ಮೂಳೆ ಜಾಸ್ತಿಯಿದೆ ಎಂದ ಗ್ರಾಹಕನ ಮೇಲೆ ದಾಳಿ : ಮಾಲೀಕನ ಮಗ ಅಪ್ರಾಪ್ತ ಪೊಲೀಸ್ ವಶಕ್ಕೆ
ಶಿವಮೊಗ್ಗ ಜೂ. 3:
ನನ್ನ ಮೇಲೆ ತಂದೆಗೆ ದೂರು ನೀಡುತ್ತೀಯಾ ಎಂದು ಮಾಂಸ ಪಡೆದಿದ್ದ ಗ್ರಾಹಕನ ಮೇಲೆ ಅಪ್ರಾಪ್ತ ಯುವಕ ಹತವಾದ ಆಯುಧದಿಂದ ಧಾಳಿ ಮಾಡಿದ್ದಾನೆ
ಮಾಂಸಕ್ಕಿಂತ ಮೂಳೆಗಳೇ ಜಾಸ್ತಿಯಿದೆ ಎಂದು ದೂರಿದ ಗ್ರಾಹಕನ ಮೇಲೆ ಮಾಂಸದಂಗಡಿಯಲ್ಲಿದ್ದ ಅಪ್ರಾಪ್ತನೋರ್ವ, ಹರಿತವಾದ ಆಯುಧದಿಂದ ದಾಳಿ ನಡೆಸಿ ಗಾಯಗೊಳಿಸಿದ ಘಟನೆ, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮಲ್ಲೇಶಪ್ಪ (45) ಗಾಯಗೊಂಡ ಗ್ರಾಹಕ ಎಂದು ಗುರುತಿಸಲಾಗಿದೆ. ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿತ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಂಸದ ಅಂಗಡಿಗೆ ಆಗಮಿಸಿದ ಗ್ರಾಹಕ ಮಲ್ಲೇಶಪ್ಪ ಅವರು, ಅಂಗಡಿಯಲ್ಲಿದ್ದ ಅಪ್ರಾಪ್ತನಿಂದ ಮಾಂಸ ಖರೀದಿಸಿದ್ದರು.
ಪ್ಯಾಕ್ ಮಾಡಿಕೊಟ್ಟ ಮಾಂಸದಲ್ಲಿ ಮೂಳೆಗಳೇ ಹೆಚ್ಚಿರುವುದು ಕಂಡುಬಂದಿದೆ ಈ ಬಗ್ಗೆ ಗ್ರಾಹಕನು ಆರೋಪಿಯ ತಂದೆಯ ಮೊಬೈಲ್ ಫೋನ್ ಗೆ ಕರೆ ಮಾಡಿ ದೂರಿದ್ದರು.
ಇದರಿಂದ ಆಕ್ರೋಶಗೊಂಡ ಆರೋಪಿಯು, ಅಂಗಡಿಯಲ್ಲಿದ್ದ ಹರಿತವಾದ ಆಯುಧದಿಂದ ಗ್ರಾಹಕನ ಮೇಲೆ ದಾಳಿ ನಡೆಸಿದ್ದಾನೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
ವರದಿ : ಮೆಟ್ರೋ ನ್ಯೂಸ್
ಅಪ್ಪನ ನೀತಿ ನಮ್ಮ ಬದುಕಿನ ರೀತಿ
*”ಅಪ್ಪನ ನೀತಿ ನಮ್ಮ ಬದುಕಿನ ರೀತಿ “* ಅಪ್ಪ ಎನ್ನುವ ಪದ ಕೇವಲ ಎರಡಕ್ಷರದ ಪದವಲ್ಲ ಒಂದು ಮನೆ ಮನಸುಗಳ ಜೀವಾಳ… ಮಕ್ಕಳ ಭಾವಂತರಾಳ. ನನ್ನಪ್ಪ ನನ್ನಯ ಜೀವನದ ಮೊದಲ ದೇವರು, ದೇವರೆಂದರೆ ಸರ್ವವನ್ನು ಒಳಗೊಂಡಿರುವ ಸಂಪೂರ್ಣ ಆಕಾರ. ನನ್ನಪ್ಪ ನನ್ನ…