ಬ್ರಹ್ಮಾವರ ತಾಲ್ಲೂಕು ಆಡಳಿತ ದಿಂದ ಅಂಗನವಾಡಿ ಕೇಂದ್ರಗಳಿಗೆ ಬೇಟಿನೀಡಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ತಾಲೂಕು ದಂಡಾಧಿಕಾರಿಗಳು
ಉಡುಪಿ : ಉಡುಪಿ ಜಿಲ್ಲಾದ್ಯಂತ ಭಾರಿ ಮಳೆಯಿಂದಾಗಿ ಬ್ರಾಹ್ಮವರ ತಾಲೂಕಿನ ಹೆಚ್ಚಿನ ಅಂಗನವಾಡಿಗಳ ಒಳಗೆ ನೀರು ನುಗ್ಗಿ ತುಂಬಾ ತೊಂದರೆಯಾಗಿದ್ದಿತ್ತು ಆದಕಾರಣ ನೀರು ನುಗ್ಗಿ ತೊಂದರೆಯಾದಂತಹ ಅಂಗನವಾಡಿಗಳ ಈಗಿನ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯದ ಹಿತ ದೃಷ್ಟಿಯ ಬಗ್ಗೆ ಕಾಳಜಿವಹಿಸಿ ಬ್ರಾಹ್ಮವರ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಕಾಂತ್ ಹೆಗ್ಡೆ ಇವರು ತನ್ನ ವ್ಯಾಪ್ತಿಗೆ ಬರುವ ಕೆಲವೊಂದು ಅಂಗನವಾಡಿ ಕೇಂದ್ರಗಳಾದ ಕಾವಡಿ, ಅಚ್ಲಾಡಿ, ಹನೆಹಳ್ಳಿ, ಯಡ್ತಾಡಿ, ಹಂದಾಡಿ ಅಂಗನವಾಡಿ ಕೇಂದ್ರಗಳಿಗೆ ಗಾಳಿ ಮಳೆ ಇದ್ದರು ಯಾವುದನ್ನು ಲೆಕ್ಕಿಸದೆ ಭೇಟಿ ಕೊಟ್ಟರು. ಅಂಗನವಾಡಿ ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಕಟ್ಟಡಗಳು ಹಾಗೂ ಸ್ವಚ್ಛತೆಯ ಬಗ್ಗೆ ಪರಿಶೀಲನೆ ಮಾಡಿದರು. ಅಲ್ಲದೆ ಅಲ್ಲಿನ ಆಹಾರ ಶೇಖರಣೆ ಘಟಕದ ಕೋಣೆಗಳು ಹಾಗೂ ಶೇಖರಣೆ ಮಾಡಿದ ಆಹಾರಗಳನ್ನು ಪರಿಶೀಲನೆ ಮಾಡಿದರು. ಅಲ್ಲದೆ ಜಿಲ್ಲಾಧ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು ಅಂಗನವಾಡಿಯ ಸುತ್ತಮುತ್ತ ನೀರು ನಿಂತಿದೆಯೇ ಎಂದು ಪರಿಶೀಲನೆ ಸಹ ಮಾಡಿರುತ್ತಾರೆ. ಮಕ್ಕಳಿಗೆ ಯಾವುದೇ ಆರೋಗ್ಯದ ಸಮಸ್ಯೆಗಳು ಉದ್ಭವಆಗಿ ತೊಂದರೆಗಳು ಆಗಬಾರದು, ಏನಾದರೂ ತೊಂದರೆಯಾದಲ್ಲಿ ಕೂಡಲೇ ತಾಲೂಕು ಆಡಳಿತದ ಗಮನಕ್ಕೆ ತರಬೇಕು.ಅಂತಹ ಸಮಸ್ಯೆಗೆ ಕೂಡಲೇ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಅಲ್ಲಿನ ಅಂಗನವಾಡಿ ಶಿಕ್ಷಕಿಯರಿಗೆ ಸೂಚಿಸಿರುತ್ತಾರೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸ್ಥಳ ಬೇಟಿ ನೀಡಿರುವ ಬ್ರಾಹ್ಮವರ ತಾಲೂಕು ಆಡಳಿತಕ್ಕೆ ಅಲ್ಲಿನ ಸ್ಥಳೀಯ ಸಾರ್ವಜನಿಕರು ಹಾಗೂ ಪೋಷಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ವರದಿ ಆರತಿ ಗಿಳಿಯಾರು.
ಉಪಚುನಾವಣೆ ಗೆಲುವಿನ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ವರದಿ: ಲೋಕೇಶ್ ನಾಯ್ಕ .ಭಟ್ಕಳ ಭಟ್ಕಳ : ನವೆಂಬರ್ 23ರಾಜ್ಯದಲ್ಲಿ ನಡೆದ ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಭರ್ಜರಿ ಜಯ. ಭಟ್ಕಳದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಮ್ಸುದ್ದೀನ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ . ಈ ಸಂದರ್ಭದಲ್ಲಿ…