ವರದಿ: ಆರತಿ ಗಿಳಿಯಾರು ಉಡುಪಿ ಜಿಲ್ಲೆ
ಮುಂದುವರೆದ ಭಾಗ ೭
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಹುದ್ದೆಗಳಲ್ಲಿ 33% ಹುದ್ದೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೀಸಲಿಡುವುದು ಹಾಗೆಯೆ ಉಪ ಕಾರ್ಯದರ್ಶಿ ವೃಂದದ ಹುದ್ದೆಯನ್ನು ಜಂಟಿ ಕಾರ್ಯದರ್ಶಿ ಹಾಗೂ ಮರು ಪದನಾಮೀಕರಿಸಿ ಇತರ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಗೆ ಸಮನಾದ ವೇತನ ಶ್ರೇಣಿಯನ್ನು ನಿಗದಿಪಡಿಸುವುದು, ಅಲ್ಲದೆ ಉಪ ಕಾರ್ಯದರ್ಶಿ ವೃಂದದಿಂದ ಉಪ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿ ನೀಡಲು ಇರುವ ಅರ್ಹತಾದಾಯಕ ಸೇವೆಯನ್ನು ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಉಪ ಕಾರ್ಯದರ್ಶಿ ವೃಂದ ಗಳಲ್ಲಿ ಸಲ್ಲಿಸಿದ ಒಟ್ಟು ಸೇವೆ 12 ವರ್ಷಗಳಿಂದ 06 ವರ್ಷಗಳವರೆಗೆ ಇಳಿಸುವುದು ಜೊತೆಗೆ ಎಂಟು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳಲ್ಲಿ ಇರುವಂತೆ ಉಪ ಕಾರ್ಯದರ್ಶಿ ಮತ್ತು ಸಹಾಯಕ ಕಾರ್ಯದರ್ಶಿ ಹುದ್ದೆಗಳನ್ನು ಕಾರ್ಯ ಒತ್ತಡದ ಕಾರಣ ಎಲ್ಲ ಜಿಲ್ಲೆಗಳಲ್ಲಿಯೂ ತಲಾ 02 ಹುದ್ದೆಗಳ ಸೃಜನೇ ಈ ಹಿಂದಿನ ಡಿ ಆರ್ ಡಿ ಎ ಹುದ್ದೆಯಾದ ಯೋಜನಾಧಿಕಾರಿ -1 ಹುದ್ದೆಯನ್ನು ಕಾರ್ಯನಿರ್ವಾಹಕ ವೃಂದಕ್ಕೆ ಸೇರಿಸುವುದು ಮತ್ತು ಈ ಹಿಂದೆ ಅಸ್ತಿತ್ವದಲ್ಲಿದ್ದ ಪರಿಷತ್ ಕಾರ್ಯದರ್ಶಿ ಹುದ್ದೆಯನ್ನು ಉಪ ಕಾರ್ಯದರ್ಶಿ ವೃಂದಕ್ಕೆ ಪುನಃ ಮಂಜೂರಾತಿ ಮಾಡುವುದು ಜೊತೆಗೆ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯ ವೇತನ ಶ್ರೇಣಿಯನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 155 ರನ್ವಯ ಅಸಿಸ್ಟೆಂಟ್ ಕಮಿಷನರ್ ಹುದ್ದೆಯ ವೇತನ ಶ್ರೇಣಿ ಗೆ ಏರಿಸುವುದು ಅಲ್ಲದೆ ದಿನಾಂಕ 1-1- 2013ರಿಂದ ಪೂರ್ವನ್ವಯವಾಗುವಂತೆ ರಾಜ್ಯಮಟ್ಟದ ಕಚೇರಿಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಚೇರಿಗಳಲ್ಲಿ ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದದ ಹುದ್ದೆಗಳಿಗೆ ಸಮಾನದ 371 (ಜೆ ) ರನ್ವಯ ಗುಂಪು ‘ ಡಿ ‘ ಮತ್ತು ‘ಸಿ ‘ಗೆ ಒದಗಿಸುವಂತೆ, ‘ಎ ‘ ಮತ್ತು ‘ಬಿ ‘ ವೃಂದ ಹುದ್ದೆಗಳಿಗೆ 8% ಮೀಸಲಾತಿಯನ್ನು ಒದಗಿಸುವುದರ ಜೊತೆಗೆ ಸಹಾಯಕ ನಿರ್ದೇಶಕರು (ಗ್ರಾಉ ) ಮತ್ತು ಸಹಾಯಕ ನಿರ್ದೇಶಕರು ( ಪಂ. ರಾಜ್) ಹುದ್ದೆಗಳನ್ನು ಕ್ರಮವಾಗಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ( ಅಭಿವೃದ್ಧಿ )ಮತ್ತು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ( ಆಡಳಿತ) ಎಂದು ಮರು ಪದನಾಮಿಕರಿಸುವುದು ಅಲ್ಲದೆ 2010ರಲ್ಲಿ ಏಕಕಾಲದಲ್ಲಿ 2500 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇರ ನೇಮಕಾತಿಯಿಂದಾಗಿ ಸುಮಾರು 35 ರಿಂದ 38 ವರ್ಷಗಳ ಸೇವಾವಧಿಯ ಹೊಂದಿರುವ ಯುವ ಅಧಿಕಾರಿಗಳಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಸಹಾಯಕ ನಿರ್ದೇಶಕರು ವೃಂದದಿಂದ ಕಾರ್ಯನಿರ್ವಾಹಕ ಅಧಿಕಾರಿ ವೃಂದದ ಹುದ್ದೆಗೆ ಮುಂಬಡ್ತಿ ನೀಡಲು ಪ್ರಸ್ತುತ ಅನುಸರಿಸುತ್ತಿರುವ ಮುಂಬಡ್ತಿ ನೇರ ನೇಮಕಾತಿ 60 : 40 ಯನ್ನು 80:20ಕ್ಕೆ ಹೆಚ್ಚಿಸಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸುವುದು ಹಾಗೂ ವಿವಿಧ ವೃಂದಗಳಲ್ಲಿರುವ ಅನ್ಯ ಇಲಾಖೆ ಅಧಿಕಾರಿಗಳನ್ನು ಅವರ ಮಾತ್ರೆ ಇಲಾಖೆಗೆ ಹಿಂದಿರುಗಿಸಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಸರಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಉಡುಪಿ ಜಿಲ್ಲಾ ಪಂಚಾಯತ್ ರಜತಾದ್ರಿ ಇದರ ಎದುರುಗಡೆ ಅನಿರ್ದಿಷ್ಟ ಪ್ರತಿಭಟನೆಯನ್ನು ಕೈಗೊಂಡಿದ್ದು ನಮ್ಮ ಬೇಡಿಕೆ ಈಡುತ್ತಿರುವವರೆಗೂ ನಾವು ಮುಷ್ಕರವನ್ನು ಹಿಂತೆ ತೆಗೆದುಕೊಳ್ಳುವುದಿಲ್ಲ ಎಂದು ಈ ಮೂಲಕ ತಿಳಿಸಿದ್ದಾರೆ.
ವರದಿ: ಆರತಿ ಗಿಳಿಯಾರು ಉಡುಪಿ ಜಿಲ್ಲೆ
ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ
ವರದಿ : ಲೋಕೇಶ್ ನಾಯ್ಕ .ಭಟ್ಕಳ. ಭಟ್ಕಳ .ನವೆಂಬರ್ 24.ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ…