ವರದಿ :ಲೋಕೇಶ್ ನಾಯ್ಕ್,ಭಟ್ಕಳ.
ಭಟ್ಕಳ ನವೆಂಬರ್.4
ವಕ್ಫ್ ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಿಗೆ ನೋಟಿಸ್ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಇಂದು ಬಿಜೆಪಿ ಪಕ್ಷದ ನೇತೃತ್ವದಲ್ಲಿ ರಾಜ್ಯಾಂದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ತಾಲೂಕಿನಲ್ಲೂ ಬಿ.ಜೆ.ಪಿ ತಾಲೂಕಾ ಮಂಡಳದ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು
ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ವಕ್ಫ್ ಮಂಡಳಿಯ ಮೂಲಕ ರೈತರ ಜಮೀನುಗಳನ್ನು ಕೊಳ್ಳೆಹೊಡೆಯಲು ಹೊರಟಿದೆ. ಸ್ವಂತ ಜಮೀನುಗಳನ್ನು ಮಾರಾಟ ಮಾಡಿದಾಗಲೂ ಆರ್.ಟಿ.ಸಿ ಯಲ್ಲಿ ಹೆಸರು ನಮೂದಾಗಲು 45 ದಿನಗಳು ತಗಲುತ್ತದೆ.
ಆದರೆ ಸಿದ್ದರಾಮಯ್ಯ ಸರ್ಕಾರ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿ ರೈತರ ಜಮೀನನ್ನು ರಾತ್ರೋರಾತ್ರಿ ವಕ್ಫ ಮಂಡಳಿಯ ಹೆಸರಿಗೆ ವರ್ಗಾವಣೆ ಮಾಡುತ್ತಿದೆ ಎಂದು ಮಾಜಿ ಶಾಸಕ ಸುನಿಲ್ ನಾಯ್ಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ರೈತರಿಗೆ ಕೊಟ್ಟಿರುವ ನೋಟಿಸುಗಳನ್ನು ವಾಪಾಸ್ಸು ಪಡೆದುಕೊಳ್ಳುವ ನಿಟ್ಟಿನಲ್ಲಿ ಮಾತನಾಡುತ್ತಿದ್ದಾರೆ ನೋಟಿಸ್ ಜತೆಗೆ ಗೆಜೇಟ್ ನೋಟಿಪಿಕೇಶನ್ ಹಿಂಪಡೆಯಬೇಕು. ರೈತರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ.
ಇದು ಸಾಮಾನ್ಯ ಪ್ರಕರಣವಲ್ಲ ಈ ಪ್ರಕರಣವನ್ನು ಜನರು ಗಂಭೀರವಾಗಿ ಪರೀಗಣಿಸಬೇಕು. ಸಚಿವ ಮಂಕಾಳ ವೈದ್ಯರು ಕೇವಲ ಒಂದು ಧರ್ಮದ ಮತಧಾರರಿಂದ ಆಯ್ಕೆ ಆಗಿ ಬಂದವರಲ್ಲ. ಅವರ ಗೆಲುವಿಗೆ ಹಿಂದೂಗಳು ಕೂಡಾ ಕಾರಣವಾಗಿದ್ದು ಬೆಂಗಳೂರು ಕೇಂದ್ರಿಕೃತ ರಾಜಕಾರಣ ಬಿಟ್ಟು ಜನರ ಪರ ಮಾತನಾಡಿ ಎಂದರು.
ಬಿ.ಜೆ.ಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿ ಇತಿಹಾಸ ಪುಟದಲ್ಲಿ ಅತ್ಯಂತ ಕೆಟ್ಟ ಆಳ್ವಿಕೆ ಎಂದರೆ ಅದು ಔರಂಗಜೇಬ್ ನ ಕಾಲದ್ದಾಗಿದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ಅದಕ್ಕೂ ಮೀರಿದ ಕೆಟ್ಟ ಆಡಳಿತವಾಗಿದೆ.
ಈ ಸರ್ಕಾರದ ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಹೋರಾಟದ ಮುಲಕ ಪಡೆದುಕೊಳ್ಳಬೇಕಾದ ಸಂದರ್ಭ ಬಂದಿದೆ. ವಕ್ಫ್ ಬೋರ್ಡ್ ಎಂಬುದು ಕಾಂಗ್ರೇಸ್ ಹಾಗೂ ಜವಾಹಾರ್ ಲಾಲ್ ನೇಹರುರವರು ಹುಟ್ಟುಹಾಕಿದ ಪಾಪದ ಕೂಸು ಜಗತ್ತಿನ ಯಾವುದೇ ದೇಶದಲ್ಲಿ ಇಂತಹ ಕಾನೂನಿಲ್ಲ. 1954 ರಲ್ಲಿ ಹಿಂದುಗಳಿಗೆ ಮರಣ ಶಾಸನ ಬರೆಯಲು ಈ ಶಾಸನವನ್ನು ತರಲಾಗಿದೆ ಎಂದರು.
ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ ಸಿದ್ದರಾಮಯ್ಯ ಸರ್ಕಾರ 5 ಗ್ಯಾರಂಟಿಗಳನ್ನು ಘಂಟಾಘೋಷವಾಗಿ ಘೋಷಣೆ ಮಾಡಿತ್ತು ಆದರೆ 6 ನೇ ಗ್ಯಾರಂಟಿನ್ನು ಹಿಡನ್ ಅಜೆಂಡಾವಾಗಿ ಇಟ್ಟುಕೊಂಡು ಹಿಂದೂ ರೈತರ ಆಸ್ತಿಯನ್ನು ಕಬಳಿಸಿ ವಕ್ಫ್ ಬೋರ್ಡ್ ಕೈಗೆ ಕೊಡುತ್ತಿದೆ. ಮಹಿಳೆಯರು ಗ್ಯಾರಂಟಿ ಸ್ಕಿಂ ನಿಂದ ಸಿಗುವ 2000 ರೂಪಾಯಿಗಾಗಿ ಅಕೌಂಟ್ ಪರಿಶೀಲಿಸುವಂತೆ ಇನ್ನುಮುಂದೆ ಗಂಡಸರು ತಮ್ಮ ಫಹಣಿಯನ್ನು ಪರೀಶಿಲಿಸುವ ದಿನಗಳು ಬರಬಹುದು ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ ಸಚಿವ ಜಮೀರ್ ಅಹಮ್ಮದ್ ಖಾನ್ ಇಡೀ ಕಾಂಗ್ರೇಸ್ ಪಕ್ಷದ ಸಚಿವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿರುವ ಹಿಂದೂ ಶಾಸಕರು ವೋಟ್ ಬ್ಯಾಂಕ್ ರಾಜಕಾರಣದ ಸಲುವಾಗಿ ವಕ್ಫ್ ಮಂಡಳಿಯ ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಳದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಮಂಡಳದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಮಂಡಳ ಕಾರ್ಯದರ್ಶಿ ಜಗದೀಶ ನಾಯ್ಕ, ವಿಜೆತ್ ಶೆಟ್ಟಿ, ಮಂಡಳ ಉಪಾಧ್ಯಕ್ಷ ಗಣಪತಿ ದೇವಾಡಿಗ, ಸುನಿತಾ ಹೇರುರ್ಕರ್ ಮತ್ತಿತರರು ಇದ್ದರು.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…