ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

ವರದಿ : ಆರತಿ ಗಿಳಿಯಾರು ಉಡುಪಿ ಜಿಲ್ಲೆ


ಉಡುಪಿ : ನ.21
ಕುಂದಾಪುರ ತಾಲ್ಲೂಕಿನ ಅಮಾಸ್ಯೆ ಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತೊಂಬಟ್ಟು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಪರದಾಡುವಂತ ಪರಿಸ್ಥಿತಿಯಾಗಿದೆ.

ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ತಿಳಿಸಿರುವಂತೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಇಡೀ ವಿಶ್ವಕ್ಕೆ ಸಂವಿಧಾನದ ಮೂಲಕ ತಿಳಿಸಿರುತ್ತಾರೆ.

ಕುಂದಾಪುರ ತಾಲ್ಲೂಕು ದಂಡಾಧಿಕಾರಿಯವರು ಇದೇ ಶಿಕ್ಷಣವನ್ನು ಪಡೆದು  ಹಾಟ್ ಸೀಟ್ನಲ್ಲಿ ಕುಳಿತು ತನಗೆ ಖುಷಿ ಬಂದ ಹಾಗೆ ದರ್ಬಾರ್ ಮಾಡಿಕೊಂಡು ಶಾಲೆಗೆ ಹೋಗಲು ದಾರಿ ಇಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರ ನೀಡದೆ ದರ್ಬಾರ್ ಮಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.


ಈ ದಾರಿಯು ತೊಂಬಟ್ಟು ಸಾರ್ವಜನಿಕರು ಸರಿ ಸುಮಾರು 70 ವರ್ಷಗಳಿಂದಲೂ ನಡೆದಾಡುಕೊಂಡು ಬಂದಿರುವ ಕಾಲುದಾರಿಯಾಗಿದ್ದು ಈಗ ಆ ದಾರಿಯನ್ನು ವಿಠಲ ಶೆಟ್ಟಿ ಎನ್ನುವವರು ಆರು ತಿಂಗಳಿಂದ ಬೇಲಿ ಹಾಗೂ ಗೇಟ್ ಹಾಕಿ ಬಂದ್ ಮಾಡಿರುತ್ತಾರೆ. ಈ ಭೂಮಿಯು  ವಿಠಲ್ ಶೆಟ್ಟಿಯವರಿಗೆ ಡಿಕ್ಲರೇಷನ್ ಕಾಯ್ದೆ ಅಡಿಯಿಂದ ಪಡೆದುಕೊಂಡಿರುತ್ತಾರೆ ಎನ್ನುವ ಮಾಹಿತಿಯು ತಿಳಿದು ಬಂದಿರುತ್ತದೆ.

ಈಗಾಗಲೇ ವಿಠ್ಠಲ್ ಶೆಟ್ಟಿ ಅವರು ಡಿಕ್ಲರೇಷನ್ ಕಾಯಿದೆ ಅಡಿಯಲ್ಲಿ ಪಡೆದುಕೊಂಡಿರುವ ಭೂಮಿಯ ಸುತ್ತಮುತ್ತ ಸಾರ್ವಜನಿಕರಿಗೆ ಹೋಗಲು  ರಸ್ತೆ ವ್ಯವಸ್ಥೆ ಅಥವಾ ಸೇತುವೆ ಅಂತಹ ಮೂಲಭೂತ ಸೌಕರ್ಯಗಳು ಬೇಕಾದ ಸಂದರ್ಭದಲ್ಲಿ ಡಿಕ್ಲರೇಷನ್ ನೀಡುವ ಮೊದಲು  ಎಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಆ ವ್ಯಕ್ತಿಗೆ ಡಿಕ್ಲರೇಷನ್ ಭೂಮಿಯನ್ನು ನೀಡಬೇಕು ಎಂದು ಷರತ್ತು ಇದ್ದು,ಅಧಿಕಾರಿಗಳು ಸಾರ್ವಜನಿಕರು ಹೋಗುವ ರಸ್ತೆ ಇರುವ ವಿಚಾರವನ್ನು ಪರಿಗಣನೆಗೆ ತರದೆ ವಿಠ್ಠಲ್ ಶೆಟ್ಟಿ ಎಂಬುವವರಿಗೆ ಡಿಕ್ಲರೇಷನ್  ಭೂಮಿಯನ್ನು ನೀಡಿ ಸಾರ್ವಜನಿಕರಿಗೂ ಹಾಗೂ ಶಾಲಾ ವಿದ್ಯಾರ್ಥಿಗಳಿಗೂ ಹೋಗಲು ದಾರಿ ಇಲ್ಲದೆ ಪರದಾಡುವಂತ ಪರಿಸ್ಥಿತಿಯಾಗಿದೆ. ಇದೇ ವಿಚಾರವಾಗಿ ಸ್ಥಳೀಯ ಸಾರ್ವಜನಿಕರಿಗೂ ಹಾಗೂ ವಿಠ್ಠಲ್ ಶೆಟ್ಟಿ ಅವರಿಗೂ ಠಾಣೆಯಲ್ಲಿ ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಆದುದರಿಂದ ವಿಠ್ಠಲ್ ಶೆಟ್ಟಿಯವರಿಗೆ ಡಿಕ್ಲರೇಷನ್ ನೀಡಿರುವ ಭೂಮಿಯನ್ನು ರದ್ದುಗೊಳಿಸುವ ಅಧಿಕಾರ ಅಧಿಕಾರಿಗಳಿಗಿದ್ದು ಅದನ್ನು ಕೂಡಲೇ ರದ್ದುಗೊಳಿಸಿ  ಶಾಲಾ ವಿದ್ಯಾರ್ಥಿಗಳಿಗೆ  ಹಾಗೂ ಸಾರ್ವಜನಿಕರಿಗೂ ಹೋಗಲು ದಾರಿ  ಮಾಡಿ ಕೊಡ ಬೇಕು ಕೊಡ ಬೇಕು ಎಂದು ಈ ಭಾಗದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅಗ್ರಹಿಸಿದ್ದಾರೆ.

