ವರದಿ ರುದ್ರಪ್ಪ. ಡೊಂಕನವರ್
ಬೆಳಗಾವಿ : ಅ.9
ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಭಕ್ತಿ ಭಾದಿಂದ ನವರಾತ್ರಿ ಉತ್ಸವ ನಡೆಯುತ್ತಿದೆ
ಗ್ರಾಮ ದೇವತೆಗಳಾದ ಶ್ರೀ ದುರ್ಗಮ್ಮ ಹಾಗೂ ಶ್ರೀ ಲಕ್ಷ್ಮೀದೇವಿಗೆ ಪ್ರತಿದಿನ ಈರಣ್ಣ, ಅಡ್ಲಿಮಠ್ ಅವರಿಂದ ಮಹಾ ಅಭಿಷೇಕ ನಡೆಯುತ್ತಿವೆ
ನವರಾತ್ರಿ ಹಬ್ಬ ಶಿವಶಕ್ತಿ ನವ ದುರ್ಗೆಯರನ್ನು ಅರಾಧಿಸುವ ಹಬ್ಬ ಪ್ರತಿ ಮನೆಗಳಲ್ಲಿ ಮಂದಿರಗಳಲ್ಲಿ ಘಟಸ್ಥಾಪನೆ ನಂದಾ ದೀಪ ಆರಾಧನೆ ನಡೆಯುತ್ತಿದೆ
ಅದೇ ರೀತಿ ನವರಾತ್ರಿ ಒಂಬತ್ತು ದಿನ ಆ ತಾಯಿ ಜಗನ್ಮಾತೆ ದೇವತೆಯನ್ನು ಪರಾಕ್ರಮವನ್ನು ತಿಳಿಸುವ ದೇವಿಯ ಪಾರಾಯಣ ಮತ್ತು ಆರಾಧನೆಯನ್ನ ಶಿವಶಕ್ತಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಹಾಗೂ ಬಸವಣ್ಣಯ್ಯ ಹಿರೇಮಠ್ ದಿವ್ಯ ಸಾನಿಧ್ಯದಲ್ಲಿ ಮಾಡಲಾಯಿತು
ಈ ಗ್ರಾಮದ ದಿನಕ್ಕೆ ಒಂದೊಂದು ಓಣಿಯ ಮಹಾಪ್ರಸಾದ ಜರುಗುವುದು ದೇವಿಯ ಭಜನೆ ಮತ್ತು ಭಂಡಾರ ಉತ್ಸವದಲ್ಲಿ ಭಕ್ತರು ಸಾವಿರಾರು ಸಂಖ್ಯೆ ಬರುವರು
ಗುರು ಹಿರಿಯರಾದ ಪ್ರಶಾಂತ ಜಕಾತಿ
ಬಸವರಾಜ ಜಕಾತಿ ಬಾಬು ಅಂಗಡಿ ಉಮೇಶ್ ಹಿರೇಮಠ ಶಿವಾನಂದ್ ಪಾಟೀಲ್ ಬಾಬಾ ಹೊಸಮನಿ ಬಸಲಿಂಗಪ್ಪ ಕಾಳಿ ಪೂಜ್ಯ ರಾದ ಶ್ರೀಶೈಲ ಬಡಿಗೇರ ಊರಿನ ಇನ್ನಿತರರು ಉಪಸ್ಥಿತರಿದ್ದರು