೇತುವೆಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ನಿನ್ನೆ ರಾತ್ರಿ ಸುಮಾರು1:00 ಗಂ ಕುಸಿದು ಬಿದ್ದಪರಿಣಾಮ ಸೇತುವೆಯಲ್ಲಿ ಚಲಾಯಿಸುತ್ತಿದ ತಮಿಳುನಾಡಿನ ಮೂಲದ ಲಾರಿಯೊಂದು ನದಿಯಲ್ಲಿ ಬಿದ್ದದ್ದು ಲಾರಿಚಾಲಕ ಬಾಲ ಮುಗಿಲನ್ ಎಂಬಾತನು ,ಗೋವಾ ದಿಂದ ಹುಬ್ಬಳಿಗೆ ತೆರಳುತ್ತಿದ್ದ ಲಾರಿಯು ಕಾಳಿನದಿಯ ಸೇತುವೆ ಮೇಲೆ ವೇಗವಾಗಿ ಹೋಗುತ್ತಿದ್ದ ವೇಳೆ ಕುಸಿದು ಬಿದ್ದಿದೆ ಎನ್ನಲಾಗಿದೆ.
ಈ ವೇಳೆ ಲಾರಿ ಚಾಲಕ ಕಾಬಿನ ಮೇಲೆ ನಿಂತು ಕೂಗಿದ್ದು ಈ ವೇಳೆ ಸ್ಥಳಿಯ ಮೀನುಗಾರರು. ಕರಾವಳಿ ಕಾವಲು ಪಡೆ ಪೋಲಿರಿಗೆ ತಕ್ಷಣ ಮಾಹಿತಿ ನೀಡಿ ಆಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಸ್ಥಳಿಯ ಮೀನುಗಾರರು ಲಾರಿ ಚಾಲಕನನ್ನು ರಕ್ಷಣೆ ಮಾಡಿ ಚಾಲಕನ್ನು ತಕ್ಷಣ ಚಿಕಿತ್ಸೆಗಾಗಿ ಕಾರವಾರದ ಸರಕಾರಿ ಮೆಡಿಕಲ್ ಕಾಲೇಜಿನ ಅಸ್ಪತ್ರೆಗೆ ಸಾಗಿಸಲಾಗಿದೆ.
ಕಾಳಿ ನದಿಯ ಸೇತುವೆ ಮೂರುಕಡೆ ಕುಸಿದಿದ್ದು ಕಾರವಾರದ ಕಡೆ ಪ್ರಾರಂಭದಲ್ಲಿ ಸೇತುವೆ ಮೇಲ್ಚಾವಣಿ ಕುಸಿದ ಘಟನೆ ನೆಡೆದಿದೆ.ಈನ್ನು ಘಟನೆ ನಡೆದ ನಂತರಾ ಗೋವಾ ಕಾರವಾರ ಮಾರ್ಗದ ಎರಡು ಭಾಗದ ರಸ್ತೆ ಸಂಚಾರ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಸ್ಥಳಕ್ಕೆ ಬೇಟಿ ನಿಡಿದ ಅಕೋಲಾ ಕಾರವಾದ ಶಾಸಕರಾದ ಸತೀಶ್ ಶೈಲಾ ರವರು,ಸ್ಥಳಕ್ಕೆ ಪರಿಶೀಲನೆ ನೆಡೆಸಿ ನಂತರ ಸರಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಹೋಗಿ ಚಾಲಕನ ಬಗ್ಗೆ ವಿಚಾರಿಸಿ ಮಾತನಾಡಿದರು,ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಶಾಸಕರು ಸತೀಶ್ ಶೈಲಾ ರವರು ಮಾದ್ಯಮದ ಮುಂದೆ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ವರದಿಗಾರರು ರೂಪಾ