ಮಚ್ಚಟ್ಟು ಗ್ರಾಮದ ವಿದ್ಯಾರ್ಥಿಗಳಿಗೆ ತೊಂಬಟ್ಟು ಶಾಲೆಗೆ ಹೋಗಲು ದಾರಿ ಇಲ್ಲ ಎನ್ನುವ ವಿಚಾರ ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರ ಗಮನಕ್ಕೆ ಇದ್ದು ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕುಂದಾಪುರ ತಾಲ್ಲೂಕು ದಂಡಾಧಿಕಾರಿಯವರಿಗೆ ಸರಿಯಾದ ವರದಿಯನ್ನು ಈಗಾಗಲೇ ನೀಡಿ ಮಕ್ಕಳಿಗೆ ಸಾರ್ವಜನಿಕರಿಗೆ ಸಹಕಾರವನ್ನು ನೀಡಿರುತ್ತಾರೆ.

ಕುಂದಾಪುರ ತಾಲ್ಲೂಕು ತಹಶೀಲ್ದಾರ್ ಶೋಭಾ ಲಕ್ಷ್ಮಿ ಇವರಿಗೆ ಸ್ಥಳೀಯ ಆಡಳಿತಾಧಿಕಾರಿಗಳು ವರದಿ ನೀಡಿ 5 ತಿಂಗಳಾದರೂ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ ಇವರು ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.

ಈ ವಿಚಾರ ಜಿಲ್ಲಾಧಿಕಾರಿಯವರ ಗಮನಕ್ಕೆ ಇದ್ದು ವಿಠ್ಠಲ್ ಶೆಟ್ಟಿ ಅವರಿಗೆ ಡಿಕ್ಲರೇಷನ್ ಭೂಮಿ ಮಂಜೂರಾಗಿದೆ ಎನ್ನುವ ವಿಚಾರವನ್ನು ಜಿಲ್ಲಾಧಿಕಾರಿಯವರಿಗೆ ತಿಳಿಸದೆ ವಿಟ್ಟಲ್ ಶೆಟ್ಟಿ ಅವರ ಪಟ್ಟ ಭೂಮಿ ಎಂದು ತಹಶೀಲ್ದಾರ್ ಶೋಭಾ ಲಕ್ಷ್ಮಿಯವರು ಜಿಲ್ಲಾಧಿಕಾರಿಯವರಿಗೆ ಹೇಳಿಕೆ ನೀಡಿರುತ್ತಾರೆ ಎಂದು ಸಾರ್ವಜನಿಕರು ತಿಳಿಸಿರುತ್ತಾರೆ.

ವಿಠ್ಠಲ್ ಶೆಟ್ಟಿ ಎನ್ನುವವರು ಎಕ್ಕರೆಗಟ್ಟಲೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸಹ ತಹಶೀಲ್ದವರ ಗಮನಕ್ಕಿದ್ದು ಒತ್ತುವರಿ ತೆರುವುಗೊಳಿಸುವ ಯಾವುದೇ ಕಾರ್ಯವನ್ನು ನಡೆಸಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಕುಂದಾಪುರ ತಾಲ್ಲೂಕು ದಂಡಾಧಿಕಾರಿಯವರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಾಲೆಗೆ ಹೋಗಲು ದಾರಿಯನ್ನು ಅನುವು ಮಾಡಿಕೊಡಬೇಕಾದ ಅಧಿಕಾರಿಗಳೇ ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ..! ವಿಠ್ಠಲ್ ಶೆಟ್ಟಿ ಅವರಿಗೆ ಡಿಕ್ಲರೇಷನ್ ಇಂದ ಬಂದಿರುವ ಭೂಮಿಯನ್ನು ರದ್ದುಗೊಳಿಸಿ ಸಾರ್ವಜನಿಕರಿಗೆ ಹೋಗಲು ದಾರಿಯನ್ನು ಮಾಡಿಕೊಟ್ಟು ಸಹಕಾರ ನೀಡದಿರುವುದು ಸರಿಯಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ. 

