ಸಮಾಜದ ಪರಿಸ್ಥಿತಿ ಸರಿಪಡಿಸುವ ಹೊಣೆ ಶಿಕ್ಷಕರದ್ದು: ಕಿಮ್ಮನೆ
ಶಿವಮೊಗ್ಗ: ಇವತ್ತಿನ ವಾಸ್ತವ ಸಮಾಜದ ಪರಿಸ್ಥಿತಿ ಸರಿಪಡಿಸುವ ಗುರತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಈಸೂರು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಪ್ರವೀಣ್ ಮಹಿಷಿ ಅವರ ಸ್ನೇಹ ಬಳಗ ಹೊರತಂದ `ಅಮೃತಬಳ್ಳಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜ ಹೆಚ್ಚು ಹಾಳಾಗುತ್ತಿರುವುದು ವಿದ್ಯಾವಂತರಿಂದಲೇ. ಶಿಕ್ಷಣ ಪಡೆದವರಿಂದಲೇ ಜಾಸ್ತಿ ತಪ್ಪುಗಳು, ಅನಾಹುತಗಳು ಆಗುತ್ತಿರುವ ಈ ಸಂದರ್ಭದಲ್ಲಿ ಸಮಾಜವನ್ನು ಸುಸ್ಥಿತಿಗೆ ತರುವ ಹೊಣೆ ಶಿಕ್ಷಕರ ಮೇಲೆ ಹೆಚ್ಚಾಗಿದೆ ಎಂದರು.
ನಾವು ಇಂದು ಹೆಚ್ಚಾಗಿ ದೂರುತ್ತಿರುವುದು ದುಡಿವ ವರ್ಗದವರನ್ನು. ಆದರೆ, ಸಮಾಜ ಹಾಳಾಗುತ್ತಿರುವುದು ದುಡಿವ ವರ್ಗದ ಜನರಿಂದ ಅಲ್ಲ, ವಿದ್ಯಾವಂತರಿಂದ ಎಂಬುದನ್ನು ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನಾವು ನೋಡಿದ್ದೇವೆ. ಈ ಸಂದರ್ಭದಲ್ಲಿ ಆಗುತ್ತಿರುವ ಲೋಪಗಳನ್ನು ಯಾರು, ಯಾವಾಗ ಸರಿಪಡಿಸಬೇಕು ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಪಡೆದವರು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.
ಶಿಕ್ಷಣ ಸಮಾಜಕ್ಕೇ ಏನಾದರೂ ಕೊಡುತ್ತಿದೆಯಾ? ಸಮಾಜಕ್ಕೆ ಏನಾದ್ರೂ ಲಾಭ ಆಗ್ತಿದೆಯಾ? ನಾನು ಪಡೆದ ಶಿಕ್ಷಣ ನನಗೆ, ನನ್ನ ಹಾಗೂ ನನ್ನ ಕುಟುಂಬಕ್ಕೆ ಮಾತ್ರ ಲಾಭ ಆಗ್ತಾ ಇದೆ ಅನ್ನೋದಾದ್ರೆ, ಇಂಥ ಶಿಕ್ಷಣದಿಂದ ಯಾವುದೇ ಲಾಭ ಇಲ್ಲ. ಸಮಾಜಮುಖಿ ಆಗದ ಶಿಕ್ಷಣದಿಂದ ಐದು ಪೈಸೆ ಲಾಭ ಇಲ್ಲ ಎಂದು ಅವರು ವಿಶ್ಲೇಷಿಸಿದರು.
ಶಿಕ್ಷಣದಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಶಿಕ್ಷಣದಿಂದ ಮಾತ್ರ ಒಳ್ಳೆಯರಾಗ್ತಿವಿ ಅನ್ನೋರಿಗೆ ಬದ್ಧತೆ ಬೇಕು.
ಈ ಪ್ರಪಂಚವನ್ನು, ಸಮಾಜವನ್ನು ಸರಿದಾರಿಯಲ್ಲಿ ಕಟ್ಟಬೇಕು ಎಂಬ ಉದ್ದೇಶ ಹೊಂದಿರುವ ಶಿಕ್ಷಕರು ಕ್ರಿಯಾಶೀಲರಾಗಲು ಇದು ಸುಸಮಯ.
ದಿನೇದಿನೇ ಭಾರೀ ಅವ್ಯವಸ್ಥೆಯತ್ತ ಸಾಗುತ್ತಿರುವ ಸಮಾಜವನ್ನು ಸುಸ್ಥಿತಿಗೆ ತರುವ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ ಎಂದು ಕರೆ ನೀಡಿದರು.
`ಅಮೃತಬಳ್ಳಿ’ ಪುಸ್ತಕವನ್ನು ಬೆಂಗಳೂರಿನ ನಿವೃತ್ತ ಪ್ರಾಚಾರ್ಯರಾದ ಅನುರಾಧ ಬಿಡುಗಡೆ ಮಾಡಿದರು.
ಪ್ರವೀಣ್ ಮಹಿಷಿ, ಶೀಲಾ ಮಹಿಷಿ, ಉಪನ್ಯಾಸಕರಾದ ಡಾ. ಸಾಸ್ವೇಹಳ್ಳಿ ಸತೀಶ್, ಗೋಪಾಲಗೌಡ, ರವಿಕುಮಾರ್, ಅನಿತಾ ಜವಳಿ, ಗೋಪಾಲಕೃಷ್ಣ, ಶ್ವೇತಾ, ಶಿಲ್ಪಾ, ಶೃತಿ, ಪತ್ರಕರ್ತ ಹಾಲಸ್ವಾಮಿ ಆರ್.ಎಸ್. ಇನ್ನಿತರರು ಇದ್ದರು.
ವರದಿ : ಸಂತೋಷ್ ರಾಮ್
ಅಪ್ಪನ ನೀತಿ ನಮ್ಮ ಬದುಕಿನ ರೀತಿ
*”ಅಪ್ಪನ ನೀತಿ ನಮ್ಮ ಬದುಕಿನ ರೀತಿ “* ಅಪ್ಪ ಎನ್ನುವ ಪದ ಕೇವಲ ಎರಡಕ್ಷರದ ಪದವಲ್ಲ ಒಂದು ಮನೆ ಮನಸುಗಳ ಜೀವಾಳ… ಮಕ್ಕಳ ಭಾವಂತರಾಳ. ನನ್ನಪ್ಪ ನನ್ನಯ ಜೀವನದ ಮೊದಲ ದೇವರು, ದೇವರೆಂದರೆ ಸರ್ವವನ್ನು ಒಳಗೊಂಡಿರುವ ಸಂಪೂರ್ಣ ಆಕಾರ. ನನ್ನಪ್ಪ ನನ್ನ…