ವರದಿ ನಾರಾಯಣಸ್ವಾಮಿ ಸಿ.ಎಸ್
ಹೊಸಕೋಟೆ ಅ 31
ಗ್ರಾಮೀಣ ಭಾಗದಲ್ಲಿರುವ ಜನರಿಗೆ ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು ದೃಷ್ಟಿ ದೋಷ ಸರಿಪಡಿಸಲು ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಸಾಕಷ್ಟು ಜನರ ಬದುಕಿಗೆ ದಾರಿ ದೀಪವಾಗಿದೆ. ಇಂಥ ಸಾಮಾಜಿಕ ಕಳಕಳಿಯ ಕಾಠ್ಯಕ್ರಮಗಳು ಹೆಚ್ಚಾಗಿ ನಡೆಯ ಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕಬಿ.ವಿ.ಸತೀಶಗೌಡ ಹೇಳಿದರು.
ಸೂಲಿಬೆಲೆ ಸಹಕಾರ ಬ್ಯಾಂಕ್ ಆವರಣದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೇನು ಗೂಡು ರೂರಲ್ ಡೆವಲಪ್‌ಮೆಂಟ್ ಅಂಡ್ ಕಲ್ವರಲ್ ಟ್ರಸ್ಟ್ ವತಿಯಿಂದ ಇಂಥ ಸಾಮಾಜಿಕ ಕಾಳ ಜಿಯ ಕಾರ್ಯಕ್ರಮಗಳಲ್ಲಿ ನೇತ್ರ ತಪಾಸಣೆ ಶಿಬಿರ ಗಳು ಅತ್ಯುತ್ತಮ ಕಾವ್ಯವಾಗಿದೆ. ಹಳ್ಳಿಗಾಡಿ ಜನರಿಗೆ ದೂರದ ಪಟ್ಟಣ ಪ್ರದೇಶಗಳಿಗೆ ಹೋಗಿ ತಮ್ಮ ನೇತ್ರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿರುವು ದಿಲ್ಲ. ಇಂಥ ಜನರಿಗೆ ಹಳ್ಳಿಗಳ ಲ್ಲಿಯೇ ಶಿಬಿರಗಳನ್ನು ಹಮ್ಮಿಕೊಂಡು ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ನೀಡಿ ಕನ್ನಡಕಗಳನ್ನು ವಿತರಣೆ ಮಾಡುವುದು ಉತ್ತಮ ಕಾರವಾಗಿದೆ. ನೂರಾರು ಜನರ ಬದುಕಿನಲ್ಲಿ ಬೆಳಕು ಕಾಣಲು ಸಾಧ್ಯವಾಗಿದೆ ಎಂದರು.
ಸಹಕಾರ ಬ್ಯಾಂಕಿನ ಮೇಲ್ವಿಚಾರಕ ಎಸ್.ಕೆ. ವಸಂತಕುಮಾರ್ ಮಾತನಾಡಿ, ಟ್ರಸ್ಟ್ ವತಿಯಿಂದ ಇದುವರೆಗೂ ಅನೇಕ ಆರೋಗ್ಯ ಶಿಬಿರಗಳು, ನೇತ್ರ ದಾನ ಶಿಬಿರಗಳು ಹಮ್ಮಿಕೊಂಡಿದ್ದು, ಸುಮಾರು 100 ಜನರಿಗೆ ಕನ್ನಡಕ ವಿತರಣೆ ನೀಡಿದ್ದೇವೆ ಎಂದರು.
ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತ ನಾಡಿ, ಜೇನುಗೂಡು ಟ್ರಸ್ಟ್ ಮಹಾ ಪೋಷಕರಾದ ಬಿ.ವಿ.ಸತೀಶಗೌಡರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 150 ಜನರಿಗೆ ತಪಾಸಣೆ ನಡೆಸಲಾಗಿದ್ದು 8 ಜನರಿಗೆ ಉಚಿತವಾಗಿ ಅಪರೇಷನ್ ಮಾಡಲಾಗಿದೆ. 35 ಜನರಿಗೆ ಉಚಿತ ಕನ್ನಡಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್ ಮಾತನಾಡಿ, ಟ್ರಸ್ಟ್ ಸರಕಾರಿ ಶಾಲೆಗಳ ಸಬಲೀ ಕರಣ, ಆರೋಗ್ಯ ಹಾಗೂ ನೇತ್ರ ತಪಾಸಣೆ ಶಿಬಿರಗಳ ಸಾಮಾಜಿಕ ಕಾಠ್ಯಕ್ರಮಗಳನ್ನು ಆಯೋಜಿಸಿ ಅನು ಕೂಲ ಮಾಡುತ್ತಿದೆ ಎಂದರು
ಟ್ರಸ್ಟಿನ ನಿರ್ದೇಶಕ ದೇವಿದಾಸ್ ಸುಬ್ರಾಯ್ ಶೇರ್, ಯುವ ಮುಖಂಡ ಹಸಿಗಾಳ ಜಗದೀಶ್, ಸಿಇಒ ಶ್ರೀನಿವಾಸಮೂರ್ತಿ, ಸ್ಟುಡಿಯೊ ಆನಂದ್, ಸ್ಪಂದನ ಫೌಂಡೇಷನ್ ಸಂಚಾಲಕ ಬಿ.ಎನ್. ರಾಜೇಂದ್ರ ಪ್ರಸಾದ್, ಶಾಲಾ ಅಧ್ಯಕ್ಷ ಎಸ್. ವೈ.ನಾಗರಾಜ್ ಹಾಜರಿದ್ದರು.
ಗಾಂಜಾ ಪೀಡಿತ ಪ್ರದೇಶಗಳಲ್ಲಿ ಶ್ವಾನ ತಪಾಸಣೆ ಮೂಲಕ ಎಚ್ಚರಿಸಿದ ಪೊಲೀಸ್ ಇಲಾಖೆ
ಮೆಟ್ರೋ ವರದಿ ಮೈಸೂರು ನ.21 ನಗರದಲ್ಲಿ ಗಾಂಜಾ ಪೀಡಿತ ಹೆಚ್ಚಾದ ಕಾರಣ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಪೀಡಿತ ಪ್ರದೇಶಗಳಾದ ಸುನ್ನಿ ಚೌಕ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಶಾಂತಿ ನಗರ ಹಾಗೂ ಉದಯಗಿರಿ ಠಾಣಾ ಸರಹದ್ದಿನಲ್ಲಿ ಟೀ ಅಂಗಡಿ…