ವರದಿ ರಾಜು ಮಹೇಂದ್ರಕರ
ಬೆಳಗಾವಿ ಅ.8
ಜಿಲ್ಲೆಯ ಸವದತ್ತಿ ತಾಲೂಕ ಆಸ್ಪತ್ರೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ ನೇತೃತ್ವದಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ವಿಶ್ವಾಸ್ ವೈದ್ಯ ಚಾಲನೆ ನೀಡಿದರು.
ತಾಲೂಕ ಆಸ್ಪತ್ರೆಯಲ್ಲಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಂಗಳವಾರ ಆಯೋಜಿಸಲಾದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ, ಶಿಬಿರಕ್ಕೆ ಉದ್ಘಾಟಿಸಿ ಮಾತನಾಡಿದರು ಶಾಸಕ ವಿಶ್ವಾಸ್ ವೈದ್ಯ ಅಂದಾಜು 650 ಜನರಿಗೆ ಶಸ್ತ್ರಚಿಕಿತ್ಸೆ ಗುರಿ ಹೊಂದಿದ್ದೇವೆ.
ಬಡವರಿಗೆ ಶಿಬಿರದಿಂದ ನೆರವಾಗಲಿದೆ ತಾಲೂಕ ಎಲ್ಲ ವೈದ್ಯರು ಅಧಿಕಾರಿಗಳು ಅಚ್ಚುಕಟ್ಟಾಗಿ ಈ ಕಾರ್ಯನಿರ್ವಹಿಸುತ್ತಿದ್ದಾರೆ.
ಸವದತ್ತಿ ತಾಲೂಕು ಆಸ್ಪತ್ರೆಗೆ ಉತ್ತಮ ವೈದ್ಯರು ಸೇವೆ ದೊರೆತಿದೆ ಸಾರ್ವಜನಿಕರು ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು ಬಡವರ ಅನುಕೂಲಕ್ಕಾಗಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬಹುದೊಡ್ಡ ಕನಸಾಗಿದೆ ಮುಂಬರುವ ದಿನಗಳಲ್ಲಿ ಖಂಡಿತ ಈಡೇರಿಲಿದೆ ಎಂದು ಶಾಸಕ ವಿಶ್ವಾಸ ವೈದ್ಯರು ಹೇಳಿದರು
ಈ ಸಂದರ್ಭದಲ್ಲಿ ಎಂ ಎಂ ಮಲ್ಲನಗೌಡರ ವೈದ್ಯಾಧಿಕಾರಿ ಮಾತನಾಡಿ ವಯಸ್ಸು ಆದಂತೆ ಕಣ್ಣಿನ ಪೊರೆ ಬರುವುದು ಸಾಮಾನ್ಯವಾಗಿದೆ.
ಬಡವರಿಗೆ ಆರ್ಥಿಕ ಕಾರಣದಿಂದ ಕಣ್ಣಿನ ಪರೀಕ್ಷೆಗೆ ಹಿಂದೆಟು ಹಾಕುವ ಬಡವರಿಗೆ ಶಿಬಿರ ಬಹಳಷ್ಟು ಅನುಕೂಲಕರವಾಗಿದೆ ಚಿಕಿತ್ಸೆಯನ್ನು ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು
ಈ ಸಂಧರ್ಭ ವೈದ್ಯಾಧಿಕಾರಿಗಳು, ವೈದ್ಯರು, ಮುಖಂಡರು, ಯುವ ಮಿತ್ರರು ಉಪಸ್ಥಿತರಿದ್ದರು.