ಉಡುಪಿ ಲಕ್ಷ್ಮೀ ನಗರದ ಪಾಳೆಬೆಟ್ಟು ನಿವಾಸಿ ಸಿಟಿ ಬಸ್ ಚಾಲಕ  ಪ್ರಸಾದ್ ಅನುಮಾನಸ್ಪದ ಸಾವು

ವರದಿ : ಆರತಿ ಗಿಳಿಯಾರು


ಉಡುಪಿ ಲಕ್ಷ್ಮೀ ನಗರದ ಪಾಳೆಬೆಟ್ಟು ನಿವಾಸಿ ಸಿಟಿ ಬಸ್ ಚಾಲಕ  ಪ್ರಸಾದ್ ಅನುಮಾನಸ್ಪದ ಸಾವು…!

ಉಡುಪಿ : ನ.18
ಮಲ್ಪೆ ಠಾಣೆ ವ್ಯಾಪ್ತಿಯ ಲಕ್ಷ್ಮಿ ನಗರ ಪಾಳೆಪಟ್ಟು ನಿವಾಸಿ ಪ್ರಸಾದ್( 40) ರವರು ಮನೆಯ ಸಮೀಪವೇ ಮೃತಪಟ್ಟಿರುತ್ತಾರೆ.

ಇವರ ಈ ಸಾವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದು ಮಾನ್ಯ ವರಿಷ್ಠಾಧಿಕಾರಿಯವರು ತಕ್ಷಣವೇ ಉನ್ನತ ಮಟ್ಟದ ತನಿಖೆ ಮಾಡುವಂತೆ ಸಾರ್ವಜನಿಕರು ಈ ಭಾಗದಲ್ಲಿ ಒತ್ತಾಯಿಸಿರುತ್ತಾರೆ.

ಶುಕ್ರವಾರ ರಾತ್ರಿ ಮನೆ ಸಮೀಪವೇ ನಡೆದ ಘಟನೆಯನ್ನು ಮರು ದಿನ ಮಧ್ಯಾಹ್ನದ ಹೊತ್ತಿಗೆ  ಮೃತ ದೇಹ ನೀರಿನ ಡ್ರಮ್ ನ ಒಳಗೆ ದೇಹದ ಕಾಲು ಇದ್ದು, ಮೃತ ದೇಹದ ಹಲವು ಭಾಗಗಳು ಗಾಯಗಳಾಗಿದ್ದು ಸಂಶಯಕ್ಕೆ ಎಡ ಮಾಡಿಕೊಟ್ಟಿದೆ.

ಈಗಾಗಲೇ ದಿನ ಬೆಳಗಾದರೆ ಜಿಲ್ಲೆಯಲ್ಲಿ ಕೊಲೆ ಸುಲಿಗೆ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಉಡುಪಿ ಭಾಗಗಳಲ್ಲಿ ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಮಹಿಳೆಯರು, ಹಿರಿಯ ನಾಗರಿಕರು ನಿರ್ಭೀತಿಯಿಂದ ಓಡಾಡುವುದೇ ಕಷ್ಟದ ಪರಿಸ್ಥಿತಿ ಉಂಟಾಗಿದೆ.

ಈಗಾಗಲೇ ಬ್ರಹ್ಮಾವರ ಠಾಣೆಯಲ್ಲೂ ಸಹ ಲಾಕಪ್ ಡೆತ್ ನಂತಹ ದೊಡ್ಡ ಪ್ರಕರಣ ಒಂದು ನಡೆದಿದ್ದು ಸಾರ್ವಜನಿಕ ವಲಯಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ಪ್ರಕರಣದ ತಿರುವು ಒಂದೊಂದಾಗಿ ಹೊರಬೀಳುತ್ತಿದ್ದು ನೋಡಿದರೆ ಜಿಲ್ಲೆಯಲ್ಲಿ ಸಾರ್ವಜನಿಕರ ಗತಿ ಏನು? ಎನ್ನುವ ಪ್ರಶ್ನೆ ಮೂಡಿದ್ದು ಸತ್ಯವಾಗಿದೆ.

