ವರದಿ : ಆರತಿ ಗಿಳಿಯಾರು ಉಡುಪಿ ಜಿಲ್ಲೆ.
ಕುಂದಾಪುರ:
ಕೊಲ್ಲೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಹೊನ್ನಾವರದಿಂದ ಕೇರಳಕ್ಕೆ ಮೀನು ತುಂಬಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ವಾಹನವು ಹಿಂದಿನಿಂದ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನ. 20 ರಂದು ಬುಧವಾರ ರಾಷ್ಟ್ರೀಯ ಹೆದ್ದಾರಿ 66ರ ಕುಂಭಾಸಿ ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಸಂಭವಿಸಿದೆ.
ಗೋಕರ್ಣ, ಕೊಲ್ಲೂರು ದೇವರ ದರ್ಶನ ಪಡೆದು ಕೇರಳಕ್ಕೆ ಹೋಗುವ ಸಂದರ್ಭ ಇನ್ನೋವಾ ಕಾರಿನ ಚಾಲಕ ಕುಂಭಾಸಿ ಚಂಡಿಕಾ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಹೋಗಲೆಂದು ಸ್ವಲ್ಪ ಮುಂದು ಹೋಗಿ ಕಾರು ನಿಲ್ಲಿಸಿ ಮತ್ತೆ ಹಿಮ್ಮುಖವಾಗಿ ಬರುವ ವೇಳೆ ಹಿಂದಿನಿಂದ ಬಂದ ಇನ್ಸುಲೇಟರ್ ವಾಹನ ಚಾಲಕನು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ಜಖಂ ಗೊಂಡಿದೆ.
ಈ ಅಪಘಾತದಲ್ಲಿ ಇನೋವಾದಲ್ಲಿದ್ದ ಪ್ರಯಾಣಿಕರಾದ ಕೇರಳ ಪಯ್ಯನೂರು ಮೂಲದ ಮಧುಸೂದನ್(64), ಭಾರ್ಗವನ್(65), ನಾರಾಯಣ್, ವಾತ್ಸಲ, ಅನಿತಾ, ಚೈತ್ರಾ ಹಾಗೂ ಚಾಲಕ ಪೈಝಲ್(35) ಎಂದು ಗುರುತಿಸಲಾಗಿದೆ.
ನಾರಾಯಣ್, ವಾತ್ಸಲ, ಅನಿತಾ, ಚೈತ್ರಾ ಗಂಭೀರ ಗಾಯಗೊಂಡಿದ್ದು ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇನ್ಸುಲೇಟರ್ ಚಾಲಕ ಹೊನ್ನಾವರದ ಮಹೇಶ್ ಸೇರಿ ಉಳಿದರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಗೊಂಡಿದೆ.
ಅಲ್ಲದೆ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ರಾಣಾಧಿಕಾರಿಗಳಾದ ಪ್ರಸಾದ್ ಮತ್ತು ಸುದರ್ಶನ್ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…