ವರದಿ :ಲೋಕೇಶ್ ನಾಯ್ಕ್ ಭಟ್ಕಳ.
ಭಟ್ಕಳ ಅಕ್ಟೋಬರ್.07..
ಉತ್ತರಕನ್ನಡ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಚೆನೈನ ಹಸಿರು ಪೀಠದಲ್ಲಿ ದಾವೆ ಹೂಡಿದ ಬಿಜೆಪಿ ಮುಖಂಡರು.
ಬಿಜೆಪಿಗರೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ್.
ಜಿಲ್ಲೆಯಲ್ಲಿ ಮರಳು ಅಭಾವ ಸಮಸ್ಯೆಗೆ ಬಿಜೆಪಿಯೇ ನೇರ ಹೊಣೆ ಎಂದು ಹೊನ್ನಾವರ ಮತ್ತು ಭಟ್ಕಳ ಬ್ಲಾಕ್ ಕಾಂಗ್ರೆಸ್ ಆರೋಪ.
ಜಿಲ್ಲೆಯಲ್ಲಿ ಮರಳು ಅಭಾವದ ಸಮಸ್ಯೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತರಕನ್ನಡ ಜಿಲ್ಲೆಯಲ್ಲಿ ಮರಳು ಸಮಸ್ಯೆ ಉಲ್ಬಣವಾಗಲು ಕಾಂಗ್ರೆಸ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾರಣವೆಂಬಂತೆ ಬಿಜೆಪಿ ಬಿಂಬಿಸುತ್ತಿದೆ.ಮಂಕಾಳ ವೈದ್ಯ ಸಚಿವರಾದ ನಂತರ ಜಿಲ್ಲೆಯಲ್ಲಿ ಯಾವುದೇ ನಿರ್ಮಾಣ ಕಾಮಗಾರಿಗಳಿಗೆ ಮರಳು ಅಭಾವ ವಾಗದಂತೆ ನೋಡಿಕೊಂಡಿದ್ದಾರೆ.
ಅಧಿಕೃತವಾಗಿ ಮರಳು ಗಣಿಗಾರಿಕೆಗೆ ಪಾಸ್ ವಿತರಣೆ ಮಾಡಿದ್ದಾರೆ. ಆದರೆ ಈ ವಿಚಾರವನ್ನು ಹೊನ್ನಾವರ ಕುಮಟಾ ವಿಧಾಸಭಾ ಕ್ಷೇತ್ರದ ಶಾಸಕರಾದ ದಿನಕರ್ ಶೆಟ್ಟಿಯವರು ಅಧಿವೇಶನದಲ್ಲಿ ಚರ್ಚೆ ನಡೆಸಿ ತನಿಖೆಗೆ ಆಗ್ರಹಿಸಿದ್ದರು. ಬಿಜೆಪಿಯಲ್ಲಿ ಗುರುತಿಸಿಕೊಂಡ ಕೆಲವರು ಮರಳು ಗಣಿಗಾರಿಕೆಯ ವಿಚಾರವನ್ನು ಚೆನ್ನೈನ ಹಸಿರು ಪೀಠಕ್ಕೆ ತೆಗೆದುಕೊಂಡು ಹೋಗಿದ್ದಾರೆ ಆದರೆ ಬಿಜೆಪಿಯ ಹುದ್ದೆ ಅಲಂಕ್ರಿತ ಮುಖಂಡರುಗಳೇ ಕೆಲವು ವರ್ಷಗಳಿಂದ ಮರಳು ಗಣಿಗಾರಿಕೆ ನಡೆಸಲು ಪಾಸ್ ನೀಡುವಂತೆ ಅರ್ಜಿ ಹಾಕುತ್ತಾ ಬಂದಿದ್ದಾರೆ. ಮತ್ತು ಅವರೇ ಮರಳು ತೆಗೆಯದಂತೆ ಚೆನೈನ ಹಸಿರು ನ್ಯಾಯಾಲಯದಲ್ಲಿ ದಾವೆ ಹಾಕುತ್ತಾರೆ.ಇದು ವಿಪರ್ಯಾಸ.
ಒಟ್ಟಿನಲ್ಲಿ ಅರಾಜಕತೆ ಸೃಷ್ಠಿಸಿ ಜನರನ್ನು ದಂಗೆ ಏಳುವಂತೆ ಮಾಡುವ ದುರುದ್ದೇಶವನ್ನು ಬಿಜೆಪಿ ಹೊಂದಿದ್ದು, ಆದಷ್ಟು ಬೇಗ ಇವರು ತಮ್ಮತಪ್ಪನ್ನು ತಿದ್ದಿಕೊಂಡು ಹಸಿರು ಪೀಠದಲ್ಲಿ ಹೂಡಿರುವ ದಾವೆಯನ್ನು ಹಿಂಪಡೆದರೆ
ಮಾತ್ರ .ಸಾರ್ವಜನಿಕರಿಗೆ ನಿರ್ಮಾಣದ ಹಲವಾರು ಕಾಮಗಾರಿ ಕಾರ್ಯಕ್ಕೆ, ಅವಲಂಬಿತ ಉದ್ಯೋಗಕ್ಕೆ, ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಮರಳು ಅತ್ಯಾವಶ್ಯಕ ಅದನ್ನು ಸಿಗುವಂತೆ ಮಾಡಬಹುದಾಗಿದೆ ಎಂದರು.
ಭಟ್ಕಳ ಬ್ಲಾಕ್ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಮಾತನಾಡಿ ಕಳೆದ ಏಪ್ರಿಲ್ ನಿಂದ ಮರಳು ಸ್ಥಗಿತಕ್ಕೆ ಕಾಂಗ್ರೆಸ್ ಸರಕಾರ ಮತ್ತು ಸಚಿವರು ಕಾರಣ ಎಂದು ಬಿಜೆಪಿ ಯವರು ಜಿಲ್ಲೆಯಾದ್ಯoತ ಸುಳ್ಳು ಹೇಳುತ್ತಿದ್ದಾರೆ.
ಗಣಿ ಇಲಾಖೆ ಮರಳು ಪರವಾನಿಗೆ ಮತ್ತು ಮರಳು ಗಾರಿಕೆ ಸ್ಥಗಿತ ಗೊಳಿಸುವಂತೆ ಬಿಜೆಪಿಗರು ಚೆನ್ನೈ ಹಸಿರು ಪೀಠದಲ್ಲಿ ದೂರು ದಾಖಲಿಸಿದ್ದನ್ನು ಕೂಡಲೇ ಹಿಂಪಡೆಯಲಿ.ಸರಕಾರ ಮತ್ತು ಸಚಿವರನ್ನು ರೇತಿ ವಿಚಾರದಲ್ಲಿ ಆರೂಪಿಸದಿರಿ. ಸಚಿವರು ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡುತ್ತಾರೆ.ಉಳಿದ ಸಮಯದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾರೆ.
ಆದರೆ ಇನ್ನಾದರೂ ಬಿಜೆಪಿ ಯವರು ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ನೀಡುವ ಮನಸ್ಥಿತಿಯನ್ನು ಬದಲಾಯಿಸಿ ಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಭಟ್ಕಳ ಕಿಸಾನ್ ಸಮೀತಿ ಅಧ್ಯಕ್ಷ ನಾರಾಯಣ ನಾಯ್ಕ, ವಿಷ್ಣು ದೇವಾಡಿಗ.ಮಂಜುನಾಥ ನಾಯ್ಕ ಮತ್ತಿತರರು ಇದ್ದರು