ಈ ಹಿಂದೆ ಬ್ರಹ್ಮಾವರ ವ್ಯಾಪ್ತಿಯ ಹನೆ ಹಳ್ಳಿಯಲ್ಲಿ ದಲಿತ ಯುವಕನ ಮೇಲೆ ಗುಂಡಿನ ದಾಳಿ ಮಾಡಿ ಉಡುಪಿ ಜಿಲ್ಲೆಯಲ್ಲಿ ದೊಡ್ಡಮಟ್ಟದ  ಸದ್ದು ಮಾಡಿದ್ದು ಈ ಪ್ರಕರಣದ ತಿರುವು ಎತ್ತ ಕಡೆ ಹೋಗಿದೆ ಎನ್ನುವುದು ಸಹ ಸದ್ದಾಗದೆ ಹಾಗೆ ಉಳಿದಿರುವುದು ಸಹ ಸತ್ಯವಾಗಿದೆ. ಅದೊಂದು ದಿನ ಹನಿ ಹಳ್ಳಿ ವ್ಯಾಪ್ತಿಯಲ್ಲಿ ಗುಂಡಿನ ಸದ್ದು ಮಾಡಿದ್ದಾದರೂ ಯಾರು? ಯಾಕಾಗಿ ಆತನ ಮೇಲೆ ದಾಳಿ ನಡೆಸಿದರು? ಅವರ ಉದ್ದೇಶವಾದರೂ ಏನಿತ್ತು? ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಇವತ್ತು ಕೂಡ ಉತ್ತರ ಸಿಕ್ಕದೆ ಹಾಗೆಯೇ ಉಳಿದಿರುವುದಂತೂ ಸತ್ಯವಾಗಿದೆ.

ಇದೇ ರೀತಿ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟು ನಡೆಯುತ್ತಿದ್ದು ಪ್ರಕರಣದ ತಿರುವು ನಿಂತ ನೀರಂತೆ ಅಲ್ಲೇ ನಿಂತಿದ್ದು ಎತ್ತ ಕಡೆ ಸಾಗದೆ ಹಾಗೆ ಇದ್ದ ವಿಚಾರಗಳು ಸಾರ್ವಜನಿಕ ವಲಯಗಳಲ್ಲಿ ಪ್ರಶ್ನೆಯಾಗಿ ಉಳಿದಿರುವ ಪ್ರಕರಣಗಳಿಗೆ ಉತ್ತರ ಸಿಗುವುದಾದರೂ ಯಾವಾಗ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೇ ಇರುವುದನ್ನು ಕುತೂಹಲದಿಂದ   ಸಾರ್ವಜನಿಕರು ಕಾಯುತ್ತಿರುವುದಂತೂ  ಸತ್ಯವಾಗಿದ್ದು ನಮ್ಮ ಉಡುಪಿ ಜಿಲ್ಲಾಡಳಿತ ವ್ಯವಸ್ಥೆ ಎತ್ತಕಡೆ ಸಾಗುತ್ತಿದೆ ಎನ್ನುವ ಪ್ರಶ್ನೆ  ಸಾರ್ವಜನಿಕ ವಲಯಗಳಲ್ಲಿ ಪ್ರಶ್ನೆಯಾಗಿ ಉಳಿದಿರುವುದು ಸತ್ಯವಾಗಿದೆ. ಇಂತಹ ಜೀವ ಭಯ ಹುಟ್ಟಿಸುವಂತಹ ಪ್ರಕರಣಗಳಿಗೆ ಪೋಲಿಸ್ ಇಲಾಖೆಗಳು ಆದಷ್ಟು ಬೇಗ ಕಡಿವಾಣ ಹಾಕಲು ಸಾರ್ವಜನಿಕರ ಸಹಕಾರವು ಇರುತ್ತದೆ ಎಂದು ಈ ಮೂಲಕ ತಿಳಿಸಿರುತ್ತಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಘನ ಘೋರ ಕೃತ್ಯಗಳ ಬಗ್ಗೆ ಜಿಲ್ಲೆಯ ಶಾಸಕರುಗಳು ಕೂಡ ಇದರ ಬಗ್ಗೆ ಯೋಚನೆ ಮಾಡಬೇಕಾದಂತಹ ವಿಚಾರವಾಗಿದ್ದು ಜನಪ್ರತಿನಿಧಿಗಳಾಗಿ ಜನರ ರಕ್ಷಣೆಯ ಜೊತೆಗೆ ಜನರ ಆಗು ಹೋಗುಗಳ ಬಗ್ಗೆ ವಿಚಾರವಾದ ಮಾಡಬೇಕಾದಂತಹ ಜನಪ್ರತಿನಿಧಿಗಳು ಸುಮ್ಮನೆ ಕೂತು ನೋಡಿಯೂ ನೋಡದಂತೆ ಸುಮ್ಮನಿರುವ ಕಾರಣದ ಹಿಂದಿನ ಗುಟ್ಟಾದರೂ ಏನು? ಎನ್ನುವ ಅನುಮಾನ ಸಾರ್ವಜನಿಕ ವಲಯಗಳಲ್ಲಿ ಕೇಳಿಬಂದಿದೆ.

ಜಿಲ್ಲಾಡಳಿತ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಸಬೇಕಾದ ಶಾಸಕರೇ ತಮಗೆ ಸಂಬಂಧವಿಲ್ಲ ಎನ್ನುವ ರೀತಿ ಕುಳಿತಿರುವುದು ಸರಿಯಲ್ಲ..! ಇಲ್ಲಿನ ಸಾರ್ವಜನಿಕರು ಮತ ನೀಡಿ ಅಧಿಕಾರವನ್ನು ಸರಿಯಾದ ವ್ಯವಸ್ಥಿತ ರೀತಿಯಲ್ಲಿ ನಡೆಸಿ ಎಂದು ಅಧಿಕಾರವನ್ನು ನಿಮ್ಮ ಕೈಗೆ ಕೊಟ್ಟರೆ ದಿನ ಬೆಳಗಾದರೆ ಶಾಸಕರ ಪ್ರಕರಣಗಳೇ ಹೊರ ಬರುತ್ತಿರುವುದು ಬೇಸರದ ವಿಚಾರವಾಗಿದೆ ಕೂಡಲೇ ಜಿಲ್ಲೆಯಲ್ಲಿ ಜನರ ಜೀವದ ಬಗ್ಗೆ ರಕ್ಷಣೆ ಮಾಡುವ ವಿಚಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡುವ ಹೊಣೆ ನಿಮ್ಮದ್ದಾಗಿದ್ದು ಪುಂಡಾಟ ಮಾಡುವ ಪುಂಡರಿಗೆ ಸರಿಯಾದ ಕಾನೂನಿನ ಕಡಿವಾಣ ಹಾಕ ಬೇಕಾದದ್ದು ನಿಮ್ಮ ಜವಾಬ್ದಾರಿ ಎಂದು ಸಾರ್ವಜನಿಕರು ಈ ಮೂಲಕ ತಿಳಿಸಿರುತ್ತಾರೆ.

ಆತ್ಮಹತ್ಯೆ ಎಂದು ಬಿಂಬಿಸುವ ಈ ಘಟನೆ ಹಲವು ಸಂಶಯಾಸ್ಪದ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿರುವುದರಿಂದ ಊರಿನ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದ್ದು ಮೃತನ ಮನೆಯವರನ್ನು ಹಾಗೂ ಆಸು ಪಾಸಿನವರನ್ನು ಸೂಕ್ತವಾಗಿ ತನಿಖೆ ನಡೆಸಿ ಈ ರೀತಿ ವಿಚಿತ್ರವಾಗಿ ಮೃತ ಪಟ್ಟಿರುವ ಈತನಿಗೆ ಹಾಗೂ ಈತನ ಮನೆಯವರೆಗೂ ನ್ಯಾಯ ಸಿಗುವಂತೆ  ಲಕ್ಷ್ಮೀ ನಗರದ ಸಾರ್ವಜನಿಕರು ಒತ್ತಾಯಿಸಿದ್ದಾರೆ

  • santhosha ram

    “ಮೆಟ್ರೋ ನ್ಯೂಸ್ 7” ಚಾನೆಲ್ ಸ್ಥಳೀಯ ವಿಚಾರಗಳಿಗೆ ಸಂಬಂಧಪಟ್ಟ ಸುದ್ದಿಯಿಂದ ಹಿಡಿದು ರಾಜ್ಯಮಟ್ಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನವಾಗಿದೆ. 🙏

    Related Posts

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ವರದಿ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ ನ 20ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್ ತಿಳಿಸಿದರು. ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ…

    Leave a Reply

    Your email address will not be published. Required fields are marked *

    You Missed

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅತ್ಯಗತ್ಯ / ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಟ್

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕೆ.ಎಸ್.ಹೆಗಡೆ  ಮಂಗಳೂರು ಆಸ್ಪತ್ರೆಯ ಖ್ಯಾತ ವೈದ್ಯರಿಂದಭಟ್ಕಳ್  ತಾಲೂಕಾ  ಆಸ್ಪತ್ರೆಯಲ್ಲಿ ನವೆಂಬರ್ 24 ರಂದು ವೈದ್ಯಕೀಯ ಶಿಬಿರ.

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಕನಕದಾಸರು ನಾಡು ಕಂಡ ಅಪ್ರತಿಮ ದಾಸ ಶ್ರೇಷ್ಠರು / ಶಾಸಕ ಶರತ್ ಬಚ್ಚೇಗೌಡ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ

    ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ / ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಿಂದ ಸನ್ಮಾನ