ಇದೇ ವಿಚಾರ ಸ್ಥಳೀಯ ಶಾಸಕರಾದ ಗುರುರಾಜ್ ಗಂಟಿ ಹೊಳೆಯವರು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತಿರುವುದು ಸಾರ್ವಜನಿಕರಲ್ಲಿ ಬೇಸರ ವ್ಯಕ್ತವಾಗಿರುವುದಂತೂ ಸತ್ಯವಾಗಿದೆ. ಆದರೆ ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿ  ಇವರು ಇದರ ಬಗ್ಗೆ ಮುತುವರ್ಜಿ ವಹಿಸಿ ಶಾಲಾ ವಿದ್ಯಾರ್ಥಿಗಳಿಗೆ ದಾರಿಯುವನ್ನು ಅನು ಮಾಡಿಕೊಡಬೇಕು ಎಂದು ತಹಶೀಲ್ದರಿಗೆ   ತಿಳಿಸಿರುತ್ತಾರೆ.


ಮಾಧ್ಯಮದವರು ಇದೇ ವಿಚಾರವಾಗಿ ತಾಲ್ಲೂಕು ದಂಡಾಧಿಕಾರಿಯವರಿಗೆ ಮಾಧ್ಯಮಕ್ಕೆ ಹೇಳಿಕೆ ನೀಡಲು ಕೇಳಿದಾಗ  ದಂಡಾಧಿಕಾರಿಯವರು ಕಣ್ಮರೆಯಾಗಿ ಓಡಿ ಹೋದದ್ದಂತೂ  ಸತ್ಯವಾಗಿದೆ.

ಇದೇ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ಇದರ ಬಗ್ಗೆ ಕೂಡಲೇ ತನಿಖೆ ನಡೆಸಿ ತಾಲ್ಲೂಕು ದಂಡಾಧಿಕಾರಿಯ ನಿರ್ಲಕ್ಷತನವನ್ನು ತನಿಖೆ ನಡೆಸಿ ಕೂಡಲೇ ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು. ಉಡುಪಿ : ಕುಂದಾಪುರ ತಾಲ್ಲೂಕಿನ ದಿನಾಂಕ 20-11-2024 ಗ್ರಾಮ ಸಭೆ ನಡೆದಿದ್ದು ಗ್ರಾಮದ ಕೆಲವೊಂದು ಮೂಲಭೂತ ಸೌಕರ್ಯಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೊಂದು ನಡೆದಿತ್ತು.…

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ವರದಿ ನಾಗೇಶ್ ಸುಬ್ರಹ್ಮಣ್ಯ ಸುಬ್ರಹ್ಮಣ್ಯ ನ.20: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನಿಗೆ ಈ ವರ್ಷ ರಾಷ್ಟ್ರ ಅಧ್ಯಕ್ಷರಾದ ಚಿತ್ರ ಕುಮಾರ್ ಅವರು ಮಂಗಳವಾರ ಅಧಿಕೃತ ಭೇಟಿ ನೀಡಿದರು. ಆರಂಭದಲ್ಲಿ ರಾಷ್ಟ್ರ ಅಧ್ಯಕ್ಷರನ್ನ ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ…

    Leave a Reply

    Your email address will not be published. Required fields are marked *

    You Missed

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಗ್ರಾಮಸಭೆ,ಅಧಿಕಾರಿಗಳು ಹಾಗೂ ಪಿ. ಡಿ. ಓ ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ರಾಷ್ಟ್ರಾಧ್ಯಕ್ಷರ ಅಧಿಕೃತ ಭೇಟಿ.

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಷಷ್ಠಿ ಕುರಿತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸಭೆ

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಇನ್ನೋವಾ ಕಾರಿಗೆ ಇನ್ಸುಲೇಟರ್ ಮೀನು ಗಾಡಿ ಡಿಕ್ಕಿ ನಾಲ್ವರ ಸ್ಥಿತಿ ಗಂಭೀರ…!

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಕುಂದಾಪುರ ತಾಲ್ಲೂಕು ದಂಡಾಧಿಕಾರಿ ಶೋಭಾ ಲಕ್ಷ್ಮಿ  ಕರ್ತವ್ಯ ನಿರ್ವಹಿಸದೆ ಹೈಡ್ರಾಮ  ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಇಲ್ಲದೆ ಅಧಿಕಾರಿಗಳಿಂದ ಪಂಗನಾಮ…!  

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