ವರದಿಗಾರರು ಆರತಿ ಗಿಳಿಯಾರು
ಆದಿ ಉಡುಪಿ ಅಂಬೇಡ್ಕರ್ ಭವನದಲ್ಲಿ ಧಮ್ಮ ದೀಕ್ಷಾ ದಿನಾಚರಣೆ (ಧರ್ಮ ಚಕ್ರ ಅನುವರ್ತನ ದಿನ).
ಉಡುಪಿ :ಅ.13
ಬುದ್ಧಿಸ್ಟ್ ಸೊಸೈಟಿ ಆಫ್ ಉಡುಪಿ “BSI” ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಭವನ,ಆದಿ ಉಡುಪಿಯಲ್ಲಿ ಧಮ್ಮ ದೀಕ್ಷಾ ದಿನದ (ಧಮ್ಮ ಚಕ್ಕ ಅನುವರ್ತನ ದಿನ) ವಾರ್ಷಿಕ ಕಾರ್ಯಕ್ರಮ ನಡೆಯಿತು ಬೌದ್ಧ ಭಿಕ್ಷು ಗಳಾದ ಪೂಜನೀಯ ಸುಗತಪಾಲ ಬಂತೇಜಿ ರವರು ಪಂಚಸೀಲಗಳ ಬೋಧನೆ ಮಾಡಿದರು, ನಂತರ ಬೌದ್ಧ ಧರ್ಮದ ಮಹತ್ವವನ್ನು ತಿಳಿಸಿಕೊಟ್ಟರು.
ನಮ್ಮ ದುಃಖಗಳಿಗೆ ಬೇರೆ ಯಾರೂ ಕಾರಣರಲ್ಲ, ನಮ್ಮ ಅಜ್ಞಾನವೇ ನಮ್ಮ ದುಃಖಗಳಿಗೆ ಕಾರಣ, ಅಸತ್ಯಗಳನ್ನು ತ್ಯಜಿಸಿ ಪಂಚಸೀಲಗಳನ್ನು ಪಾಲಿಸಿದಾಗ ನೋವು ಸಂಕಟ ಎಂಬ ದುಃಖದಿಂದ ನಮಗೆ ಬಿಡುಗಡೆ ಸಿಗುತ್ತದೆ ಇಂತಹ ನೈತಿಕತೆಯ ಜೀವನ ಮೌಲ್ಯವನ್ನು ಕ್ರಿಸ್ತ ಪೂರ್ವ 6 ನೇ ಶತಮಾನದಲ್ಲಿ ಭಗವಾನ್ ಬುದ್ಧರು ಭೋಧಿಸಿದ್ದಾರೆ, ಇಂತಹ ಬುದ್ಧ ಧಮ್ಮವನ್ನು ಸಾಮ್ರಾಟ್ ಅಶೋಕ್ ಚಕ್ರವರ್ತಿ ರವರಿಂದ ಅಂದು 30 ದೇಶಕ್ಕೆ ಬೌದ್ಧ ಧರ್ಮ ಹಬ್ಬಿತ್ತು ಇಂದು ದೇಶ ವಿದೇಶಗಳಲ್ಲಿ ಬೌದ್ಧ ಧಮ್ಮ ಪ್ರಸರಣವಾಗಿದೆ,
ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮವು ಇಂದು ಜಗತ್ತಿನ 40 ಕ್ಕೂ ಹೆಚ್ಚು ದೇಶಗಳಲ್ಲಿ ಬೌದ್ಧ ಧರ್ಮ ಅಸ್ತಿತ್ವವನ್ನು ಪಡೆದಿದೆ.
ಹರ್ಷ ವರ್ಧನರ ಕಾಲದಲ್ಲಿ 75 ದಿನಗಳ ಕಾಲ ನಡೆದ ಬೌದ್ಧ ಸಮ್ಮೇಳನದಲ್ಲಿ ಚೀನಾ ಯಾತ್ರಿಕರಾದ ಹ್ಯೂಯೆನ್ ತ್ಸಾಂಗ್ ಕೊನೆಯಲ್ಲಿ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು,..ಎಂದು ಬಂತೇಜಿರವರು ಹೇಳಿದರು.
