ವರದಿ ರಾಜು ಮಹೇಂದ್ರಕರ
ಬೆಳಗಾವಿ ನ 4
ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ
ಅಲ್ಪಸಂಖ್ಯಾತರ ಓಲೈಕೆಗಾಗಿ ರೈತರ, ಜನಸಾಮಾನ್ಯರ ಭೂಮಿಯನ್ನು ವಕ್ಫ್ ಬೋರ್ಡ್ಗೆ ವರ್ಗಾವಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಹುನ್ನಾರದ ವಿರುದ್ಧ ರಾಜ್ಯದ್ಯಂತ ಹೋರಾಟ
ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ,
ಅದರಂತೆ ಭಾರತೀಯ ಜನತಾ ಪಾರ್ಟಿ ಸವದತ್ತಿ ಮಂಡಲ ವತಿಯಿಂದ ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಿಂದ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್ ಬೋರ್ಡ್ ರೈತರ ಜಮೀನು ಕಬಳಿಸುವುದರ ಜೊತೆಗೆ ದೇವಸ್ಥಾನ, ಮಠಮಾನ್ಯಗಳ ಭೂಮಿ ಕಸಿಯುತ್ತಿದೆ.
ಸಿಎಂ ಸಿದ್ದರಾಮಯ್ಯನವರು ನೋಟಿಸ್ ಹಿಂಪಡೆಯುವುದಾಗಿ ಹೇಳುತ್ತಿದ್ದಾರೆ. ಬರೀ ನೋಟಿಸ್ ವಾಪಸ್ ಪಡೆದರೆ ಸಾಲದು, ಗೆಜೆಟ್ ನೋಟಿಫಿಕೇಶನ್ ವಾಪಸ್ ಪಡೆಯಬೇಕು.
ರಾಜ್ಯಾದ್ಯಂತ ಪ್ರವಾಸ ಮಾಡಿ, ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿ, ಭೂಮಿ ಕಬಳಿಸಲು ಯತ್ನಿಸುತ್ತಿರುವ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಗಡಿಪಾರು ಮಾಡಬೇಕು ಎಂದು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವಿರೂಪಾಕ್ಷಪ್ಪ ಕರಬಸಪ್ಪ ಮಾಮನಿ, ಶ್ರೀಮತಿ ರತ್ನಾ ಆನಂದ ಮಾಮನಿ, ಜಗದೀಶ ಕೌಜಗೇರಿ, ಬಿ.ವ್ಹಿ.ಮಲಗೌಡರ, ಈರಣ್ಣಾ ಚಂದರಗಿ, ಸೋಮು ಹದ್ಲಿ, ಬಸವರಾಜ ಹನಸಿ, ವೈ.ವೈ.ಕಾಳಪ್ಪನವರ, ಜಗದೀಶ ಹನಸಿ, ನಿಂಗಪ್ಪ ಮೀಶಿ, ಗಿರೀಶ ಹಂಪಣ್ಣವರ, ಪುಂಡಲೀಕ ಮೇಟಿ, ಮಲ್ಲು ಬೀಳಗಿ, ಮಹೇಶ ತಿಗಡಿ, ಮಹಾದೇವ ಮುರಗೋಡ, ಬಸವರಾಜ ಇಂಚಲ, ಮಹಾಂತೇಶ ಪಂಚೆನ್ನವರ, ರಾಜು ಸಾಲಿಮಠ, ಮಹಾಂತೇಶ ಪಂಪನವರ, ರಾಜು ಲಮಾಣಿ, ಬಸವರಾಜ ಶಿಂತ್ರಿ, ರವಿ ಬ್ಯಾಹಟ್ಟಿ, ಅನಿಲ ಸುಣಗಾರ, ಸಂಗಪ್ಪ ಮಜ್ಜಗಿ, ಈಶ್ವರ ಮೇಲಗಿರಿ, ಉಮೇಶ ದಂಡಿನ, ಸುಭಾಸ ಗಿದ್ದಿಗೌಡ್ರ, ಗುರುಶಾಂತ ಚಂದರಗಿ, ಬಸವರಾಜ ಶಿಗ್ಗಾಂವಿ, ಸಂಜು ಉಡಕೇರಿ, ಶ್ರೀಕಾಂತ ಗೌಡಪ್ಪನವರ ಸೇರಿದಂತೆ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತಿರಿದ್ದರು