ವರದಿ ನಾರಾಯಣಸ್ವಾಮಿ ಸಿ.ಎಸ್ ಚಿಕ್ಕಕೋಲಿಗ
ಬೀಳುವ ಹಂತದಲ್ಲಿದ್ದ ವಿದ್ಯುತ್ ಕಂಬವನ್ನು ಸರಿಪಡಿಸಿದ ಬೆಸ್ಕಾಂ ಸಿಬ್ಬಂದಿ
ಹೊಸಕೋಟೆ ಅ.11
ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬವನ್ನು ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ , ಎಂಬ ಶೀರ್ಷಿಕೆ ‘ ಮೆಟ್ರೋ ನ್ಯೂಸ್ ನಲ್ಲಿ ಅಕ್ಟೋಬರ್ 4 ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಬೆಸ್ಕಾಂ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಬಾಗಿದ ಕಂಬವನ್ನು ಬದಲಿಸಿ ಬೇರೆ ಕಂಬ ವನ್ನು ಅಳವಡಿಸಿದ್ದಾರೆ .
“ಮೆಟ್ರೋ ನ್ಯೂಸ್ 7 ಕನ್ನಡ” ವರದಿಯ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ. ನೆಲದಿಂದ ಮೂರು ಅಡಿ ಅಂತರದಲ್ಲಿ ಬಾಗಿದ ಕಂಬವನ್ನು ನೇರವಾಗಿ ನಿಲ್ಲಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಮೆಟ್ರೋ ನ್ಯೂಸ್ ವರದಿಯಿಂದ ರೈತರು ನಿರಾತಂಕವಾಗಿ ಕೃಷಿ ಚಟುವಟಿಕೆಗಳನ್ನು ಮಾಡುವಂತಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.