ಕ್ರಿಸ್ತ ಶಕ 6 ನೇ ಶತಮಾನದಲ್ಲಿ ಬಂದಿರುವ ಹ್ಯೂಯೆನ್ ತ್ಸಾಂಗ್ ಹೇಳುತ್ತಾರೆ,…
ಈ ಬೌದ್ಧ ದೇಶವು ಶ್ರೀಮಂತ ದೇಶವಾಗಿತ್ತು, ಜನರು ಹಸಿವಿನಿಂದ ಬಳಲುತ್ತಿರಲಿಲ್ಲ, ಕಳ್ಳಕಾಕರು ಇರಲೇ ಇಲ್ಲ, ಇಲ್ಲಿನ ಮನೆಯ ಬಾಗಿಲುಗಳಿಗೆ ಬೀಗವನ್ನೇ ಹಾಕುತ್ತಿರಲಿಲ್ಲ, ಇಲ್ಲಿನ ಯಾವುದೇ ಜನರು ಮಧ್ಯ ಪಾನ ಮಾಡುತ್ತಿರಲಿಲ್ಲ, ಕುಡಿದು ಮಲಗಿದವರು ಈ ದೇಶದಲ್ಲಿ ಎಲ್ಲಿಯೂ ಕಾಣಲು ಸಿಗುತ್ತಿರಲಿಲ್ಲ,
ಇದಕ್ಕೆ ಮುಖ್ಯ ಕಾರಣ ಬೌದ್ಧ ಧರ್ಮದ ಪಂಚಸೀಲಗಳು,.ಎಂದು ತಿಳಿಸಿದರು,
ಮುಖ್ಯ ಭಾಷಣ ಮಾಡಿದ ಬೌದ್ಧ ಉಪಾಸಕರಾ ಸೋಮಪ್ಪ ಸಾರ್ ರವರು ಮಾತನಾಡುತ್ತಾ,
ಈ ದೇಶದಲ್ಲಿ ಚರಿತ್ರೆ ಸೇರಿದಂತ ಬೌದ್ಧ ಧರ್ಮವನ್ನು ಪುನರುತ್ಥಾನ ಗೊಳಿಸುವಲ್ಲಿ ಬಾಬಾ ಸಾಹೇಬರ ಪರಿಶ್ರಮ ಅವಿಸ್ಮರಣೀಯ,
ಪ್ರೀತಿ ಕರುಣೆ ಮೈತ್ರಿ ಬುದ್ಧ ಧಮ್ಮದ ಮೂಲ ತಳಹದಿ ಎಂದು ತಿಳಿಸಿದರು, ಬಾಬಾ ಸಾಹೇಬರು ಜನರಿಗೆ ನೈತಿಕ ಜೀವನ ಮೌಲ್ಯಗಳನ್ನು ತಿಳಿಸಿದರು ಎಂದರು,
BSI ಅಧ್ಯಕ್ಷರಾದ ಅಜಯ್ ಸಾರ್, ರವರು ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ,..
ಬಾಬಾ ಸಾಹೇಬರು ಶ್ರೀಲಂಕಾ ದಿಂದ ಬೌದ್ಧ ಸಾಹಿತ್ಯದ ಮೂಲ ತತ್ವಗಳನ್ನು ಬುದ್ಧ ಎಂಡ್ ಧಮ್ಮ ಗ್ರಂಥದಲ್ಲಿ ದಾಖಲಿಸಿ ಆಧುನಿಕ ಜನರಿಗೆ ಧಮ್ಮ ಸಿಂಚನ ಮಾಡಿದರು,
ಎಂದು ತಿಳಿಸಿದರು,
BSI ನ ಮಹಿಳಾ ವಿಭಾಗದ ಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು.
ಧಮ್ಮಾಚಾರಿಗಳಾದ S.R ಲಕ್ಷ್ಮಣ,ಮುರಳಿಧರ,ಪುಷ್ಪಾಕರ ಮತ್ತು ಶಂಭು ಮಾಸ್ಟರ್ ಬುದ್ಧ ವಂದನೆ ನೆರವೇರಿಸಿದರು. ದಕ್ಷಿಣ ಕನ್ನಡ ಬೌದ್ಧ ಮಹಾಸಭದ ಮತ BSI ಉಡುಪಿ ಬೌದ್ಧ
ಉಪಾಸಕರು ಉಪಾಸಕಿಯರು ಎಲ್ಲರೂ ಈ ಒಂದು ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.
ಬಂತೇಜಿ ಯವರು ಬೌದ್ಧ
ಧಮ್ಮದ ಮಹತ್ವವನ್ನು ಎಳೆ ಎಳೆಯಾಗಿ ತಿಳಿಸಿ ಹೇಳಿದರು
ಬುದ್ಧ ಧಮ್ಮ ಸಂಘಕ್ಕೆ ಶಕ್ತಿ ತುಂಬಿದರು,
ಜೈಭೀಮ್ ನಮೋ ಬುದ್ಧಾಯ
ಭಾರತೀಯ ಬೌದ್ಧ ಮಹಾಸಭ BSI ಉಡುಪಿ