ಮಂಗಳೂರ : ಕುಕನೂರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಅಗಸ್ಟ್ 15ರಂದು ಗುರುವಾರ ದಿವಸ ಶ್ರೀ ಮಂಗಳೇಶ್ವರ ಕಲ್ಯಾಣ ಮಂಟಪ ಹತ್ತಿರ 6:30 ಗಂಟೆ ಸುಮಾರಿಗೆ 78ನೆಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜಾರುಗಲಿದ್ದು ಅಮೃತಗಳಿಗೆಯ ಸವಿ ನೆನಪಿಗಾಗಿ ಸಾರ್ವಜನಿಕ ವಲಯದಲ್ಲಿ ಸದ್ದಿಲ್ಲದೇ ಸೇವೆ ನೀಡಿದ ಮಹನೀಯರಿಗೆ ಕಾರ್ಯಕ್ರಮದಲ್ಲಿ ಪೂಜ್ಯರು, ಮುಖ್ಯ ಅತಿಥಿಗಳಿಂದ ಸನ್ಮಾನಿಸಿ ಗೌರವಿಸಲಾಗುವುದು.
ಸಾಧಕರ ಪಟ್ಟಿ ಮಲ್ಲಿಕಾರ್ಜುನ್ ತೊದಲಬಾಗಿ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ ಕೊಪ್ಪಳ, ಇವರ ಪರಿಸರ ತಂಡ ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವ ಕಾರ್ಯಕ್ಕೆ ಪ್ರಶಸ್ತಿ, ಶರೀಫ ಗ್ರಾಮ ಲೆಕ್ಕಾಧಿಕಾರಿ ಮಂಗಳೂರು ಉತ್ತಮ ಕೆಲಸದ ನಿರ್ವಹಣೆ ಸೇವೆಗಾಗಿ ಪ್ರಶಸ್ತಿ,ಮಂಜುನಾಥ್ ಪೂಜಾರ್ ರಕ್ತದಾನಿಗಳನ್ನು ಪ್ರೇರೇಪಿಸುವುದರ ಮೂಲಕ ರಕ್ತದಾನದ ಸಹಾಯ ಮಾಡುವ ಯುವಕನ ಕಾರ್ಯಕ್ಕೆ ಪ್ರಶಸ್ತಿ, ಅನಿಲ್ ಕುಮಾರ್ ಪಂಪಣ್ಣ ಜೀರ್ ಹಾವುಗಳ ರಕ್ಷಣೆ ಮಾಡುವ ಕಾಯಕಕ್ಕೆ ಪ್ರಶಸ್ತಿ, ಅಂಜಲಿ ಆರತಿ ಸಂಗೀತ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ದಿನಾಂಕ 11.08.2024 ರಂದು ಮಂಗಳೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ವಿಷಯ ಸ್ವಾತಂತ್ರ್ಯ ಹೋರಾಟ ನಡೆದು ಬಂದ ಹಾದಿ ಕುರಿತು ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಹಾಗೂ
ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಗಸ್ಟ್ 15ಕ್ಕೆ ಪ್ರಶಸ್ತಿ ನೀಡಿ ಪೂಜ್ಯರು ಮತ್ತು ಮುಖ್ಯ ಅತಿಥಿಗಳಿಂದ ಸನ್ಮಾನಿಸಲಾಗುವುದು.
ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಆಯೋಜಕರು ಪತ್ರಕರ್ತರು ಆದ ರವಿ ಆ ಗೋಲಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 8884552063 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಲಾಗಿದೆ.