ವರದಿ :ಲೋಕೇಶ್ ನಾಯ್ಕ್ ಭಟ್ಕಳ
ಭಟ್ಕಳದ ಪ್ರಮುಖ ಭಾಗ ಮುರುಡೇಶ್ವರದ ಕಡಲ ತೀರದಲ್ಲಿ
2024 -ವಿಶ್ವ ಮೀನುಗಾರಿಕೆ ದಿನ ಆಚರಣೆ ಹಾಗೂ ರಾಜ್ಯ ಮಟ್ಟದ ಮತ್ಸ್ಯಮೇಳ
21-11-2024 ರಿಂದ 23-11-2024 ಕಾರ್ಯಕ್ರಮ ಈ ಉದ್ಘಾಟನೆಗೊಳ್ಳಲಿದ್ದು ಉದ್ಘಾಟನೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಕರ್ನಾಟಕ ಸರಕಾರ.ಹಾಗೂ ವಿಶೇಷ ಆವ್ಹಾನಿತಾರಾಗಿ ಮಾನ್ಯ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ರವರೊಂದಿಗೆ ‘ಮತ್ಸ್ಯಮೇಳ 2024 ಕಾರ್ಯಕ್ರಮವನ್ನು ಆರ್. ಎನ್. ಎಸ್. ಗಾಲ್ಫ್ ಕ್ಲಬ್ ರೆಸಾರ್ಟ್, ಮುರುಡೇಶ್ವರ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ನವೆಂಬರ್ 21, ರಂದು ಸಂಜೆ 4:00 ಗಂಟೆಗೆ ಉದ್ಘಾಟಿಸಲಿದ್ದು ಮಾನ್ಯ ಸಭಾಪತಿಗಳು ಶ್ರೀ ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಕರ್ನಾಟಕ ಸರಕಾರ . ಮಾನ್ಯ ಸಭಾಧ್ಯಕ್ಷರು ಶ್ರೀ ಯು. ಟಿ. ಖಾದರ್ ಪರೀದ್ ವಿಧಾನಸಭಾ ಕರ್ನಾಟಕ ಸರಕಾರ. ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕರ್ನಾಟಕ ಸರಕಾರ ಮಾನ್ಯ ಶ್ರೀ ಮಾಂಕಾಳು ಎಸ್. ವೈದ್ಯ.ಮತ್ತು ಎಲ್ಲಾ ರಾಜ್ಯ ಸಂಪುಟ ದರ್ಜೆ ಸಚಿವರು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕವು ಪ್ರಮುಖ ಮೀನುಗಾರಿಕಾ ರಾಜ್ಯವಾಗಿದ್ದು, 320-ಕಿಲೋಮೀಟರ್ ಕರಾವಳಿ ತೀರವನ್ನು ಮತ್ತು 5,813 ಕಿಲೋಮೀಟರ್ ನದಿ ಭಾಗಗಳನ್ನು ಒಳಗೊಂಡಿದೆ. ವಾರ್ಷಿಕವಾಗಿ 1 ರಿಂದ 12 ಮಿಲಿಯನ್ ಟನ್ ಮೀನು ಉತ್ಪಾದಿಸಲಾಗುತ್ತಿದೆ. ಮತ್ತು ರೂ.4048.99 ಕೋಟಿ ಮೌಲ್ಯದ 2.48 ಲಕ್ಷ ಮೆಟ್ರಿಕ್ ಟನ್ ಮೀನುಗಳನ್ನು ರಫ್ತು ಮಾಡಲಾಗುತ್ತಿರುವುದು ವಿಶೇಷವಾಗಿದೆ.
ಅತಿಯಾದ ಮೀನುಗಾರಿಕೆಯಿಂದ ಕ್ಷೀಣಿಸುತ್ತಿರುವ ಮೀನುಹಿಡುವಳಿ, ಮೀನುಮರಿಗಳನ್ನು ಹಿಡಿಯುವ ಸಣ್ಣ ಗಾತ್ರದ ಬಲೆ ಬಳಕೆ, ಅನೇಕ ಉದ್ದೇಶಿತವಲ್ಲದ ಮೀನು ಹಿಡುವಳಿ, ಮಳೆಗಾಲದಲ್ಲಿ ಮೀನುಗಾರಿಕೆ, ಪರಿಸರ ಮಾಲಿನ್ಯದಿಂದ ಸಮುದ್ರ ಮೀನು ಉತ್ಪಾದನೆಯು ಕಡಿಮೆಯಾಗುತ್ತಿದ್ದು.ಸದರಿ ವಲಯದಲ್ಲಿ ಮೀನು ಉತ್ಪಾದನೆಯನ್ನು ಹೆಚ್ಚಿಸುವುದು ಒಂದು ಸವಾಲಾಗಿರುತ್ತದೆ. ಆಫ್ರಿಕನ್ ಕ್ಯಾಟ್ಫಿಶ್ನಂತಹ ವಿದೇಶಿ ಜಾತಿಗಳ ಪರಿಚಯ ಒಳನಾಡು ಮೀನುಗಾರಿಕೆಯಲ್ಲಿ ಪ್ರಮುಖ ಸಮಸ್ಯೆಗಳಾಗಿವೆ.
ಮತ್ಸಮೇಳ-2024 ರ ನವೆಂಬರ್ 21ರಿಂದ ಪ್ರಾರಂಭ ವಾಗಲಿರುವ ವಿಶ್ವ ಮೀನುಗಾರಿಕಾ ದಿನಾಚರಣೆ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ಎಸ್.ವೈದ್ಯ ಇಂದು ಸ್ಥಳ ಪರೀಶೀಲನೆ ನಡೆಸಿ ಕಾರ್ಯಕ್ರಮ ತಯಾರಿ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ ಸಚಿವರು
ಕರಾವಳಿ ಭಟ್ಕಳದ ಪ್ರಮುಖ ಭಾಗವಾದ ಮುರುಡೇಶ್ವರದ ಕಡಲ ಕೀನಾರೆಯಲ್ಲಿ ಮತ್ಸ್ಯಮೇಳ-2024 ನಡೆಯುತ್ತಿದ್ದು ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು 60 ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ಷಾರಿಸ್ಟ್ಗಳು ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಲಿದ್ದಾರೆ.
ಈ ಮೇಳದಲ್ಲಿ ಸುರಂಗ ಅಕ್ಕೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ. , ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು ಅಲ್ಲಿ ತಜ್ಞರು ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚಿ,ಮೂರು ದಿನಗಳ ಕಾಲ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
*”ಮತ್ಸ್ಯಮೇಳ-2024″ ರ ಪ್ರಮುಖ ಆಕರ್ಷಣೆಗಳು*
ಅಕ್ಟೋರಿಯಂ ಗ್ಯಾಲರಿ,ಸುರಂಗ ಅಕ್ಕೇರಿಯಂ, ಸರ್ಕಾರಿ ಸಂಸ್ಥೆಗಳ ಮಳಿಗೆಗಳು, ಮೀನುಗಾರಿಕೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಮಳಿಗೆಗಳು,ಫೀಡ್ ಕಂಪನಿಗಳು, ಸಮುದ್ರ ಕಳೆ ಪ್ರದರ್ಶನ, ತಾಂತ್ರಿಕ ಗೋಷ್ಠಿಗಳು ಯಶಸ್ಸಿನ ಯಶೋಗಾಥೆಗಳು, ಮೀನು ಆಹಾರ ಮಳಿಗೆಗಳು, ಮನೋರಂಜನೆ ಅಲಂಕಾರಿಕ ಮೀನು ಮಾರಾಟ ನಡೆಯಲಿದೆ.
ಮೀನುಗಾರಿಕಾ ಕ್ಷೇತ್ರದ ಮಹತ್ವವನ್ನು ಗುರುತಿಸಿ ಮತ್ತು ಮೀನುಗಾರರ ನೈತಿಕ ಧೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆದ್ದರಿಂದ ರಾಜ್ಯ,ಜಿಲ್ಲೆ, ತಾಲೂಕಿನ,ಸಮಸ್ತ ಸಾರ್ವಜನಿಕರು ಮತ್ತು ಮೀನುಗಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿನಂತಿಸಲಾಗಿದೆ.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…